More

    30 ಲಕ್ಷ ಸಾಲ ಕೊಡ್ತೇನೆ ಎನ್ನುತ್ತ 4.5 ಲಕ್ಷ ರೂಪಾಯಿ ಲಪಟಾಯಿಸಿದ್ರು!

    ಬೆಂಗಳೂರು: ಬಜಾಜ್ ಫೈನಾನ್ಸ್ ಕಂಪನಿಯಿಂದ 30 ಲಕ್ಷ ರೂ. ಸಾಲ ಕೊಡುವುದಾಗಿ ವ್ಯಕ್ತಿಯೊಬ್ಬರಿಂದ ಸೈಬರ್ ಕಳ್ಳರು 4.5 ಲಕ್ಷ ರೂ. ಲಪಟಾಯಿಸಿದ್ದಾರೆ.

    ಹನುಮಂತನಗರ ನಿವಾಸಿ ಮಂಜು ವಂಚನೆಗೊಳಗಾದ ವ್ಯಕ್ತಿ. ಜು.21ರಂದು ಮಂಜುಗೆ ಕರೆ ಮಾಡಿದ್ದ ಅಪರಿಚಿತರು, ಬಜಾಜ್ ಫೈನಾನ್ಸ್ ಕಂಪನಿಯಿಂದ ಕರೆ ಮಾಡುತ್ತಿರುವುದಾಗಿ ಹೇಳಿ, 30 ಲಕ್ಷ ರೂ. ವರೆಗೆ ಸಾಲ ಕೊಡಿಸುವುದಾಗಿ ತಿಳಿಸಿದ್ದರು. ಅದನ್ನು ನಂಬಿದ ಮಂಜು, ಅಪರಿಚಿತರು ಕೇಳಿದ ಎಲ್ಲ ದಾಖಲೆಗಳನ್ನು ಕೊಟ್ಟಿದ್ದರು. ಸಾಲ ಕೊಡುವ ಮೊದಲು ಶುಲ್ಕದ ರೂಪದಲ್ಲಿ ಒಂದಿಷ್ಟು ಹಣ ಪಾವತಿಸಬೇಕಾಗುತ್ತದೆ. ಅದನ್ನು ಸಾಲ ತೀರಿಸಿದ ಬಳಿಕ ಹಿಂದಿರುಗಿಸಲಾಗುತ್ತದೆ ಎಂದು ವಂಚಕರು ಹೇಳಿದ್ದರು.

    ಇದನ್ನೂ ಓದಿ: ಕೆಪಿಸಿಸಿ ಅಕಾಡೆಮಿ: ಪಕ್ಷದ ಸಿದ್ಧಾಂತ ಇತಿಹಾಸ ದಾಖಲೀಕರಣದ ಹೊಸ ಪ್ರಯತ್ನ

    ಅದರಂತೆ ಅಪರಿಚಿತರು ಹೇಳಿದ ಬ್ಯಾಂಕ್ ಖಾತೆಗೆ ಮಂಜು ಹಂತಹಂತವಾಗಿ 4.50 ಲಕ್ಷ ರೂ. ಜಮೆ ಮಾಡಿದ್ದರು. ಬಳಿಕ ಅಪರಿಚಿತರು ಫೋನ್ ಕರೆಗೂ ಸಿಗದೇ ವಂಚಿಸಿದ್ದಾರೆ. ದಕ್ಷಿಣ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಲಿಂಕ್ ಕ್ಲಿಕ್ ಮಾಡಲು ಹೇಳಿ ಖಾತೆಗೆ ಕನ್ನ ನೌಕರಿ ಡಾಟ್ ಕಾಂನಲ್ಲಿ ಕೆಲಸಕ್ಕಾಗಿ ನೋಂದಣಿ ಮಾಡಿಸಿಕೊಂಡಿದ್ದ ಎಲೆಕ್ಟ್ರಾನಿಕ್ಸ್ ಸಿಟಿ ನಿವಾಸಿ ವೀರೇಶ್ ಎಂಬುವರಿಂದ 94 ಸಾವಿರ ರೂ. ಪಡೆದು ವಂಚಿಸಿದ್ದಾರೆ.
    ಉದ್ಯೋಗದ ಹುಡುಕಾಟದಲ್ಲಿದ್ದ ವೀರೇಶ್ ಫೆಬ್ರವರಿಯಲ್ಲಿ ನೌಕರಿ ಡಾಟ್ ಕಾಂನಲ್ಲಿ 5 ಸಾವಿರ ರೂ. ಪಾವತಿಸಿ ಸ್ವವಿವರ ಅಪ್​ಲೋಡ್ ಮಾಡಿದ್ದರು.

    ಇದನ್ನೂ ಓದಿ: ಅಯೋಧ್ಯೆಯಲ್ಲಿ ಎರಡು ಗಂಟೆ ಕಾಲ ಇರಲಿದ್ದಾರೆ ಪ್ರಧಾನಿ ಮೋದಿ

    ಜು.27ರಂದು ಅಪರಿಚಿತ ನಂಬರ್​ನಿಂದ ಕರೆ ಮಾಡಿದ ಮಹಿಳೆ ತನ್ನನ್ನು ಪೂಜಾ ಶರ್ಮಾ ಎಂದು ಪರಿಚಯಿಸಿಕೊಂಡಿದ್ದು, ನೌಕರಿ ಡಾಟ್ ಕಾಂನಿಂದ ಕರೆ ಮಾಡುತ್ತಿರುವುದಾಗಿ ಹೇಳಿದ್ದಳು. ಕರೊನಾ ಕಾರಣದಿಂದ ನಾವು ನಿಮಗೆ ನೌಕರಿ ನೀಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ನಾವು ನಿಮ್ಮ ಹಣವನ್ನು ಹಿಂದಿರುಗಿಸುತ್ತೇವೆ. ನಿಮ್ಮ ಮೊಬೈಲ್​ಗೆ ಕಳುಹಿಸುವ ಲಿಂಕ್ ಕ್ಲಿಕ್ ಮಾಡಿದರೆ ನೀವು ನೌಕರಿ ಡಾಟ್ ಕಾಂಗೆ ಪಾವತಿಸಿದ ಹಣ ನಿಮ್ಮ ಖಾತೆಗೆ ವಾಪಸ್ ಜಮೆಯಾಗುತ್ತದೆ ಎಂದು ಹೇಳಿದ್ದಳು.

    ಅದರಂತೆ ಆಕೆ ಕಳುಹಿಸಿದ ಲಿಂಕ್ ಅನ್ನು ವೀರೇಶ್ ಕ್ಲಿಕ್ ಮಾಡಿದ ಕೂಡಲೇ ಬ್ಯಾಂಕ್ ಖಾತೆಯಲ್ಲಿಟ್ಟಿದ್ದ 94 ಸಾವಿರ ರೂ. ಕಡಿತಗೊಂಡಿದೆ. ಆಗ್ನೇಯ ವಿಭಾಗದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಶ್ರೀರಾಮ ಮಂದಿರ ಭೂಮಿ ಪೂಜೆ ರಾಷ್ಟ್ರೀಯ ಏಕತೆಯ ಹಬ್ಬವಾಗಲಿ ಎಂದ ಕಾಂಗ್ರೆಸ್ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts