More

    ಕಡಿಮೆ ಆಗಲಿದೆ ಎಣ್ಣೆ ರೇಟು!; ಅದಕ್ಕೆಂದೇ ಸರ್ಕಾರ ಕಡಿತಗೊಳಿಸಿದೆ ಸೀಮಾ ಸುಂಕ..

    ನವದೆಹಲಿ: ಲೆಕ್ಕಪ್ರಕಾರ ದೇಶದಲ್ಲಿ ಎಣ್ಣೆ ರೇಟು ನಾಳೆಯಿಂದಲೇ ತಗ್ಗಬೇಕು. ಏಕೆಂದರೆ ಮುಂಬರುವ ಹಬ್ಬಗಳ ಹಿನ್ನೆಲೆಯಲ್ಲಿ ಸರ್ಕಾರ ಖಾದ್ಯತೈಲಗಳ ಬೆಲೆ ಇಳಿಸುವಂಥ ಮಹತ್ವದ ನಿರ್ಧಾರ ಕೈಗೊಂಡಿದೆ. ಅದಕ್ಕಾಗಿ ಖಾದ್ಯತೈಲಗಳಾದ ತಾಳೆ ಎಣ್ಣೆ, ಸೋಯಾಬೀನ್​, ಸನ್​ಫ್ಲವರ್ ಎಣ್ಣೆಗಳ ಮೂಲ ಸೀಮಾ ಸುಂಕವನ್ನು ಸರ್ಕಾರ ಕಡಿತಗೊಳಿಸಿದೆ.

    ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಇಲಾಖೆ ಈ ಮಾಹಿತಿ ತಿಳಿಸಿದ್ದು, ಹೀಗೆ ಸೀಮಾಸುಂಕ ಕಡಿತದಿಂದ ಸರ್ಕಾರಕ್ಕೆ 1100 ಕೋಟಿ ರೂ. ಆದಾಯ ಖೋತಾ ಆಗಲಿದೆ ಎಂಬುದನ್ನೂ ಹೇಳಿದೆ. ಈ ಮೂರೂ ಖಾದ್ಯತೈಲಗಳಿಗೆ ಸಂಬಂಧಿಸಿದಂತೆ ಕ್ರೂಡ್ ಮತ್ತು ರಿಫೈನ್ಡ್​ ಎರಡೂ ವಿಭಾಗದಲ್ಲಿ ಸೀಮಾಸುಂಕ ಕಡಿತಗೊಳಿಸಲಾಗಿದೆ. ಆದರೆ ಕಚ್ಚಾ ತಾಳೆ ಎಣ್ಣೆ ಮೇಲಿನ ಅಗ್ರಿ-ಸೆಸ್​ ಶೇ. 17.5ರಿಂದ ಶೇ. 20ಕ್ಕೆ ಏರಿಸಲಾಗಿದೆ ಎಂದೂ ಇಲಾಖೆ ತಿಳಿಸಿದೆ.

    ಇದನ್ನೂ ಓದಿ: ನದಿ ನೀರಿಗೆ ಬಿದ್ದ ಮಗನನ್ನು ರಕ್ಷಿಸಲು ಹೋದ ಅಮ್ಮನೂ ನೀರುಪಾಲು!

    ಆರ್ಥಿಕ ಇಲಾಖೆಯ ಮಾಹಿತಿ ಪ್ರಕಾರ ಕಚ್ಚಾ ತಾಳೆ ಎಣ್ಣೆ ಮೇಲಿನ ಆಮದು ತೆರಿಗೆಯನ್ನು ಶೇ. 10ರಿಂದ ಶೇ. 2.5ಗೆ ಇಳಿಸಲಾಗಿದೆ. ಕಚ್ಚಾ ಸೋಯಾಬೀನ್​ ಮತ್ತು ಸೂರ್ಯಕಾಂತಿ ಎಣ್ಣೆ ಮೇಲಿನ ಆಮದು ತೆರಿಗೆ ಶೇ. 7.5ರಿಂದ ಶೇ. 2.5ಕ್ಕೆ ಇಳಿಸಲಾಗಿದೆ. ಇದರಿಂದಾಗಿ ಕಚ್ಚಾ ತಾಳೆ, ಸೋಯಾಬೀನ್​ ಹಾಗೂ ಸೂರ್ಯಕಾಂತಿ ಎಣ್ಣೆ ಮೇಲಿನ ಸುಂಕ ಶೇ. 24.75ಕ್ಕೆ ಇಳಿದರೆ, ರಿಫೈನ್ಡ್​ ತಾಳೆ-ಸೋಯಾಬೀನ್​ ಹಾಗೂ ಸೂರ್ಯಕಾಂತಿ ಎಣ್ಣೆ ಮೇಲಿನ ಸುಂಕ ಶೇ. 35.75ಕ್ಕೆ ಇಳಿದಿದೆ. ಈ ಕಡಿತ ಇಂದಿನಿಂದಲೇ ಅನ್ವಯಿಸಲಿದ್ದು, ಮುಂದಿನ ಆದೇಶದವರೆಗೆ ಜಾರಿಯಲ್ಲಿ ಇರಲಿದೆ. ಮಾತ್ರವಲ್ಲ ಈ ಕಡಿತದಿಂದಾಗಿ ಖಾದ್ಯತೈಲದ ಚಿಲ್ಲರೆ ಮಾರಾಟದಲ್ಲಿ ಪ್ರತಿ ಲೀಟರ್ ಮೇಲೆ 4ರಿಂದ 5 ರೂಪಾಯಿ ಕಡಿಮೆ ಆಗಲಿದೆ ಎಂದು ಇಲಾಖೆ ತಿಳಿಸಿದೆ.

    ಇದನ್ನೂ ಓದಿ: ನನಗೂ ಹಣ ಕೊಡು, ಠಾಣೆಗೂ ದುಡ್ಡು ಕೊಡು ಎಂದು ರೌಡಿಶೀಟರ್​ ಬಳಿ ಲಂಚ ಕೇಳಿದ ಇನ್​ಸ್ಪೆಕ್ಟರ್​; ರೌಡಿಶೀಟರ್ ಪರ ಶಾಸಕರ ಶಿಫಾರಸು!

    ದೇಶದಲ್ಲಿ ಖಾದ್ಯತೈಲದ ಬೆಲೆ ಭಾರಿ ಪ್ರಮಾಣದಲ್ಲಿ ಏರುತ್ತಿದ್ದು, ದೇಶದ ಖಾದ್ಯತೈಲದ ಪೂರೈಕೆಯಲ್ಲಿ ಶೇ.60 ಆಮದನ್ನೇ ಅವಲಂಬಿಸಿರುವುದರಿಂದ ಸರ್ಕಾರ ಇಂಥದ್ದೊಂದು ನಿರ್ಧಾರ ಕೈಗೊಂಡಿದೆ. ಇನ್ನು ದೇಶದಲ್ಲಿ ಆಮದು ಮಾಡಿಕೊಳ್ಳುವ ಮೂರು ಅತಿದೊಡ್ಡ ವಸ್ತುಗಳ ಪೈಕಿ ಖಾದ್ಯತೈಲ ಮೂರನೇ ಸ್ಥಾನದಲ್ಲಿದೆ. ಮೊದಲೆರಡು ಸ್ಥಾನದಲ್ಲಿ ಕಚ್ಚಾ ತೈಲ ಹಾಗೂ ಚಿನ್ನ ಇದೆ. (ಏಜೆನ್ಸೀಸ್)

    42 ಸಲ ಸಂಚಾರ ನಿಯಮ ಉಲ್ಲಂಘಿಸಿ ಕೊನೆಗೂ ಸಿಕ್ಕಿಬಿದ್ದ; ಜಂಟಿ ಪೊಲೀಸ್ ಆಯುಕ್ತರ ಅಭಿಮಾನಿ, ಪ್ರೆಸ್​ ಅಂತೆಲ್ಲ ಪೋಸ್ ಕೊಟ್ಟು ತಪ್ಪಿಸಿಕೊಳ್ತಿದ್ದ!

    ಪೊಲೀಸ್ ಬಂಧನದಲ್ಲಿ ನವವಿವಾಹಿತರು; ಮೊನ್ನೆಮೊನ್ನೆಯಷ್ಟೇ ಮದುವೆಯಾದವಳ ವಿರುದ್ಧ ಕಳ್ಳತನ ಆರೋಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts