More

    ಲಾಕ್​ಡೌನ್​ ನಿರುದ್ಯೋಗಿಗಳಿಗೆ ಉದ್ಯೋಗ ದೊರಕಿಸಿಕೊಟ್ಟ ಅಂಫಾನ್​ ಚಂಡಮಾರುತ

    ಕೋಲ್ಕತ: ಇತ್ತಿಚೆಗೆ ಪಶ್ಚಿಮ ಬಂಗಾಳ ಮತ್ತು ಒಡಿಶಾ ಕರಾವಳಿ ಪ್ರದೇಶಗಳಲ್ಲಿ ಅಪ್ಪಳಿಸಿದ ಅಂಫಾನ್​ ಚಂಡಮಾರುತದಿಂದಾಗಿ ಉಭಯ ರಾಜ್ಯಗಳ ಜನಜೀವನ ಅಸ್ತವ್ಯಸ್ತವಾಗಿದೆ. ಒಡಿಶಾ ಸರ್ಕಾರ ಕೈಗೊಂಡ ಮುಂಜಾಗ್ರತಾ ಕ್ರಮದಿಂದಾಗಿ ಅಲ್ಲಿ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ಆದರೆ, ಪಶ್ಚಿಮ ಬಂಗಾಳದಲ್ಲಿ 80ಕ್ಕೂ ಹೆಚ್ಚು ಜನರನ್ನು ಬಲಿಪಡೆದುದ್ದಲ್ಲದೆ, ಸಾಕಷ್ಟು ಆಸ್ತಿ ನಷ್ಟವನ್ನುಂಟು ಮಾಡಿತು. ಹೀಗಾಗಿ ಜನರು ಅಂಫಾನ್​​ ಚಂಡಮಾರುತಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.

    ಆದರೆ, ಕೋವಿಡ್​-19 ಲಾಕ್​ಡೌನ್​ನಿಂದ ಉದ್ಯೋಗ ನಷ್ಟಕ್ಕೆ ಒಳಗಾಗಿ ವಿವಿಧ ರಾಜ್ಯಗಳಿಂದ ತವರು ಪಶ್ಚಿಮ ಬಂಗಾಳಕ್ಕೆ ಮರಳಿರುವ ವಲಸೆ ಕಾರ್ಮಿಕರ ಪಾಲಿಗೆ ಅಂಫಾನ್​ ಚಂಡಮಾರುತ ಅದೃಷ್ಟಕಾರಿಯಾಗಿ ಪರಿಣಮಿಸಿದೆ. ಅದರಲ್ಲೂ ವಿಶೇಷವಾಗಿ ದಿನಗೂಲಿ ಕಾರ್ಮಿಕರು ಮತ್ತು ಎಲೆಕ್ಟ್ರೀಷಿಯನ್​ಗಳಿಗೆ ಅವಕಾಶದ ದಿಡ್ಡಿಬಾಗಿಲೇ ತೆರೆದಂತಾಗಿದೆ. ಲಾಕ್​ಡೌನ್​ನಿಂದ ಉದ್ಯೋಗ ನಷ್ಟಕ್ಕೆ ಒಳಗಾಗಿದ್ದ ಅವರಿಗೆ ತಮ್ಮದೇ ರಾಜ್ಯದಲ್ಲಿ ಉದ್ಯೋಗ ಗಳಿಸಿಕೊಂಡು, ಹೊಟ್ಟೆ ತುಂಬಿಸಿಕೊಳ್ಳಲು ಇದರಿಂದ ಅನುಕೂಲವಾಗಿದೆ.

    ಇದನ್ನೂ ಓದಿ: ಕರ್ನಾಟಕಕ್ಕೆ ಕೊವಿಡ್​-19 ಕಂಟಕ, ಸೋಂಕಿತರ ಸಂಖ್ಯೆ 2282ಕ್ಕೆ ಏರಿಕೆ; ಚಿತ್ರದುರ್ಗಕ್ಕೆ ಶಾಕ್​

    ಚಂಡಮಾರುತಕ್ಕೆ ಸಿಲುಕಿ ಬುಡಮೇಲಾಗಿರುವ ಮರಗಳು ಮತ್ತಿತರ ವಸ್ತುಗಳನ್ನು ತೆರವುಗೊಳಿಸಲು ಪಶ್ಚಿಮ ಬಂಗಾಳದಲ್ಲಿ ಕೂಲಿಯಾಳುಗಳ ಕೊರತೆ ಉಂಟಾಗಿದೆ. ಆದರೆ, ವಲಸೆ ಕಾರ್ಮಿಕರು ಈ ಕೊರತೆಯನ್ನು ನೀಗಿಸಲು ಮುಂದಾಗಿದ್ದಾರೆ.

    ತುಂಡಾಗಿ ಬಿದ್ದಿರುವ ವಿದ್ಯುತ್​ ತಂತಿಗಳನ್ನು ತೆರವುಗೊಳಿಸಿ, ವಿದ್ಯುತ್​ ಮರುಸಂಪರ್ಕ ಒದಗಿಸುವುದು ಕಲ್ಕತ್ತಾ ವಿದ್ಯುತ್​ ಸರಬರಾಜು ನಿಗಮದ ಜವಾಬ್ದಾರಿಯಾಗಿದೆ. ಆದರೂ ನಾವು ಸ್ಥಳೀಯ ಎಲೆಕ್ಟ್ರೀಷಿಯನ್​ಗಳನ್ನು ಬಳಸಿಕೊಂಡು ತುಂಡಾಗಿರುವ ವಿದ್ಯುತ್​ ತಂತಿಗಳನ್ನು ತೆರವುಗೊಳಿಸುತ್ತಿದ್ದೇವೆ. ಜತೆಗೆ ವಿದ್ಯುತ್​ ಸಂಪರ್ಕ ಮರುಸ್ಥಾಪನೆ ಕಾರ್ಯದಲ್ಲೂ ಅವರನ್ನು ಬಳಸಿಕೊಳ್ಳುತ್ತಿದ್ದೇವೆ ಎಂದು ಕೋಲ್ಕತ ಮಹಾನಗರಪಾಲಿಕೆಯ ಸದಸ್ಯರೊಬ್ಬರು ತಿಳಿಸಿದ್ದಾರೆ.

    ಮಹಾರಾಷ್ಟ್ರ ತಲುಪಿದ ಮಿಡತೆಗಳ ಗುಂಪು, ಕರ್ನಾಟಕಕ್ಕೂ ಕಾದಿದೆಯಾ ಕಂಟಕ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts