More

    ಒಡಿಶಾ, ಆಂಧ್ರಪ್ರದೇಶಕ್ಕೆ ಮತ್ತೊಂದು ಚಂಡಮಾರುತದ ಭೀತಿ: ಮಧ್ಯರಾತ್ರಿ ಅಪ್ಪಳಿಸಲಿರುವ ‘ಗುಲಾಬ್​’

    ನವದೆಹಲಿ: ನಾಲ್ಕು ತಿಂಗಳ ಹಿಂದಷ್ಟೆ ‘ಯಾಸ್’ ಚಂಡಮಾರುತಕ್ಕೆ ತತ್ತರಿಸಿದ್ದ ಒಡಿಶಾ ರಾಜ್ಯದ ದಕ್ಷಿಣ ಭಾಗಕ್ಕೆ ಮತ್ತು ಉತ್ತರ ಆಂಧ್ರಪ್ರದೇಶದ ಹಲವು ಜಿಲ್ಲೆಗಳಿಗೆ ಇದೀಗ ‘ಗುಲಾಬ್​’ ಚಂಡಮಾರುತ ಅಪ್ಪಳಿಸುವ ಎಚ್ಚರಿಕೆ ಜಾರಿಯಾಗಿದೆ. ಈ ಚಂಡಮಾರುತವು ಇಂದು ಮಧ್ಯರಾತ್ರಿಯ ವೇಳೆಗೆ ಒಡಿಶಾದ ಗೋಪಾಲಪುರ ಮತ್ತು ಆಂಧ್ರದ ಕಾಲಿಂಗಪಟನಂಅನ್ನು ಗಂಟೆಗೆ 95 ಕಿಲೋಮೀಟರ್​ನಷ್ಟು ವೇಗದಲ್ಲಿ ಅಪ್ಪಳಿಸಲಿದೆ ಎಂದು ಕೇಂದ್ರ ಹವಾಮಾನ ಇಲಾಖೆ ತಿಳಿಸಿದೆ.

    ಗುಲಾಬ್​ ಎಂದು ಪಾಕಿಸ್ತಾನದಿಂದ ಹೆಸರಿಸಲ್ಪಟ್ಟಿರುವ ಈ ಚಂಡಮಾರುತವು ಹಾಲಿ ಗಂಟೆಗೆ 18 ಕಿಲೋಮೀಟರ್​ಗಳ ವೇಗದಲ್ಲಿ ಪ್ರಯಾಣಿಸುತ್ತಿದೆ. ಮಧ್ಯರಾತ್ರಿಯ ವೇಳೆಗೆ ಎರಡು ರಾಜ್ಯಗಳ ಕರಾವಳಿ ಪ್ರದೇಶವನ್ನು ಅಪ್ಪಳಿಸಿ, ಭಾರೀ ಮಳೆ ಮತ್ತು ಭೂಕುಸಿತಗಳನ್ನು ಉಂಟುಮಾಡುವ ಭೀತಿಯಿದೆ. ಎನ್​ಡಿಆರ್​ಎಫ್​ನ 13 ತಂಡಗಳನ್ನು ಒಡಿಶಾದಲ್ಲಿ ಮತ್ತು 5 ತಂಡಗಳನ್ನು ಆಂಧ್ರಪ್ರದೇಶದಲ್ಲಿ ನಿಯುಕ್ತಿಗೊಳಿಸಲಾಗಿದೆ ಎನ್ನಲಾಗಿದೆ.

    ಇದನ್ನೂ ಓದಿ: ಬಿಜೆಪಿ ಸಂಸದರನ್ನು ಥಳಿಸಿದ ಜನ: ಕಾಂಗ್ರೆಸ್​ ನಾಯಕರ ಚಿತಾವಣೆ ಆರೋಪ

    ಪೂರ್ವ ಕರಾವಳಿ ಪ್ರದೇಶದ ರೈಲುಸೇವೆಗಳಲ್ಲಿ ಮಾರ್ಪಾಡು ಮಾಡಲಾಗಿದ್ದು, ಹಲವು ಟ್ರೈನ್​ಗಳನ್ನು ರದ್ದುಗೊಳಿಸಿದ್ದರೆ, ಕೆಲವನ್ನು ಬೇರೆ ಮಾರ್ಗಕ್ಕೆ ಅಥವಾ ಸಮಯಕ್ಕೆ ಬದಲಿಸಲಾಗಿದೆ ಎಂದು ರೈಲ್ವೇ ಇಲಾಖೆ ತಿಳಿಸಿದೆ.

    ಒಡಿಶಾ ಸರ್ಕಾರವು ರಾಜ್ಯದ ದಕ್ಷಿಣ ಭಾಗದಲ್ಲಿ ತೊಂದರೆಗೀಡಾಗಬಹುದಾದ ಏಳು ಜಿಲ್ಲೆಗಳಲ್ಲಿ ತೆರವು ಕಾರ್ಯಾಚರಣೆಗಳನ್ನು ನಡೆಸುತ್ತಿದೆ. ತೀವ್ರ ಹೊಡೆತಕ್ಕೆ ಸಿಲುಕಬಹುದೆನ್ನಲಾದ ಗಂಜಾಂ ಮತ್ತು ಗಜಪತಿ ಜಿಲ್ಲೆಗಳ ಮೇಲೆ ಹೆಚ್ಚು ಗಮನ ಹರಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್)

    ಕರೊನಾ ವಿರುದ್ಧದ ಹೋರಾಟದಲ್ಲಿ ಟೀಂ ಇಂಡಿಯ ದಾಖಲೆಗಳನ್ನು ಸೃಷ್ಟಿಸುತ್ತಿದೆ: ಪ್ರಧಾನಿ ಮೋದಿ

    ವಿದೇಶ ಪ್ರಯಾಣಕ್ಕೆ ಸೌಕರ್ಯ: ಕೋವಿನ್​ ಸರ್ಟಿಫಿಕೇಟ್​ಗೆ ಜನ್ಮದಿನಾಂಕ ಅಪ್ಡೇಟ್​ ಮಾಡಲು ಅವಕಾಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts