More

  #RIPHardikPandya: ಟ್ರೆಂಡಿಂಗ್​ನಲ್ಲಿ ಮುಂಬೈ ಇಂಡಿಯನ್ಸ್​ ಕ್ಯಾಪ್ಟನ್​! ಕೇಳಿಬರುತ್ತಿದೆ ವ್ಯಾಪಕ ಆಕ್ರೋಶ

  ನವದೆಹಲಿ: ಐಪಿಎಲ್​ 2024ರ ಆವೃತ್ತಿಗೆ ಈಗಾಗಲೇ ದಿನಗಣನೆ ಆರಂಭಗೊಂಡಿದ್ದು, ಇದಕ್ಕೂ ಮೊದಲೇ ಮುಂಬೈ ಇಂಡಿಯನ್ಸ್​ ತಂಡದ ನೂತನ ಕ್ಯಾಪ್ಟನ್​ ಹಾರ್ದಿಕ್ ಪಾಂಡ್ಯ ವಿರುದ್ಧ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಮುಂಬರುವ ಐಪಿಎಲ್​ ಸೀಸನ್​ಗೂ ಮುನ್ನ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾರ್ಕ್​ ಬೌಚರ್​ ಮತ್ತು ಹಾರ್ದಿಕ್​ ಭಾಗಿಯಾಗಿದ್ದರು. ಈ ಪ್ರೆಸ್​ಮೀಟ್​ ನಡೆದ ಕೆಲವೇ ಗಂಟೆಗಳಲ್ಲಿ ಕ್ರಿಕೆಟ್ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಅಸಮಾಧಾನ ಹೊರಹಾಕುತ್ತಿದ್ದಾರೆ.

  ಇದನ್ನೂ ಓದಿ: Gold, Silver Price; ಚಿನ್ನದ ದರದಲ್ಲಿ ನಿರಂತರ ಏರಿಕೆ, ಬೆಳ್ಳಿ ಬೆಲೆ ತುಸು ಇಳಿಕೆ…


  ಪತ್ರಿಕಾಗೋಷ್ಠಿಯ ಬೆನ್ನಲ್ಲೇ ಮುಂಬೈ ಇಂಡಿಯನ್ಸ್​ಗೆ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಹಿನ್ನಡೆ ಉಂಟಾಗಿದೆ. ಹಾರ್ದಿಕ್​ ವಿರುದ್ಧ ಅಸಮಾಧಾನಗೊಂಡ ಕ್ರಿಕೆಟ್​ ಅಭಿಮಾನಿಗಳು ಎಕ್ಸ್​ನಲ್ಲಿ (ಈ ಹಿಂದಿನ ಟ್ವಿಟರ್​​) ರೋಹಿತ್​ ಶರ್ಮಾ ಅವರ ಕ್ರಿಕೆಟಿಂಗ್​ ಶಾಟ್ಸ್​ ಮತ್ತು ಫೋಟೋಗಳನ್ನು ಹಾಕಿ, ಅದರ ಕೆಳಗೆ #RIPHardikPandya ಎಂದು ಹ್ಯಾಶ್​ಟ್ಯಾಗ್ ಬಳಸಿ ಪೋಸ್ಟ್​ ಮಾಡುತ್ತಿದ್ದಾರೆ. ಸದ್ಯ ಇದು ಟ್ರೆಂಡಿಂಗ್​ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನ ಪಡೆದಿದೆ.

  ಮುಂಬೈ ಇಂಡಿಯನ್ಸ್ ತಂಡ ನಾಯಕತ್ವದಿಂದ ರೋಹಿತ್ ಶರ್ಮಾರನ್ನು ವಜಾಗೊಳಿಸಿದ ಬೆನ್ನಲ್ಲೇ ಐದು ಬಾರಿ ಟೀಮ್​ನ ಗೆಲುವಿನ ಹಾದಿಗೆ ಕರೆದೊಯ್ದು, ಚಾಂಪಿಯನ್‌ ಆಗಿ ಮಾಡಿದ ರೋಹಿತ್​ ಅವರ ನಾಯಕನ ಸ್ಥಾನವನ್ನು ಹಾರ್ದಿಕ್​ಗೆ ಕೊಟ್ಟಿದ್ದಕ್ಕೆ ಎಂಐ ಮ್ಯಾನೇಜ್‌ಮೆಂಟ್ ಮತ್ತು ಮಾಲೀಕರ ಮೇಲೆ ಕ್ರಿಕೆಟ್​ ಅಭಿಮಾನಿಗಳು ಭಾರೀ ಅಸಮಾಧಾನಗೊಂಡಿದ್ದರು. ಇದು ಮುಂದಿನ ದಿನಗಳಲ್ಲಿ ಸರಿ ಹೋಗುತ್ತದೆ ಎಂದೇ ಎಲ್ಲರೂ ಭಾವಿಸಿದ್ದರು. ಆದ್ರೆ, ಇದ್ಯಾಕೋ ಮುಗಿಯವಂತೆ ಕಾಣುತ್ತಿಲ್ಲ.

  ಕಳೆದ ವರ್ಷ ಗುಜರಾತ್ ಟೈಟನ್ಸ್​ ಕೈಬಿಟ್ಟು ದಿಢೀರ್​ ಮುಂಬೈ ಇಂಡಿಯನ್ಸ್​ ಸೇರ್ಪಡೆಗೊಂಡ ಪಾಂಡ್ಯ, ತಂಡದ ಕ್ಯಾಪ್ಟನ್ ಸ್ಥಾನ ಪಡೆದರು. ಈ ಬಗ್ಗೆ ಕ್ರಿಕೆಟ್​ ಫ್ಯಾನ್ಸ್​ಗೆ ಕಿಂಚಿತ್ತು ಇಷ್ಟವಿರಲಿಲ್ಲ. ಬದಲಾವಣೆ ಮಾಡಿ ಎಂದು ಇದೇ ಸಾಮಾಜಿಕ ಜಾಲತಾಣದಲ್ಲಿ ಟೀಮ್​ ಮ್ಯಾನೆಜ್​ಮಂಟ್​ಗೆ ಒತ್ತಾಯಿಸಲಾಗಿತ್ತು. ಆದ್ರೂ ಸಹ ಕೋಚ್ ಸೇರಿದಂತೆ​ ಯಾರು ಕೂಡ ಇದಕ್ಕೆ ಒಪ್ಪದೆ, ತಮ್ಮ ನಿಲುವನ್ನು ಸಮರ್ಥಿಸಿಕೊಂಡರು. 

  ಯಾವಾಗ ಹಾರ್ದಿಕ್​ ಮುಂಬೈ ತಂಡದ ನೂತನ ನಾಯಕ ಎಂದು ಘೋಷಣೆಯಾಯಿತೋ ಅಂದೇ ಪಾಂಡ್ಯ ವಿರುದ್ಧ ಕ್ರಿಕೆಟ್​ ಅಭಿಮಾನಿಗಳು ಕಿಡಿಕಾರಲು ಪ್ರಾರಂಭಿಸಿದರು. ಅಂದಿನಿಂದ ಇಂದಿನವರೆಗೂ ಈ ಅಸಮಾಧಾನ ಕಡಿಮೆಯಾಗುವಂತೆ ತೋರುತ್ತಿಲ್ಲ. ಇದೇ ಮಾರ್ಚ್​ 22ರಿಂದ ಐಪಿಎಲ್​ ಪಂದ್ಯಗಳು ಸ್ಟಾರ್ಟ್​ ಆಗಲಿದ್ದು, ನಾಯಕನಾಗಿ ಹಾರ್ದಿಕ್​ ಹೇಗೆ ತಮ್ಮ ತಂಡವನ್ನು ಮುನ್ನಡೆಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ,(ಏಜೆನ್ಸೀಸ್). 

  ಶ್ರೀಲೀಲಾ ಜತೆ ನಟಿಸಲು ಸ್ಟಾರ್​ ನಟರಿಗೆ ಚಿಂತೆ! ಇದು ಮುಂದುವರಿದ್ರೆ ‘ಕಿಸ್’​ ಬೆಡಗಿಗೆ ಸಂಕಷ್ಟ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts