More

    ಮದುವೆಗೂ ಮುಂಚೆ ಅಪ್ಪನಾದ ಕ್ರಿಕೆಟಿಗರು..

    ಬೆಂಗಳೂರು: ಕ್ರಿಕೆಟ್ ಜಗತ್ತಿನಲ್ಲಿ ಮಿಂಚುವ ಪ್ರತಿಯೊಬ್ಬ ಆಟಗಾರನೂ ಯಾವ ಸೆಲೆಬ್ರಿಟಿಗಳಿಗೇನು ಕಮ್ಮಿಯಿಲ್ಲ. ಅದರಲ್ಲೂ ಐಪಿಎಲ್ ಶುರುವಾರ ಮೇಲೆ ಆಟಗಾರರಿಗೆ ಡಿಮ್ಯಾಂಡ್ ಕೂಡ ಅಷ್ಟೇ ಹೆಚ್ಚಾಗಿದೆ. ಭಾನುವಾರವಷ್ಟೇ ಹಾರ್ದಿಕ್ ಪಾಂಡ್ಯ ಅಪ್ಪನಾಗುತ್ತಿರುವ ವಿಷಯ ಬಹಿರಂಗಪಡಿಸಿದರು. ಮದುವೆಗೂ ಮುಂಚೆಯೇ ಪಾಂಡ್ಯ ಅಪ್ಪನಾಗುತ್ತಿದ್ದಾರೆ. ಇದಕ್ಕೂ ಮೊದಲು ಮದುವೆಗೂ ಮುಂಚೆಯೇ ಅಪ್ಪನಾದ ಕೆಲ ಕ್ರಿಕೆಟಿಗರಿದ್ದಾರೆ. ಅವರೆಂದರೆ, ವೆಸ್ಟ್ ಇಂಡೀಸ್ ಕ್ರಿಕೆಟ್‌ನ ದಂತ ಕಥೆಗಳಾದ ಸರ್ ವಿವಿಯನ್ ರಿಚರ್ಡ್ಸ್, ಕ್ರಿಸ್ ಗೇಲ್, ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್, ಇಂಗ್ಲೆಂಡ್‌ನ ಜೋ ರೂಟ್, ಭಾರತದ ಮಾಜಿ ಆಟಗಾರ ವಿನೋದ್ ಕಾಂಬ್ಳಿ ಈ ಸಾಲಿಗೆ ನಿಲ್ಲುತ್ತಾರೆ.ಮದುವೆಗೂ ಮುಂಚೆ ಅಪ್ಪನಾದ ಕ್ರಿಕೆಟಿಗರು..

    ಇದನ್ನೂ ಓದಿ:ಅಮ್ಮನಾಗುತ್ತಿದ್ದಾರೆ ಟೆನಿಸ್ ತಾರೆ ಬಾರ್ತೋಲಿ

    ಮದುವೆಗೂ ಮುಂಚೆ ಅಪ್ಪನಾದ ಕ್ರಿಕೆಟಿಗರು..ವೆಸ್ಟ್ ಇಂಡೀಸ್ ವಿವಿಯನ್ ರಿಚರ್ಡ್ಸ್, ಭಾರತ ಮೂಲದ ನಟಿ ನೀನಾ ಗುಪ್ತಾ ಜತೆಗೆ ಡೇಟಿಂಗ್ ಮಾಡುತ್ತಿದ್ದರು. ಈ ಜೋಡಿಗೆ ಹೆಣ್ಣು ಜನಿಸಿತು. ಬಳಿಕ ವಿವಿಯನ್ ರಿಚರ್ಡ್ಸ್ ಹಾಗೂ ನೀನಾ ಗುಪ್ತಾ ಬೇರೆಯಾದರು. ಮಗಳು ತಾಯಿ ನೀನಾ ಜತೆ ಇದ್ದಾಳೆ. ಇಂಗ್ಲೆಂಡ್‌ನ ಜೋ ರೂಟ್ ಅವರ ಬಹುಕಾಲದ ಗೆಳತಿ ಕ್ಯಾರೀ ಕೊಟ್ರೆಲ್ 2017ರಲ್ಲಿ ಗಂಡು ಮಗುವಿಗೆ ಜನ್ಮನೀಡಿದರು. ಆ ಬಳಿಕವಷ್ಟೇ ಈ ಜೋಡಿ ಅಧಿಕೃತವಾಗಿ ಮದುವೆಯಾಯಿತು. ವೆಸ್ಟ್ ಇಂಡೀಸ್ ಕ್ರಿಕೆಟ್‌ನ ಸ್ಫೋಟಕ ಬ್ಯಾಟ್ಸ್‌ಮನ್ ಕೂಡ ಮದುವೆ ಮುಂಚೆ ತಂದೆಯಾಗಿದ್ದರು. ಮದುವೆಗೂ ಮುಂಚೆ ಅಪ್ಪನಾದ ಕ್ರಿಕೆಟಿಗರು..ಗೆಳತಿ ನತಾಶಾ ಮದುವೆಗೂ ಮುಂಚೆ ಹೆಣ್ಣು ಮಗುವಿಗೆ ಜನ್ಮನೀಡಿದ್ದರು. ಕೆಲ ವರ್ಷಗಳ ಬಳಿಕ ಈ ಜೋಡಿ ಅಧಿಕೃತವಾಗಿ ಮದುವೆಯಾಯಿತು. ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಕೂಡ ಮದುವೆಗೂ ಮುಂಚೆ ಅಪ್ಪನಾಗಿದ್ದರು. 2014ರಲ್ಲಿ ಬಹುಕಾಲದ ಗೆಳತಿ ಕ್ಯಾಂಡೈಸ್‌ರನ್ನು ವರಿಸಿದರು.

    ಭಾರತೀಯ ಕ್ರಿಕೆಟ್‌ನಲ್ಲಿ ಬ್ಯಾಡ್ ಬಾಯ್ ಎನಿಸಿಕೊಂಡ ವಿನೋದ್ ಕಾಂಬ್ಳಿ ಕೂಡ ಇವರ ಸಾಲಿನಲ್ಲಿ ನಿಲ್ಲುತ್ತಾರೆ. ಮೊದಲ ಪತ್ನಿಗೆ ವಿಚ್ಛೇದನ ನೀಡಿದ ಬಳಿಕ ಮಾಡೆಲ್ ಅಂಡ್ರಿಯಾ ಹೆವಿಟ್‌ರನ್ನು ಮದುವೆಯಾದರು. ಮದುವೆಗೂ ಮುಂಚೆಯೇ ಈ ಜೋಡಿಗೆ ಗಂಡು ಮಗುವಿನ ಜನನವಾಗಿತ್ತು. ಮದುವೆಗೂ ಮುಂಚೆ ಅಪ್ಪನಾದ ಕ್ರಿಕೆಟಿಗರು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts