More

    ಬಾಯ್​ಫ್ರೆಂಡ್​ ಜತೆ 1 ಗಂಟೆ ಮಾತನಾಡಿ ಸಂಪರ್ಕ ಕಡಿದುಕೊಂಡ ಯುವತಿ ಮನೆಯಲ್ಲೇ ದುರಂತ ಸಾವು!

    ಹೈದರಾಬಾದ್​: ಅಂತಾರಾಷ್ಟ್ರೀಯ ಮಹಿಳಾ ದಿನದಂದೇ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವೊಂದು ವಿಷಯಗಳು ಬಹಿರಂಗವಾಗಿದ್ದು, ಪಾಲಕರು ಮತ್ತು ಪ್ರಿಯಕರನ ಕಿರುಕುಳದಿಂದ ಬೇಸತ್ತು ನೇಣಿಗೆ ಶರಣಾಗಿದ್ದಾಳೆಂದು ತಿಳಿದುಬಂದಿದೆ.

    ತೆಲಂಗಾಣದ ಮೈಲಾರ್ದೇವ್​ಪಲ್ಲಿ ಮೂಲದ ಲಿಜಾ (20) ಆತ್ಮಹತ್ಯೆ ಮಾಡಿಕೊಂಡ ಯುವತಿ. ಈಕೆಯ ತಂದೆ ಪರಮೇಶ್ವರ್​ ಒಡಿಶಾ ಮೂಲದವರು. 20 ವರ್ಷಗಳ ಹಿಂದೆ ತೆಲಂಗಾಣಕ್ಕೆ ಬಂದು ಲಕ್ಷ್ಮಿಗುಡ ಎಂಬಲ್ಲಿ ನೆಲೆಸಿದ್ದಾರೆ. ಇದೇ ಏರಿಯಾದಲ್ಲಿ ಅಕ್ರಮ್​ ಅಲಿಯಾಸ್​ ಅಪ್ಸರ್​ (20) ಎಂಬಾತನು ಸಹ ವಾಸವಿದ್ದಾನೆ.

    ಇದನ್ನೂ ಓದಿರಿ: ದೇವಸ್ಥಾನದ ಬಾವಿಗೆ‌ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ: ತೆಕ್ಕಟ್ಟೆ ಬೆನ್ನಲ್ಲೇ ಅದೇ ರೀತಿಯ ಮತ್ತೊಂದು ದುರಂತ

    ಅಪ್ಸರ್​ ಮತ್ತು ಲಿಜಾ ಇಬ್ಬರು ಒಂದೇ ಕಾಲೇಜಿನಲ್ಲಿ ಓದುತ್ತಿದ್ದರು. ಒಂದೇ ಏರಿಯಾದವರಾಗಿದ್ದರಿಂದ ಇಬ್ಬರ ಪರಿಚಯ ನಂತರದ ದಿನಗಳಲ್ಲಿ ಪ್ರೀತಿಗೆ ತಿರುಗಿತ್ತು. ಇಬ್ಬರ ವಿಚಾರ ಲಿಜಾ ಕುಟುಂಬಕ್ಕೆ ತಿಳಿದು ಅಪ್ಸರ್​ಗೆ ಎಚ್ಚರಿಕೆಯನ್ನು ನೀಡಲಾಗಿತ್ತು.

    ಹೀಗಿದ್ದರೂ ಇಬ್ಬರ ನಡುವೆ ಪ್ರೀತಿ ಮುಂದುವರಿದಾಗಿ ಲಿಜಾ ಕುಟುಂಬದವರು ಆಕೆಯ ತಲೆಯ ಕೂದಲನ್ನು ಕತ್ತರಿಸಿದ್ದರು. ಹೊರಗೆ ಹೋಗದಂತೆ ತಡೆಯಲು ಹೀಗೆ ಮಾಡಿದ್ದರು. ಇದರಿಂದ ಆಕೆ ಖಿನ್ನತೆಗೂ ಒಳಗಾಗಿದ್ದಳು. ಇತ್ತ ಅಪ್ಸರ್​ ಸಹ ಕರೆ ಮಾಡಿ ಕಿರುಕುಳ ನೀಡಲು ಆರಂಭಿಸಿದ.

    ಮಹಿಳಾ ದಿನಾಚರಣೆಯಂದು ಸುಮಾರು 1 ಗಂಟೆಗಳ ಕಾಲ ಬಾಯ್​ಫ್ರೆಂಡ್​ ಜತೆ ಮಾತನಾಡಿದ ಲಿಜಾ, ಆ ಬೆನ್ನಲ್ಲೇ ತನ್ನ ರೂಮಿನ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಕೆ ಮೃತಪಟ್ಟ ಬಳಿಕವೂ ಅಪ್ಸರ್​ 135 ಬಾರಿ ಕರೆ ಮಾಡಿದ್ದಾನೆ.

    ಇದನ್ನೂ ಓದಿರಿ: 4 ವರ್ಷದ ಹಿಂದೆ ಬ್ಯೂಟಿ ಪಾರ್ಲರ್ ಸೇಲ್ಸ್ ಗರ್ಲ್ ಆಗಿ ಬೆಂಗಳೂರಿಗೆ ಬಂದವಳ ಭಯಾನಕ ಕತೆ ಇದು!

    ಮಗಳು ಆತ್ಮಹತ್ಯೆ ಸುದ್ದಿ ತಿಳಿದ ಕುಟುಂಬಕ್ಕೆ ಬರಸಿಡಿಲು ಬಡಿದಂತಾಯಿತು. ಅತ್ತ ಮೊಬೈಲ್​ ಫೋನ್​ ನೋಡಿದ ಪಾಲಕರಿಗೆ ಅಪ್ಸರ್​ ಕರೆ ಮಾಡಿರುವುದು ಗೊತ್ತಾಗಿದೆ. ಈ ಸಂಬಂಧ ಕುಟುಂಬದ ಅಪ್ಸರ್​ ವಿರುದ್ಧ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಮೈಲಾರ್ದೇವ್​ಪಲ್ಲಿ ಠಾಣಾ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. (ಏಜೆನ್ಸೀಸ್​)

    ಗೊತ್ತಿಲ್ಲದೆ ಇಬ್ಬರು ಪ್ರೀತಿಸಿದ್ದು ಒಬ್ಬಳನ್ನೆ: ಗೊತ್ತಾಗ್ತಿದ್ದಂತೆ ಸೋದರಸಂಬಂಧಿಗಳಿಬ್ಬರ ದುರಂತ ಸಾವು!

    ಉದ್ಯೋಗ ಕೌಶಲ ಕಲಿಯದಿದ್ದರೆ ನಿಷ್ಫಲ!

    ಕಿಕ್​ಗಾಗಿ ಸೇದ್ತೀರಾ? ಸಿಕ್ ಆಗ್ತೀರಿ ಹುಷಾರ್!; ಇಂದು ನೋ ಸ್ಮೋಕಿಂಗ್ ಡೇ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts