More

    ಸೈಬರ್ ಕಳ್ಳರ ಬಲೆಗೆ ಬಿದ್ದ ಪೊಲೀಸ್ ಅಧಿಕಾರಿ ಕಳೆದುಕೊಂಡ ಹಣವೆಷ್ಟು!

    ಬೆಂಗಳೂರು: ಒಂದು ಲಕ್ಷ ರೂ. ಸಾಲ ಪಡೆಯಲು ಹೋದ ಪೊಲೀಸ್ ಅಧಿಕಾರಿ 58 ಸಾವಿರ ರೂ. ವಂಚನೆಗೆ ಒಳಗಾಗಿದ್ದಾರೆ. ಹಲಸೂರು ಗೇಟ್ ಠಾಣೆಯ ಅಧಿಕಾರಿ ವಂಚನೆಗೆ ಒಳಗಾದವರು.

    ಕೆಲ ದಿನಗಳ ಹಿಂದೆ ಫೇಸ್ ಬುಕ್​ನಲ್ಲಿ ಬಜಾಜ್ ಫಿನ್ಸ್ ಪ್ರೈ.ಲಿ.ನಿಂದ ಸಾಲ ಕೊಡುವ ಜಾಹೀರಾತು ನೋಡಿ ಅದರಲಿದ್ದ ಮೊಬೈಲ್ ನಂಬರ್​ಗೆ ಕರೆ ಮಾಡಿದ್ದಾರೆ. ಶಶಿಕುಮಾರ್ ಎಂಬ ಹೆಸರಿನಲ್ಲಿ ಕರೆ ಸ್ವೀಕರಿಸಿದ ವ್ಯಕ್ತಿ, 1 ಲಕ್ಷ ರೂ.ವರೆಗೂ ಸಾಲ ಕೊಡಿಸುವುದಾಗಿ ಹೇಳಿ ವಾಟ್ಸ್​ಆಪ್ ಮೂಲಕ ತನ್ನ ಕಂಪನಿ ಐಡಿ ಕಾರ್ಡ್ ಕಳುಹಿಸಿದ್ದನು.

    ಇದನ್ನೂ ಓದಿ: ಭಾರತಕ್ಕೆ ಅಕ್ರಮವಾಗಿ ಬಂದು ದಲೈಲಾಮಾ ಮೇಲೆ ಕಣ್ಣಿಟ್ಟಿದ್ದ ಚೀನಿ ‘ಕಳ್ಳ’!

    ಬಜಾಜ್ ಫೈನಾನ್ಸ್ ಕಂಪನಿ ವ್ಯವಸ್ಥಾಪಕ ಎಂದು ಐಡಿ ಕಾಡ್ ನಲ್ಲಿ ಇರುವುದನ್ನು ಗಮನಿಸಿದ ಪೊಲೀಸ್ ಅಧಿಕಾರಿ, ಸಾಲ ಪಡೆಯಲು ಒಪ್ಪಿದ್ದರು. ಅರ್ಜಿ ಶುಲ್ಕ 2,500 ರೂ. ಮೊದಲು ಪಾವತಿ ಮಾಡಬೇಕೆಂದು ಹೇಳಿದಾಗ ತನ್ನ ಅತ್ತೆಯ ಮಗನಿಗೆ ಕರೆ ಮಾಡಿದ ಅಧಿಕಾರಿ ಆತನ ಮೂಲಕ ಹಣ ವರ್ಗಾವಣೆ ಮಾಡಿದ್ದರು. ಸಾಲ ಪಡೆಯಲು ವಿಮೆ ಶುಲ್ಕ, ಜಿಎಸ್​ಟಿ ಶುಲ್ಕವೆಂದು ಸಬೂಬು ಹೇಳಿ ಮತ್ತೆ 58 ಸಾವಿರ ರೂ.ಗಳನ್ನು ತನ್ನ ಖಾತೆಗೆ ವರ್ಗಾವಣೆ ಮಾಡಿಸಿಕೊಂಡು ಸಂಪರ್ಕ ಕಡಿತ ಮಾಡಿಕೊಂಡಿದ್ದಾನೆ. ಕೇಂದ್ರ ವಿಭಾಗ ಸಿಇಎನ್ ಠಾಣೆಗೆ ಅಧಿಕಾರಿ ದೂರು ನೀಡಿದ್ದಾರೆ.

    ನಾಟಿ ಮಾಡೋದಕ್ಕೆ ತೆರಳಲು ಬಿಎಂಟಿಸಿ ನೌಕರನಿಗೆ 8 ದಿನ ವೇತನ ಸಹಿತ ರಜೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts