More

    ಈ ರಾಶಿಯವರಿಗೆ ಇಂದು ಬಾಳಸಂಗಾತಿಯೊಂದಿಗೆ ತಾಳ್ಮೆ ಇರಲಿ; ನಿತ್ಯಭವಿಷ್ಯ

    ಮೇಷ: ಸಾರ್ವಜನಿಕವಾಗಿ ಮನ್ನಣೆ. ಹೊರಜಗತ್ತಿನ ಕಗ್ಗಂಟನ್ನು ಬಿಡಿಸುವ ಶಕ್ತಿ ನಿಮ್ಮಲ್ಲಿದೆ. ಕುಟುಂಬದೊಂದಿಗೆ ವಿಹಾರ. ಶುಭಸಂಖ್ಯೆ: 1

    ವೃಷಭ: ಅನಾರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ. ಬಾಳಸಂಗಾತಿಯೊಂದಿಗೆ ತಾಳ್ಮೆ ಇರಲಿ. ಆಸ್ತಿ ವಿವಾದದ ಬಗ್ಗೆ ದುಡುಕಬೇಡಿ ಶುಭಸಂಖ್ಯೆ: 7

    ಮಿಥುನ: ಮಕ್ಕಳ ಹೊಸ ವಿಚಾರಕ್ಕೆ ಪೋ›ತ್ಸಾಹ ನೀಡಿ. ಕುಟುಂಬದಿಂದ ಅನವಶ್ಯಕ ಧನವ್ಯಯ. ಹಳೆಯ ಸ್ನೇಹಿತನ ಮನೆಗೆ ಭೇಟಿ. ಶುಭಸಂಖ್ಯೆ: 3

    ಕಟಕ: ನಿಮ್ಮ ದುಡುಕು ಸ್ವಭಾವವನ್ನು ನಿಯಂತ್ರಿಸಿಕೊಳ್ಳಿ. ಗುರುಹಿರಿಯರ ಆಶೀರ್ವಾದ. ಪ್ರೇಕ್ಷಣೀಯ ಸ್ಥಳಕ್ಕೆ ಪ್ರವಾಸ ಸಾಧ್ಯತೆ. ಶುಭಸಂಖ್ಯೆ:4

    ಸಿಂಹ: ಬದಲಾವಣೆಗೆ ಒಗ್ಗಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಿ. ಹಲವು ರೀತಿಯ ಕಾರ್ಯಒತ್ತಡ. ಅನಾರೋಗ್ಯ ಉಂಟಾದೀತು. ಶುಭಸಂಖ್ಯೆ: 3

    ಕನ್ಯಾ: ಹೊಸ ವಸ್ತು ಖರೀದಿಸುವಿರಿ. ಮೋಸ ಹೋಗುವ ಸಾಧ್ಯತೆಗಳಿವೆ. ಸಾರ್ವಜನಿಕ ಕ್ಷೇತ್ರದಲ್ಲಿ ತಾಳ್ಮೆಯಿಂದ ವರ್ತಿಸಿ. ಶುಭಸಂಖ್ಯೆ: 2

    ತುಲಾ: ನಿರೀಕ್ಷಿತ ಕಾರ್ಯ ಇಂದು ಸಂಪನ್ನವಾಗಲಿದೆ. ಮನೆಯಲ್ಲಿ ಶುಭಕಾರ್ಯದ ಸಂಭ್ರಮ. ವೈದ್ಯರ ಸಲಹೆಯನ್ನು ಪಾಲಿಸಿ. ಶುಭಸಂಖ್ಯೆ: 6

    ವೃಶ್ಚಿಕ: ನಿಮ್ಮ ಸಮಸ್ಯೆಗಳಿಗೆ ಹಿರಿಯರಿಂದ ಪರಿಹಾರ. ಬೇರೆಯವರ ಅಭಿಪ್ರಾಯಗಳಿಗೆ ಬೆಲೆ ಕೊಡಿ. ದಿನಾಂತ್ಯದಲ್ಲಿ ಶುಭವಾರ್ತೆ. ಶುಭಸಂಖ್ಯೆ: 3

    ಧನುಸ್ಸು: ಸಾರ್ವಜನಿಕ ರಂಗದಲ್ಲಿ ಆತ್ಮವಿಶ್ವಾಸದಿಂದ ವರ್ತಿಸಿ. ಕಲಾವಿದರಿಗೆ ಅವಕಾಶ. ಅನಿರೀಕ್ಷಿತ ಧನಲಾಭದಿಂದ ಸಂತಸ. ಶುಭಸಂಖ್ಯೆ: 5

    ಮಕರ: ನಿಮ್ಮ ಹಲವು ಕೆಲಸಗಳಲ್ಲಿ ವಿಫಲತೆ. ಜವಾಬ್ದಾರಿ ನಿರ್ವಹಿಸುವಲ್ಲಿ ಗೊಂದಲ ಉಂಟಾದೀತು. ದೊಡ್ಡ ಮೊತ್ತದ ನಷ್ಟ ಸಾಧ್ಯತೆ. ಶುಭಸಂಖ್ಯೆ: 7

    ಕುಂಭ: ಪ್ರಾಮಾಣಿಕತೆಯ ಬಗ್ಗೆ ಸ್ನೇಹಿತರಿಂದ ಪ್ರಶಂಸೆ. ಪತ್ನಿಯೊಂದಿಗೆ ವಿಹಾರ. ರಾಜಕೀಯದಲ್ಲಿ ಯಶಸ್ಸು ನಿಮ್ಮದೇ. ಶುಭಸಂಖ್ಯೆ: 9

    ಮೀನ: ಮನಸ್ಸಿನ ಸಮಾಧಾನಕ್ಕಾಗಿ ಬಡವರಿಗೆ ಸಹಾಯ ಮಾಡಿ. ಕುಟುಂಬದೊಂದಿಗೆ ದೇವಾಲಯಕ್ಕೆ ಭೇಟಿ. ಮನೆಯಲ್ಲಿ ಸಡಗರ. ಶುಭಸಂಖ್ಯೆ: 6

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts