More

    ಸಾಂಕ್ರಾಮಿಕ ರೋಗ ತಡೆಗೆ ಜಾಗೃತಿ ಮೂಡಿಸಿ

    ನರಗುಂದ: ಮಲೇರಿಯಾ ವಿರೋಧಿ ಮಾಸಾಚರಣೆ ಅಂಗವಾಗಿ ಪಟ್ಟಣದ ಬಾಬಾಸಾಹೇಬ ಭಾವೆ ಸರ್ಕಾರಿ ತಾಲೂಕು ಆಸ್ಪತ್ರೆಯಲ್ಲಿ ತಾಲೂಕಿನ ಎಲ್ಲ ಪ್ರಾಥಮಿಕ ಮತ್ತು ಪ್ರೌಢಶಾಲೆ ವಿಜ್ಞಾನ ಶಿಕ್ಷಕರಿಗಾಗಿ ಮಂಗಳವಾರ ಹಮ್ಮಿಕೊಂಡಿದ್ದ ಉಚಿತ ಕಾರ್ಯಾಗಾರವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಜೆ. ರಾಜು ಉದ್ಘಾಟಿಸಿದರು.

    ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಜಿ.ವಿ.ಕೊಣ್ಣೂರ ಮಾತನಾಡಿ, ಪ್ರತಿವರ್ಷ ಮಳೆಗಾಲದ ಆರಂಭದಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಸಲುವಾಗಿ ಮಲೇರಿಯಾ ವಿರೋಧಿ ಮಾಸಾಚರಣೆ ಆಚರಿಸಲಾಗುತ್ತದೆ. ಮಲೇರಿಯಾಮುಕ್ತ ಭಾರತ ಮಾಡುವಲ್ಲಿ ಎಲ್ಲರ ಜವಾಬ್ದಾರಿ ಇದೆ. ಕಾರ್ಯಾಗಾರದಲ್ಲಿ ಹಾಜರಿರುವ ಎಲ್ಲ ಶಿಕ್ಷಕರು ಇಲ್ಲಿ ಮಾಹಿತಿ ಪಡೆದುದುಕೊಂಡು, ಶಾಲೆಯ ವಿದ್ಯಾರ್ಥಿಗಳು ಮತ್ತು ಸಹ ಶಿಕ್ಷಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.

    ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ.ಎಸ್.ಎಸ್. ನೀಲಗುಂದ ಮಾತನಾಡಿ, ಮಲೇರಿಯಾ, ಚಿಕುನ್‌ಗುನ್ಯಾ, ಮಿದುಳು ಜ್ವರ ಮತ್ತು ಆನೆಕಾಲು ರೋಗಗಳು ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತವೆ. ಸೊಳ್ಳೆಗಳ ನಿಯಂತ್ರಣ ಮಾಡಿದಲ್ಲಿ ಈ ರೋಗಗಳನ್ನು ನಿಯಂತ್ರಣ ಮಾಡಬಹುದು ಎಂದು ತಿಳಿಸಿದರು.

    ಕ್ಷೇತ್ರ ಶಿಕ್ಷಣಾಧಿಕಾರಿ ಜೆ. ರಾಜು, ಸಹಾಯಕ ಕೀಟಶಾಸ್ತ್ರಜ್ಞೆ ಅನ್ನಪೂರ್ಣಾ ಶೆಟ್ಟರ, ಈರಣ್ಣ ಚಿಲ್ಮಿ, ಉಪ ಆರೋಗ್ಯ ಶಿಕ್ಷಣಾಧಿಕಾರಿ ಗೀತಾ ಕಾಂಬಳೆ, ಪಂಕಜಾ ಮೈತ್ರಿ ಮಾತನಾಡಿದರು. ಸಿ.ಎಫ್. ಕುಂಬಾರ, ವಿಕ್ರಂ ಬೂಸರಡ್ಡಿ, ಎನ್.ಐ. ವಿಠ್ಠಪ್ಪನವರ, ಎಚ್.ಬಿ. ಕೊಳ್ಳನ್ನವರ, ಬಿ.ಎಪ್. ಮಜ್ಜಗಿ, ಡಾ.ವಿ.ಎಚ್. ಪವಾರ, ಎಂ.ಪಿ. ಶಿಗ್ಗಾವಂಕರ, ರೇಖಾ ಹಿರೇಹೊಳಿ, ಎಸ್.ಎಚ್. ಕಲೂತಿ, ಬಿ.ಎಂ. ಕೌಜಗೇರಿ, ಎಸ್.ಬಿ. ಕುರಹಟ್ಟಿ, ಎಂ,ಎಂ. ಮಸೂತಿಮನಿ, ಈರಣ್ಣ ಗೂಳನ್ನವರ, ಬಿ.ಎಂ. ಇಟಿಗಟ್ಟಿ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts