More

    95 ಸಾವಿರ ರೂಪಾಯಿಗೆ ವಾಚ್ ಮಾರೋಕೆ ಹೋಗಿ ಒಂದೂ ಕಾಲು ಲಕ್ಷ ರೂಪಾಯಿ ಕಳಕೊಂಡ್ರು!

    ಬೆಂಗಳೂರು: ಇಡೀ ದೇಶವೇ ಲಾಕ್​ಡೌನ್ ಆದರೂ, ಸೈಬರ್ ಕಳ್ಳರು ಮಾತ್ರ ಸಾರ್ವಜನಿಕರನ್ನು ವಂಚಿಸಲು ಹೊಸ ಮಾರ್ಗ ಕಂಡುಕೊಳ್ಳುತ್ತಲೇ ಇದ್ದಾರೆ. ನಗರದಲ್ಲಿ ವ್ಯಕ್ತಿಯೊಬ್ಬರು ತಮ್ಮ ಬೆಲೆ ಬಾಳುವ ವಾಚ್ ಅನ್ನು ಒಎಲ್​ಎಕ್ಸ್ ನಲ್ಲಿ 95 ಸಾವಿರ ರೂ.ಗೆ ಮಾರಾಟ ಮಾಡಲು ಹೋಗಿ ತಾವೇ 1.25 ಲಕ್ಷ ರೂ. ಕಳೆದುಕೊಂಡಿದ್ದಾರೆ.

    ಬ್ಯಾಡರಹಳ್ಳಿಯ ನಿವಾಸಿ ಸುನೀಲ್ (31) ಹಣ ಕಳೆದುಕೊಂಡವರು. ಸುನೀಲ್ ತಮ್ಮ ವಾಚ್​ನ್ನು 95 ಸಾವಿರ ರೂ.ಗೆ ಮಾರಾಟ ಮಾಡುವುದಾಗಿ ಒಎಲ್​ಎಕ್ಸ್​ನಲ್ಲಿ ಜಾಹಿರಾತು ಹಾಕಿದ್ದರು. ಏ.8ರಂದು ಸಂಜೆ 6.30ರಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ವಾಚ್ ಖರೀದಿ ಮಾಡುವುದಾಗಿ ಸುನೀಲ್ ಅವರ ಇ-ಮೇಲ್​ಗೆ ಸಂದೇಶ ಕಳಿಸಿದ್ದ.

    ಇದಕ್ಕೆ ಒಪ್ಪಿದ್ದ ಸುನೀಲ್, ತಮ್ಮ ಖಾತೆಗೆ ಹಣ ರವಾನಿಸಿದ ಬಳಿಕ ಕೊರಿಯರ್ ಮೂಲಕ ವಾಚ್ ಕಳಿಸುವುದಾಗಿ ತಿಳಿಸಿದ್ದರು. ಇದಕ್ಕೆ ಸಮ್ಮತಿಸಿದ ಅಪರಿಚಿತ ತಾನು ನೆಟ್ ಬ್ಯಾಂಕಿಂಗ್​ನಲ್ಲಿ ನಿಮ್ಮ ಖಾತೆಗೆ ಹಣ ಜಮೆ ಮಾಡುವುದಾಗಿ ನಂಬಿಸಿದ್ದ. ಕೊರಿಯರ್, ಇನ್ಶೂರೆನ್ಸ್ ಹಾಗೂ ಇತರೆ ಖರ್ಚನ್ನು ತನ್ನ ಬ್ಯಾಂಕ್ ಖಾತೆಗೆ ಮೊದಲು ಹಾಕುವಂತೆ ಹೇಳಿದ್ದ. ಈತನ ಮಾತಿಗೆ ಮರುಳಾದ ಸುನೀಲ್ ಹಂತಹಂತವಾಗಿ ಅಪರಿಚಿತನ ಬ್ಯಾಂಕ್ ಖಾತೆಗೆ 1,25,500 ರೂ.ಗಳನ್ನು ಜಮೆ ಮಾಡಿದ್ದರು. ಇದಾದ ಬಳಿಕ ಅಪರಿಚಿತ ಹಣ ಹಿಂತಿರುಗಿಸದೆ ವಂಚಿಸಿರುವುದಾಗಿ ಪೊಲೀಸರಿಗೆ ಸುನೀಲ್ ದೂರು ನೀಡಿದ್ದಾರೆ. ಪಶ್ಚಿಮ ವಿಭಾಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಮದ್ಯ ಮಾರಾಟದ ಐಡಿಯಾ ಕೈಕೊಡ್ತು- ಸಪ್ಲೈಯರ್ ಆಟ ನಡೀಲಿಲ್ಲ!

    ಈ ವ್ಯಕ್ತಿಯ ದುರಾದೃಷ್ಟ ನೋಡಿ! – ಒಂದಿಲ್ಲೊಂದು ಕಾರಣಕ್ಕೆ ಕ್ವಾರಂಟೈನ್ ಅವಧಿ ವಿಸ್ತರಣೆಯಾಗ್ತಾ ಹೋಯಿತು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts