More

    ನೀವು 1.67 ಲಕ್ಷ ಹೂಡಿಕೆ ಮಾಡಿದ್ದರೆ ಒಂದೇ ವರ್ಷದಲ್ಲಿ ಕೋಟ್ಯಧಿಪತಿ: 2023ರಲ್ಲಿ ಬಂಪರ್​ ಲಾಭ ನೀಡಿದ ಷೇರು ಇದು

    ಮುಂಬೈ: ಷೇರು ಮಾರುಕಟ್ಟೆಯಲ್ಲಿ 2023ರಲ್ಲಿ ಅಸಾಮಾನ್ಯ ಬೆಳಗವಣಿಗಳು ಜರುಗಿದವು. 2023ರ ವರ್ಷಾರಂಭದಲ್ಲಿ ಷೇರು ಸೂಚ್ಯಂಕ ಅಂದಾಜು 10% ಕುಸಿತವನ್ನು ಕಂಡಿತು. ಇದರ ನಂತರ ಒಂದು ಅಪಾರ ಏರಿಕೆ ಕಂಡುಬಂದಿತು. ಪ್ರಾಥಮಿಕವಾಗಿ ಎಫ್‌ಐಐ (ವಿದೇಶಿ ಸಾಂಸ್ಥಿಕ ಹೂಡಿಕೆದಾರರ) ಖರೀದಿಯಿಂದಾಗಿ ಇದು ಸಾಧ್ಯವಾಯಿತು.

    ಒಟ್ಟಾರೆಯಾಗಿ ಷೇರು ಮಾರುಕಟ್ಟೆಯು 2023ರಲ್ಲಿ ಶೇಕಡಾ 20ರಷ್ಟು ಏರಿಕೆ ದಾಖಲಿಸುವ ಮೂಲಕ ಈ ವರ್ಷದಲ್ಲಿ ಹೂಡಿಕೆದಾರರಿಗೆ ಉತ್ತಮ ಆದಾಯವನ್ನು ತಂದುಕೊಟ್ಟಿತು.

    ಈ ವರ್ಷದಲ್ಲಿ ಅತಿ ಹೆಚ್ಚು ಏರಿಕೆ ಕಂಡ ಷೇರು ಯಾವುದು ಗೊತ್ತೆ? ಒಂದು ವರ್ಷದಲ್ಲಿ ಈ ಷೇರು ಬೆಲೆ ಹೆಚ್ಚಿದ್ದು ಎಷ್ಟು?
    ಎಂಬುದು ಕುತೂಹಲಕಾರಿಯಾಗಿದೆ.

    ಪ್ರಿಂಟೆಡ್​ ಸರ್ಕ್ಯೂಟ್ ಬೋರ್ಡ್‌ಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿರುವ ಹಾಗೂ ಕಡಿಮೆ ಪರಿಚಿತ ಕಂಪನಿಯ ಷೇರು ಕಳೆದ ವರ್ಷದಲ್ಲಿ ಅಪಾರ ಏರಿಕೆ ಕಂಡ ಸ್ಟಾಕ್​ ಆಗಿದೆ. ಇದೇ ಇಂಟಿಗ್ರೇಟೆಡ್ ಇಂಡಸ್ಟ್ರೀಸ್ (Integrated Industries) ಕಂಪನಿ.

    ಈ ಷೇರಿನ ಬೆಲೆ 7 ರೂಪಾಯಿ ಇದ್ದುದು 2023ರ ಡಿಸೆಂಬರ್ ತಿಂಗಳಲ್ಲಿ ಅಂದಾಜು 466 ರೂಪಾಯಿಗೆ ಏರಿಕೆಯಾಗಿದೆ.
    2023 ರ ಜನವರಿಯಿಂದ ಒಂದು ವರ್ಷದ ಅವಧಿಯಲ್ಲಿ ಶೇಕಡಾ 6,000ಕ್ಕಿಂತ ಹೆಚ್ಚು ಹೆಚ್ಚಳವನ್ನು ಈ ಕಂಪನಿಯ ಷೇರುಗಳು ಕಂಡಿವೆ. ಈ ಮೂಲಕ ಅತಿಹೆಚ್ಚು ಏರಿಕೆ ಕಂಡ ಭಾರತ ಸ್ಟಾಕ್ ಎಂಬ ಗರಿ ಇದರದ್ದಾಗಿದೆ.

    ಒಂದು ವರ್ಷದ ಹಿಂದೆ, ಅಂದರೆ ಜನವರಿ 2023ರಲ್ಲಿ ಈ ಷೇರಿನಲ್ಲಿ ನೀವು 1 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದರೆ ಅದು 60 ಲಕ್ಷ ರೂಪಾಯಿ ಆಗುತ್ತಿತ್ತು. 1,66,666 ರೂಪಾಯಿ ಹೂಡಿಕೆ ಮಾಡಿದ್ದರೆ ಒಂದು ಕೋಟಿ ರೂಪಾಯಿ ಆಗುತ್ತಿತ್ತು.

    ಅಲ್ಲದೆ, 2024ರ ಜನವರಿಯಲ್ಲೂ ಇದೇ ರೀತಿಯಲ್ಲಿ ಏರಿಕೆಯನ್ನು ಕಾಣುತ್ತಿದೆ. ಈಗ ಗುರುವಾರ (ಜ. 18) ಈ ಷೇರಿನ ಬೆಲೆ 515.10 ರೂಪಾಯಿಗೆ ಏರಿಕೆಯಾಗಿದೆ.

    ಇಂತಹ ಅದ್ಭುತ ಷೇರು ಬೆಲೆ ಹೆಚ್ಚಳವು ಈ ಕಂಪನಿಯ ಮಾರುಕಟ್ಟೆ ಬಂಡವಾಳವನ್ನು 400 ಕೋಟಿ ರೂಪಾಯಿಗೆ ವರ್ಧಿಸಿದೆ.

    ಇಂಟಿಗ್ರೇಟೆಡ್ ಇಂಡಸ್ಟ್ರೀಸ್ ಕಂಪನಿಯು ಮೂಲತಃ ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್ (ಪಿಸಿಬಿ) ತಯಾರಿಕೆಯಲ್ಲಿ ತೊಡಗಿಸಿಕೊಂಡಿದೆ. ಕಂಪನಿಯು ಟುನೀಶಿಯಾ ಮೂಲದ ಪಿಸಿಬಿ ಪೂರೈಕೆದಾರರಾದ ಫ್ಯುಬಾ ಪ್ರಿಂಟೆಡ್ ಸರ್ಕ್ಯೂಟ್ಸ್ ಜಿಎಂಬಿಎಚ್​ ಎಂಬ ಕಂಪನಿಯ ಮೂಲಕ ತಂತ್ರಜ್ಞಾನವನ್ನು ಪಡೆದುಕೊಂಡು ಉತ್ತಮ ಗುಣಮಟ್ಟದ ಸಿಂಗಲ್​ ಸೈಡೆಡ್​, ಡಬಲ್ ಸೈಡೆಡ್ ಮತ್ತು ಮಲ್ಟಿಲೇಯರ್ ಪಿಸಿಬಿಗಳನ್ನು ತಯಾರಿಸುತ್ತದೆ.

    ಕಳೆದ ವರ್ಷ ನವೆಂಬರ್‌ನಲ್ಲಿ, ಕಂಪನಿಯು ಪ್ರಮುಖ ಪುನಶ್ಚೇತನಕ್ಕೆ ಒಳಗಾಯಿತು, ಇಲ್ಲಿ ಹೊಸ ಪ್ರವರ್ತಕರು ಐಪಿಒ ಮೂಲಕ ಷೇರುಗಳನ್ನು ಸ್ವಾಧೀನಪಡಿಸಿಕೊಂಡರು.

    ಮ್ಯೂಚುಯಲ್ ಫಂಡ್ ವಿತರಕರಿಗೆ ಆಮಿಷ: ಫಂಡ್​ ಹೌಸ್​ಗಳಿಗೆ ಸೆಬಿ ಎಚ್ಚರಿಕೆ ನೀಡಿದ್ದೇಕೆ?

    ನೀವು 1 ಲಕ್ಷ ರೂ. ಹೂಡಿದ್ದರೆ ಈಗ ಶತಕೋಟ್ಯಧೀಶರಾಗುತ್ತಿದ್ದೀರಿ: ಭಾರತದ ಅತ್ಯಂತ ದುಬಾರಿ ಸ್ಟಾಕ್​ನ ಮಹಿಮೆ

    ಜನ್ಮ ದಿನಾಂಕಕ್ಕೆ ಪುರಾವೆಯಾಗದು ಆಧಾರ್​ ಕಾರ್ಡ್​: ಹಾಗಿದ್ದರೆ ನೀವು ನೀಡಬೇಕಾದ ಬೇರೆ ದಾಖಲೆಗಳೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts