More

    ಕಿಕ್​ಗಾಗಿ ಸೇದ್ತೀರಾ? ಸಿಕ್ ಆಗ್ತೀರಿ ಹುಷಾರ್!; ಇಂದು ನೋ ಸ್ಮೋಕಿಂಗ್ ಡೇ…

    ಧೂಮಪಾನ ಆರೋಗ್ಯಕ್ಕೆ ಹಾನಿಕರವೆಂದು ಅದೆಷ್ಟೇ ಹೇಳಿದರೂ ಮನಸನ್ನು ರಿಲ್ಯಾಕ್ಸ್ ಮಾಡೋದಕ್ಕಾಗಿ ಒಂದು ಧಂ ಹೊಡೆದುಬಿಡುತ್ತೇವೆ ಎನ್ನುತ್ತಿದ್ದಾರೆ ಈಗಿನ ಧೂಮಪ್ರಿಯರು. ಹೆಣ್ಣು-ಗಂಡು, ಯುವಕ-ವಯಸ್ಕ ಎನ್ನುವ ಭೇದವಿಲ್ಲ ಈ ಧಂ ಪ್ರಿಯರಿಗೆ. ಒತ್ತಡ ನಿವಾರಣೆಯ ನೆಪ ಹೇಳಿಯೋ ಅಥವಾ ಸ್ಟೈಲ್ ಎನ್ನುವ ಗುಂಗಿನಲ್ಲೋ ಒಟ್ಟಿನಲ್ಲಿ ಕೈ ಬೆರಳುಗಳ ಸಂದಿಯಲ್ಲೊಂದು ಸಿಗರೇಟ್ ಹಿಡಿಯುವುದು ಫ್ಯಾಷನ್ ಆಗಿಬಿಟ್ಟಿದೆ.

    | ರಮೇಶ್​ಕುಮಾರ್ ಎಡಮೋಳೆ

    ‘ಸಿಗರೇಟ್ ಸೇದಿಲ್ಲ ಅಂದ್ರೆ ಮೋಷನ್ ಬರಲ್ಲ, ಧಂ ಇಲ್ಲ ಅಂದರೆ ಹುಚ್ಚ ಆಗ್ಬಿಡ್ತೀನಿ, ಸಿಗರೇಟ್ ಬಿಡೋದು ಅಷ್ಟು ಸುಲಭವಲ್ಲ, ಆದ್ರೂ ನಾಳೆಯಿಂದ ಸಿಗರೇಟ್ ಸೇದೋದು ಕಡಿಮೆ ಮಾಡ್ಬಿಡ್ತೀನಿ…’ ಇವೆಲ್ಲಾ ಧೂಮಪಾನಿಗಳ ಕಾಮನ್ ಡೈಲಾಗ್​ಗಳು. ಖುಷಿಯಾದರೂ, ದುಃಖ ವಾದರೂ, ಟೆನ್ಷನ್ ಇದ್ದರೂ, ಇಲ್ಲದಿದ್ದರೂ, ಎಷ್ಟೇ ಬ್ಯುಸಿಯಾಗಿದ್ದರೂ ಧಂ ಎಳೆಯಲು ಮಾತ್ರ ಸಮಯ ಇದ್ದೇ ಇರುತ್ತೆ! ಇತಿ್ತೕಚೆಗಂತೂ ಪುರುಷರು, ಮಹಿಳೆಯರು ಹಾಗೂ ಕೆಲ ವಿದ್ಯಾರ್ಥಿಗಳು ಸೇರಿದಂತೆ ಹಲವರು ನಿಕೊಟಿನ್​ಗೆ ದಾಸರಾಗುತ್ತಿರುವುದು ವಿಪರ್ಯುಸ. ಈ ಸಿಗರೇಟ್ ದಾಸರನ್ನು ಸಿಗರೇಟ್ ಮುಕ್ತವಾಗಿಸಬೇಕೆಂಬ ಉದ್ದೇಶದಿಂದ ಪ್ರತಿ ವರ್ಷ ಮಾರ್ಚ್ ಎರಡನೇ ಬುಧವಾರ ವಿಶ್ವ ನೋ ಸ್ಮೋಕಿಂಗ್ ಡೇ ಆಚರಿಸಲಾಗುತ್ತದೆ. 1984ರಲ್ಲಿ ಮೊದಲ ಬಾರಿಗೆ ಬ್ರಿಟನ್​ನಲ್ಲಿ ಬೂದಿ ಬುಧವಾರದಂದು ಈ ಅಭಿಯಾನ ಆರಂಭವಾಯಿತು. ಧೂಮಪಾನದಿಂದ ಆರೋಗ್ಯ ಅದೆಷ್ಟರ ಮಟ್ಟಿಗೆ ಹದಗೆಡುತ್ತದೆ? ಅದರಿಂದ ಹೊರಬರಲು ಯಾವ ರೀತಿ ಪ್ರಯತ್ನಿಸಬಹುದು? ಎಂಬಿತ್ಯಾದಿ ಉಪಯುಕ್ತ ಮಾಹಿತಿ ಇಲ್ಲಿದೆ.

    ಶ್ವಾಸಕೋಶಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ: ಧೂಮವು ಮುಖ್ಯವಾಗಿ ಶ್ವಾಸಕೋಶದ ಮೇಲೆ ದಾಳಿ ಮಾಡುತ್ತದೆ. ಇದು ಶ್ವಾಸಕೋಶ ಕ್ಯಾನ್ಸರ್​ಗೆ ಕಾರಣವಾಗುವ ನಂ.1 ಅಂಶವಾಗಿದೆ. ಶ್ವಾಸಕೋಶ ಕ್ಯಾನ್ಸರ್​ನಿಂದ ಸಂಭವಿಸುವ ಸಾವುಗಳಲ್ಲಿ ಶೇ. 87 ಧೂಮಪಾನಕ್ಕೆ ಸಂಬಂಧಿಸಿದ್ದಾಗಿರುತ್ತವೆ. ರೋಗ ನಿರ್ಣಯ ಮಾಡಿದ ಐದು ವರ್ಷಗಳ ಬಳಿಕವೂ ಜೀವಂತವಾಗಿರುವ ಅವಕಾಶ 5 ಮಂದಿಯಲ್ಲಿ ಒಬ್ಬರಿಗೆ ಮಾತ್ರ. ಅದಲ್ಲದೆ ಶ್ವಾಸನಾಳಗಳ ಒಳಪೊರೆಯ ಉರಿಯೂತ, ಅಸ್ತಮಾ, ಎಂಫೆಸೆಮಾ, ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶ ಕಾಯಿಲೆ, ನ್ಯುಮೋನಿಯಾ ಕೂಡ ಧೂಮಪಾನದಿಂದ ಸಂಭವಿಸುತ್ತದೆ.

    ಮಕ್ಕಳ ಭಾಗ್ಯ ಕಸಿಯುವ ಕಡುಪಾಪಿ: ಅವಧಿಪೂರ್ವ ಹೆರಿಗೆ, ಬಂಜೆತನ, ಶೀಘ್ರ ಮುಟ್ಟಿನಂತಹ ಸಮಸ್ಯೆಗಳಿಗೆ ತಂಬಾಕು ಕಾರಣ. ಬ್ರಿಟಿಷ್ ಮೆಡಿಕಲ್ ಜರ್ನಲ್​ನಲ್ಲಿ ಪ್ರಕಟವಾಗಿರುವ ಅಧ್ಯಯನ ಪ್ರಕಾರ ಅಮೆರಿಕದ ಬಳಿಕ ಭಾರತವು ಜಗತ್ತಿನಲ್ಲೇ 2ನೇ ಅತಿ ಹೆಚ್ಚು ಮಹಿಳಾ ಧೂಮಪಾನಿಗಳಿಗೆ ನೆಲೆಯಾಗಿದೆ.

    ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಳ

    ದೇಹದ ಇನ್ಸುಲಿನ್ ಪ್ರತಿರೋಧಕವನ್ನು ತಂಬಾಕು ಗುರಿಯಾಗಿಸುವುದರಿಂದ ರಕ್ತದ ಸಕ್ಕರೆ ಪ್ರಮಾಣ ಹೆಚ್ಚಾಗುತ್ತದೆ. ಅನಿಯಂತ್ರಿತ ಸಕ್ಕರೆ ಮಟ್ಟವು ಮಧುಮೇಹ ಕಾಯಿಲೆಗೆ ಕಾರಣವಾಗಿಸುತ್ತದೆ. ಇದಲ್ಲದೆ, ಜನನಾಂಗ ಸೇರಿದಂತೆ ವಿವಿಧ ಅಂಗಗಳ ರಕ್ತಪರಿಚಲನೆಗೂ ಧೂಮಪಾನ ತೊಡಕು ಉಂಟು ಮಾಡುತ್ತದೆ. ಧೂಮಪಾನಿಗಳಲ್ಲಿ ಕಣ್ಣಿನ ಪೊರೆ ಬೆಳೆಯುವ ಅಪಾಯ ಹೆಚ್ಚು.

    ಧೂಮಪಾನ ಬಿಡೋದು ಹೇಗೆ?

    ‘ಸಾಕಪ್ಪ.. ಈ ಸಿಗರೇಟ್ ಸಹವಾಸ’ ಎಂದು ಮನಸ್ಸಿನಲ್ಲಿ ಅಂದುಕೊಂಡರೂ ಅದನ್ನು ಬಿಡಲಾಗದೇ ಒದ್ದಾಡುತ್ತಿರುವವರಿಗೆ ಕೆಲವು ಉಪಯುಕ್ತ ಟಿಪ್ಸ್ ಇಲ್ಲಿವೆ.

    • ಧೂಮಪಾನಿಗಳು ಕೆಲವು ಸ್ವಯಂ ನಿಯಂತ್ರಣ ಅಭ್ಯಾಸಗಳನ್ನು ಅಳವಡಿಸಿ ಕೊಳ್ಳಬೇಕು.
    • ವೈದ್ಯರು ಸೂಚಿಸುವ ಕೆಲವು ಮಾತ್ರೆಗಳು ಅಥವಾ ಆಕ್ಯುಪ್ರೆಶರ್ ನೆರವು ಪಡೆಯಬಹುದು. ಧೂಮಪಾನ ತ್ಯಜಿಸಲು ಸಹಾಯವಾಗುವಂತಹ ನಿಕೋಟಿನ್ ಪ್ಯಾಚ್ ಹಾಗೂ ನಿಕೋಟಿನ್ ಚ್ಯೂಯಿಂಗ್ ಗಮ್ ಬಳಸಬಹುದು. 
    • ಒಳ್ಳೆಯ ಹವ್ಯಾಸಗಳನ್ನು ಗಂಭೀರವಾಗಿ ಪರಿಗಣಿಸಿ ಅದರಲ್ಲಿ ಹೆಚ್ಚಾಗಿ ತೊಡಗಿಕೊಳ್ಳಿ.
    • ಧ್ಯಾನ, ವಿಶ್ರಾಂತಿ ತಂತ್ರಗಳನ್ನು ಪಾಲಿಸಿ.
    • ಧೂಮಪಾನಿಗಳ ಸಹವಾಸದಿಂದ ದೂರವಿರಲು ಪ್ರಯತ್ನಿಸಿ.
    • ಕೌನ್ಸೆಲರ್ ಸಹಾಯವನ್ನು ಪಡೆದುಕೊಳ್ಳಿ.

    ಧೂಮಪಾನ ಎಷ್ಟು ಅಪಾಯಕಾರಿ?

    • ಧೂಮಪಾನಿಗಳ ಜೀವಿತಾವಧಿಯು ಧೂಮಪಾನಿಗಳಲ್ಲದವರಿಗೆ ಹೋಲಿಸಿದರೆ 10 ವರ್ಷ ಕಡಿಮೆಯಾಗುತ್ತದೆ.
    • ಧೂಮಪಾನಿಗಳು ಬಿಡುವ ಹೊಗೆಯನ್ನು ಆಕಸ್ಮಿಕವಾಗಿ ಸೇವಿಸುವವರಲ್ಲಿ ಹೃದಯಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳುತ್ತಿದ್ದು, ಅದರಿಂದಾಗಿ ಪ್ರತಿ ವರ್ಷ 33,951 ಜನರು ಸಾವನ್ನಪು್ಪತ್ತಿದ್ದಾರೆ.
    • ತಂಬಾಕು ಸೇವನೆಯಿಂದ ಮಧ್ಯವಯಸ್ಕ ಪುರುಷರಲ್ಲಿ ಪರಿಧಮನಿ ಹೃದಯ ಕಾಯಿಲೆ ಉಂಟಾಗುತ್ತಿದ್ದು, ಸಾವಿನ ಅಪಾಯ ನಾಲ್ಕು ಪಟ್ಟು ಹೆಚ್ಚುತ್ತಿದೆ.
    • ವಿಶ್ವ ಆರೋಗ್ಯ ಸಂಸ್ಥೆ (ಡಬ್ಲು್ಯಎಚ್​ಒ) ಪ್ರಕಾರ ತಂಬಾಕಿನಿಂದ ಉಂಟಾಗುವ ಕಾಯಿಲೆಯು ಆರೋಗ್ಯ ಕ್ಷೇತ್ರದಲ್ಲಿ ಅತಿ ದೊಡ್ಡ ಸಮಸ್ಯೆ. ವಿಶ್ವದಾದ್ಯಂತ ವಾರ್ಷಿಕ 60 ಲಕ್ಷ ಜನರನ್ನು ಇದು ಕೊಲ್ಲುತ್ತಿದೆ.
    • 50 ಲಕ್ಷಕ್ಕೂ ಹೆಚ್ಚು ಮಂದಿ ನೇರ ತಂಬಾಕು ಬಳಕೆಯಿಂದ ಮೃತಪಟ್ಟರೆ, 60 ಸಾವಿರಕ್ಕೂ ಹೆಚ್ಚು ಜನರು ತಾವು ಧೂಮಪಾನ ಮಾಡದಿದ್ದರೂ ಧೂಮಪಾನಿಗಳು ಬಿಡುವ ಹೊಗೆಯನ್ನು ಕುಡಿದೇ ಸಾಯುತ್ತಿದ್ದಾರೆ.
    • ಭಾರತದಲ್ಲಿ ಪ್ರತಿ 8 ಸೆಕೆಂಡ್​ಗೆ ಒಬ್ಬರನ್ನು ತಂಬಾಕು ಬಲಿ ತೆಗೆದುಕೊಳ್ಳುತ್ತಿದೆ.
    • ಮಹಾಮಾರಿ ಕರೊನಾ ಕೂಡ ಧೂಮಪಾನಿಗಳಲ್ಲದ ವರಿಗಿಂತ ಧೂಮಪಾನಿಗಳನ್ನೇ ಹೆಚ್ಚಾಗಿ ಕಾಡಿದೆ.

    ವೈದ್ಯರ ಬಳಿ ಹೋಗಲು ನಿಮಗೆ ಇಷ್ಟವಿಲ್ಲವೇ? ಪರವಾಗಿಲ್ಲ, ನೀವೇ ಸ್ಮೋಕಿಂಗ್ ತ್ಯಜಿಸಬಹುದು. ಸಿಗರೇಟ್ ಸೇದುವುದನ್ನು ಏಕಾಏಕಿ ಬಿಡಬೇಡಿ. ಹಾಗೆ ಮಾಡಿದರೆ ತಲೆನೋವು, ಖಿನ್ನತೆ, ಮೈನಡುಕ ಮುಂತಾದ ಸಮಸ್ಯೆಗಳು ಉದ್ಭವಿಸಬಹುದು. ಹೀಗಾಗಿ 3 ಅಥವಾ 5 ದಿನಕ್ಕೊಮ್ಮೆ ಒಂದೊಂದೇ ಸಿಗರೇಟ್ ಬಿಡುತ್ತಾ ಬನ್ನಿ. ಹಂತ ಹಂತವಾಗಿ ತ್ಯಜಿಸಿದರೆ ಆರೋಗ್ಯಕ್ಕೂ ಹಿತಕರ. ಇಷ್ಟೆಲ್ಲ ಮಾಡಲು ನಿಮ್ಮಲ್ಲಿ ದೃಢಸಂಕಲ್ಪ ಇರಬೇಕು. ಏನೇ ಮಾಡಿದರೂ ಸಾಧ್ಯವಾಗುತ್ತಿಲ್ಲ ಅಂದಾಗ ವೈದ್ಯರನ್ನು ಭೇಟಿ ಮಾಡಿ. ಅವರು ಪರ್ಯಾಯ ನಿಕೋಟಿನ್ ಸೂಚಿಸುತ್ತಾರೆ.

    | ಡಾ. ಧನಂಜಯ್ ಎಸ್. ಮನೋವೈದ್ಯರು, ಬೆಂಗಳೂರು

    ಸಾವಿರ ಮಹಿಳೆಯರ ಬಾಯಲ್ಲಿ ಶಿವ ತಾಂಡವ! ಶಿವನ ಭಕ್ತಿಯಲ್ಲಿ ಮಿಂದೆದ್ದ ವಾರಣಾಸಿ

    ಹೆಂಡತಿಯನ್ನು ಸೇರಲೊಪ್ಪದ ಗಂಡ, ಆಕೆಗೆ ದೆವ್ವ ಹಿಡಿದಿದೆ ಎಂದು ಕಿರುಕುಳ ಕೊಟ್ಟ; ಪತಿ, ಅತ್ತೆ-ಮಾವನ ವಿರುದ್ಧ ದೂರಿತ್ತ ಮಹಿಳೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts