More

    ಸಂಸ್ಕೃತಿ ಅನಾವರಣದಿಂದ ಮರುಕಳಿಸಿದ ಗತವೈಭವ

    ಗಂಗಾವತಿ: ವಿವಿಧೆತೆಯಲ್ಲಿ ಏಕತೆ ಕಂಡ ದೇಶದಲ್ಲಿ ಸಮೃದ್ಧ ಸಂಸ್ಕೃತಿಯಿದ್ದು, ರಾಜ್ಯದ ಸಂಸ್ಕೃತಿಗೆ ತನ್ನದೇ ಆದ ಇತಿಹಾಸವಿದೆ ಎಂದು ಕೆಆರ್‌ಪಿಪಿ ಗ್ರಾಮೀಣ ಘಟಕದ ಅಧ್ಯಕ್ಷ ಡಿ.ಕೆ.ಆಗೋಲಿ ಹೇಳಿದರು.

    ಇದನ್ನೂ ಓದಿ: ಓದುವ ಸಂಸ್ಕೃತಿಯಿಂದ ಕನ್ನಡ ಸಾಹಿತ್ಯ ಶ್ರೀಮಂತ

    ನಗರದ ಇದ್ಗಾ ಕಾಲನಿಯ ಪ್ರತಿಭಾ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಭಾರತೀಯ ಸಂಸ್ಕೃತಿ ಅನಾವರಣ ಕುರಿತು ಮಂಗಳವಾರ ಆಯೋಜಿಸಿದ್ದ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಅಯಾ ದೇಶದ ಹಿರಿಯ ಸಂಸ್ಕೃತಿ ಮತ್ತು ಇತಿಹಾಸದ ಮೇಲೆ ಅವಲಂಭಿತವಾಗಿದ್ದು, ಸಂಸ್ಕೃತಿಯ ವೈಭವ ಇತರೆ ರಾಷ್ಟ್ರಗಳಿಗೂ ಮಾದರಿಯಾಗಿದೆ. ಶಾಲೆಯಿಂದ ಆಯೋಜಿಸಿರುವ ಸಂಸ್ಕೃತಿ ಅನಾವರಣ ಗತವೈಭವ ಮರುಕಳಿಸಿದೆ ಎಂದರು.

    ಪೂರ್ವ ಪ್ರಾಥಮಿಕದಿಂದ ಪ್ರೌಢ ಶಾಲೆ ಮಕ್ಕಳು ಪ್ರಸ್ತುತಪಡಿಸಿದ ವಿವಿಧ ರಾಜ್ಯಗಳ ಸಂಸ್ಕೃತಿ, ದಾರ್ಶನಿಕರ ವೇಷಭೂಷಣ, ಕೃಷಿ ಸಂಪತ್ತು ಮತ್ತು ಇತಿಹಾಸದ ಮಾದರಿಗಳು ಗಮನಸೆಳೆದವು.

    ಸಂಸ್ಥೆ ಅಧ್ಯಕ್ಷೆ ಪುಟ್ಟಮ್ಮ ಗಿಡ್ಡಿ, ಕಾರ್ಯದರ್ಶಿ ಎಚ್. ಅರುಣ್ ಗಿಡ್ಡಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಹನುಮಂತಪ್ಪ, ಕಲಾವಿದೆ ಸಿ.ಮಹಾಲಕ್ಷ್ಮಿ, ಮಾಜಿ ಅಧ್ಯಕ್ಷ ಚಾಂದ್ ಪಾಶಾ, ಶಿಕ್ಷಕ ವಿಜಯಕುಮಾರ, ವಿವಿಧ ಶಾಲೆ ಶಿಕ್ಷಕರಾದ ಮಲ್ಲೇಶಪ್ಪ ಅಡ್ಡೇದಾರ್,

    ಶ್ರೀದೇವಿ ಶಿವಾನಂದ, ಹನುಮಂತಪ್ಪ ಗಿಡ್ಡಿ, ಗವಿಸಿದ್ದಪ್ಪ ಹೂಗಾರ, ಬಲಭೀಮಸೇಚಾರ್, ಶಾಲೆ ಮುಖ್ಯಶಿಕ್ಷಕ ಕೆಂಚಪ್ಪ ಮಾಳಮ್ಮನವರ್, ಸಹಶಿಕ್ಷಕರಾದ ಮಂಜುನಾಥ, ಶಿವಲೀಲಾ, ಎಲ್.ಲಕ್ಷ್ಮೀ, ಬಿ. ಜ್ಯೋತಿ, ಬಿ.ಸರೋಜಾ, ರೂಪಾ, ಲಕ್ಷ್ಮಣ, ಜಗನ್ನಾಥ ಬಾಬು, ಪಿ.ಲತಾ, ಅರುಣಾ, ಶಮಿನಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts