More

    ಕೋವಿಡ್​ 19 ನಂತರದಲ್ಲಿ ಒಡಿಶಾ ಮತ್ತು ಪಶ್ಚಿಮ ಬಂಗಾಳಕ್ಕೆ ಬಂದೊದಗಿದೆ ಹೊಸ ಆಪತ್ತು

    ಭುವನೇಶ್ವರ: ಜಾಗತಿಕವಾಗಿ ಕಾಡುತ್ತಿರುವ ಕರೊನಾ ಸೋಂಕಿನ ವಿರುದ್ಧ ಹೋರಾಡುತ್ತಿರುವಂತೆ ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಹೊಸತೊಂದು ಆಪತ್ತು ಬಂದೆರುಗುವ ಭೀತಿ ಉಂಟಾಗಿದೆ. ಬಂಗಾಳ ಕೊಲ್ಲಿಯಲ್ಲಿ ಎದ್ದಿರುವ ಆಂಫನ್​ ಚಂಡಮಾರುತ ತನ್ನ ಪ್ರಾಬಲ್ಯ ಹೆಚ್ಚಿಸಿಕೊಂಡು ಮುಂದಿನ 12 ತಾಸುಗಳಲ್ಲಿ ಉಭಯ ರಾಜ್ಯಗಳ ಕರಾವಳಿ ಪ್ರದೇಶಗಳಿಗೆ ಅಪ್ಪಳಿಸುವ ಸಾಧ್ಯತೆ ದಟ್ಟವಾಗಿದೆ.

    ಚಂಡಮಾರುತದ ಅಪ್ಪಳಿಸುವಿಕೆಯಿಂದಾಗಿ ಈ ಪ್ರದೇಶದಲ್ಲಿ ಮುಂದಿನ 24 ಗಂಟೆಗಳಲ್ಲಿ ಭಾರಿ ಮಳೆಯಾಗುವ ಸಾದ್ಯತೆ ಇದೆ. ಆದ್ದರಿಂದ, ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.

    ಇದನ್ನೂ ಓದಿ: ಫೋನ್​​ನಲ್ಲಿ ಕೇಳಿಬರುವ ಕರೊನಾ ಕಾಲರ್​ ಟ್ಯೂನ್​ಗೆ ಕನ್ನಡದಲ್ಲಿ ಧ್ವನಿ ಕೊಟ್ಟವರು ಇವರೇ ನೋಡಿ…

    ಬಂಗಾಳ ಕೊಲ್ಲಿಯ ಆಗ್ನೇಯ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಇದು ವಾಯವ್ಯ ದಿಕ್ಕಿನತ್ತ ಸಾಗಿದ್ದು, ಒಡಿಶಾದ ಪ್ಯಾರಾದೀಪ್​ನ ದಕ್ಷಿಣ ದಿಕ್ಕಿನಲ್ಲಿ 1,060 ಕಿ.ಮೀ ದೂರದಲ್ಲಿ ಮತ್ತು ಪಶ್ಚಿಮ ಬಂಗಾಳದ ಡಿಗಾದ ನೈಋತ್ಯ ಭಾಗದಲ್ಲಿ 1,310 ಕಿ.ಮೀ. ದೂರದಲ್ಲಿ ಸ್ಥಿತವಾಗಿದೆ. ಮುಂದಿನ 12 ಗಂಟೆಗಳಲ್ಲಿ ಚಂಡಮಾರುತವಾಗಿ ರೂಪುಗೊಳ್ಳಲಿದೆ. ಮುಂದಿನ 24 ಗಂಟೆಗಳಲ್ಲಿ ಪ್ರಾಬಲ್ಯ ಹೆಚ್ಚಿಸಿಕೊಂಡು ಪ್ರಬಲ ಚಂಡಮಾರುತವಾಗಿ ರೂಪುಗೊಳ್ಳುವ ಸಾಧ್ಯತೆ ಇದೆ. ಭಾನುವಾರದವರೆಗೆ ಉತ್ತರ ಮತ್ತು ವಾಯವ್ಯದ ದಿಕ್ಕಿನಲ್ಲಿ ಹೊಯ್ದಾಡುವ ಇದು, ಮೇ 18ರಿಂದ 20ರ ನಡುವೆ ಪಶ್ಚಿಮ ಬಂಗಾಳಕ್ಕೆ ಅಪ್ಪಳಿಸುವ ಸಾಧ್ಯತೆ ಇದೆ.

    ಇದರ ಪರಿಣಾಮ ಪಶ್ಚಿಮ ಬಂಗಾಳದ ಕರಾವಳಿ ಜಿಲ್ಲೆಗಳಾದ ಉತ್ತರ ಮತ್ತು ದಕ್ಷಿಣ 24 ಪಾರಾಗಣ, ಕೋಲ್ಕತಾ ಪೂರ್ವ ಮತ್ತು ಪಶ್ಚಿಮ ಮಿಡ್ನಾಪುರ, ಹೌರಾ ಮತ್ತು ಹೂಗ್ಲಿಗಳಲ್ಲಿ ಮೇ 19 ಮತ್ತು 20ರಂದು ಭಾರಿ ಮಳೆಯಾಗುವ ಸಂಭವವಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಚಂಡಮಾರುತದ ಪ್ರಭಾವದಿಂದಾಗಿ ಒಡಿಶಾದಲ್ಲಿ ಕೂಡ ಭಾರಿ ಮಳೆಯಾಗುವ ಸಂಭವವಿದೆ ಎಂದು ಹೇಳಿದೆ.

    ಆಟೋ, ಟ್ಯಾಕ್ಸಿ ಚಾಲಕರು ಇಷ್ಟೆಲ್ಲ ‘ಸಾಕ್ಷ್ಯಾಧಾರ’ ಕೊಟ್ಟರೆ ಮಾತ್ರ 5 ಸಾವಿರ ರೂ. ಸಿಗುತ್ತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts