More

    ನಿತ್ಯ ಭವಿಷ್ಯ| ಅದೃಷ್ಟ ಈ ರಾಶಿಯವರ ಪರವಾಗಿದೆ…

    ಮೇಷ: ಹಿರಿಯರ ಜತೆಗೆ ಜಗಳವಾದರೆ ಸುಮ್ಮನಿದ್ದುಬಿಡಿ. ನಯವಿನಯದಿಂದಲೇ ಗೆಲ್ಲಲು ಪ್ರಯತ್ನಿಸಿ. ಲಾಭ ಸಾಧ್ಯ. ಶುಭಸಂಖ್ಯೆ: 1

    ವೃಷಭ: ಅಧಿಕಾರದಲ್ಲಿರುವ ಸಜ್ಜನರಿಂದ ನೆರವು ಸಿಗಲು ಸಾಧ್ಯವಿದೆ. ಮನದ ಮೂಲೆಯ ಚಿಂತೆಗಳಿಗೂ ಪರಿಹಾರ ಲಭ್ಯ. ಶುಭಸಂಖ್ಯೆ: 4

    ಮಿಥುನ: ಕೆಲಸಕಾರ್ಯಗಳಿಂದ ಇತರರನ್ನು ಕುಡ ನೀವು ಉತ್ತೇಜಿಸಲಿದ್ದೀರಿ. ಇದು ನಾಯಕತ್ವಕ್ಕೆ ದಾರಿ ಮಾಡಿಕೊಡಲಿದೆ. ಶುಭಸಂಖ್ಯೆ: 7

    ಕಟಕ: ನೀವು ಅಭಿಮಾನಪಡುವಂತಹ ಸಂದರ್ಭವನ್ನು ಮಕ್ಕಳು ಸಂಯೋಜಿಸಬಲ್ಲರು. ಭಕ್ತಿಯಿಂದ ಶಿವಾಷ್ಟಕ ಪಠಿಸಿ. ಶುಭಸಂಖ್ಯೆ: 6

    ಸಿಂಹ: ಕರ್ತವ್ಯದಲ್ಲಿ ಮೇಲಧಿಕಾರಿಗಳಿಂದ ವಿಶೇಷ ನಿರೀಕ್ಷೆಗಳು ಇದ್ದರೂ ಕ್ಲಿಷ್ಟ ಕಾರ್ಯಗಳನ್ನು ಪೂರೈಸಿಬಿಡಿ. ಬಡ್ತಿ ಸಿಗಲಿದೆ. ಶುಭಸಂಖ್ಯೆ: 8

    ಕನ್ಯಾ: ಅವಿವೇಕಿಗಳು ಅನೇಕ ರೀತಿಯ ಸವಾಲುಗಳನ್ನು ಹಾಕಬಹುದು. ಸ್ವಲ್ಪ ಸಮಯಪ್ರಜ್ಞೆಯಿಂದಲೇ ನಡೆದುಕೊಳ್ಳಿ. ಶುಭಸಂಖ್ಯೆ: 5

    ತುಲಾ: ಸಂಗೀತಪ್ರೇಮಿಗಳಿಗೆ ಕಲಾಸ್ವಾದನೆಯ ಅವಕಾಶ ಸಿಗಲಿದೆ. ಸ್ವಂತ ಬೆಳವಣಿಗೆಯ ದಾರಿ ಕೂಡ ತೆರೆದುಕೊಳ್ಳಲಿದೆ. ಶುಭಸಂಖ್ಯೆ: 2

    ವೃಶ್ಚಿಕ: ಅನಿರೀಕ್ಷಿತ ವಲಯದಿಂದ ಲಾಭವಿದೆ. ಅಡೆತಡೆಗಳಿಗೆ ಸ್ವಲ್ಪವೂ ಅಂಜಬೇಡಿ. ಗುರು ದತ್ತಾತ್ರೇಯನನ್ನು ಸ್ತುತಿಸಿ. ಶುಭಸಂಖ್ಯೆ: 9

    ಧನುಸ್ಸು: ವಿವಾದಗಳಿಗೆ ಮೂಲವಾಗಿದ ಆಸ್ತಿಯ ವಿಚಾರ ರಾಜಿಯಿಂದ ಪರಿಹಾರವಾಗಲಿದೆ. ಕುಟುಂಬದಲ್ಲಿ ಒಮ್ಮತವಿದೆ. ಶುಭಸಂಖ್ಯೆ: 3

    ಮಕರ: ಇತರ ಜನರ ಅಸಹಕಾರದಿಂದ ಚಿಂತೆ ಹೆಚ್ಚಬಹುದು. ನಿಮ್ಮ ಧ್ಯೇಯವೇ ನಿಮಗೆ ಗೆಲುವನ್ನು ತಂದುಕೊಡಲಿದೆ. ಶುಭಸಂಖ್ಯೆ: 1

    ಕುಂಭ: ಕನಸು ಕಂಡಂಥ ಸಂಗಾತಿ ದೊರೆಯಲು ಅವಿವಾಹಿತರಿಗೆ ಕಾಲ ಕೂಡಿ ಬರಲಿದೆ. ಹಿರಿಯರ ನೆರವೂ ಲಭಿಸಲಿದೆ. ಶುಭಸಂಖ್ಯೆ: 4

    ಮೀನ: ಅದೃಷ್ಟ ನಿಮ್ಮ ಪರವಾಗಿದೆ. ಎಲ್ಲರೂ ನಿಮಗೆ ಹೊಂದಿಕೊಂಡು ಸಹಕರಿಸುತ್ತಾರೆ. ಕುಲದೇವರನ್ನು ಪ್ರಾರ್ಥಿಸಿ. ಶುಭಸಂಖ್ಯೆ: 7

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts