More

  ಆರೋಗ್ಯ ವೃದ್ಧಿಗೆ ಸಿರಿಧಾನ್ಯ ಪೂರಕ

  ಕಡೂರು: ಆರೋಗ್ಯ ವೃದ್ಧಿಗೆ ಸಿರಿಧಾನ್ಯಗಳ ಬಳಕೆ ಹೆಚ್ಚು ಉಪಯುಕ್ತ ಎಂದು ಅಜ್ಜಂಪುರ ತಾಲೂಕಿನ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ವಿಭಾಗದ ಯೋಜನಾಧಿಕಾರಿ ಜಯಾನಂದ್ ತಿಳಿಸಿದರು.

  ತಾಲೂಕಿನ ಯಳ್ಳಂಬಳಸೆ ಗ್ರಾಮದಲ್ಲಿ ಭಾನುವಾರ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ವಿಭಾಗದಿಂದ ಏರ್ಪಡಿಸಿದ್ದ ಸಿರಿಧಾನ್ಯಗಳ ಬೆಳೆಗೆ ಪೂರಕವಾದ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿ, ಸಿರಿಧಾನ್ಯಗಳೆಂದರೆ ಕೇವಲ ಸಾಂಪ್ರದಾಯಿಕ ಕೃಷಿಯಲ್ಲ, ಇದೊಂದು ವಿಶೇಷ ಹಾಗೂ ವೈಶಿಷ್ಟೃ ಕೃಷಿಯಾಗಿದೆ. ಇವುಗಳಿಂದ ತಯಾರಿಸಬಹುದಾದ ಖಾದ್ಯಗಳು, ಅವುಗಳಲ್ಲಿರುವ ಪೌಷ್ಟಿಕತೆಯ ಬಗ್ಗೆ ಮನವರಿಕೆ ಮಾಡುವ ಕೆಲಸ ಸಂಸ್ಥೆಯಿಂದ ಮಾಡಲಾಗುತ್ತಿದೆ ಎಂದರು.
  ಜನರ ಜೀವನ ಶೈಲಿ ಬದಲಾಗುತ್ತಿದ್ದಂತೆ ಸಾಂಪ್ರದಾಯಿಕ ಹಾಗೂ ಆರೋಗ್ಯಕರ ತಿನಿಸುಗಳು ದೂರವಾಗಿವೆ. ರಾಗಿ, ಸಜ್ಜೆ, ನವಣೆ, ಬರಗು, ಸಾಮೆ, ಊದಲು ಸೇರಿದಂತೆ ಮೊದಲಾದ ಸಿರಿಧಾನ್ಯಗಳಲ್ಲಿ ಪೋಷಕಾಂಶ ಯಥೇಚ್ಛವಾಗಿದೆ. ಸಿರಿಧಾನ್ಯಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ರೋಟಿನ್ ಮತ್ತು ನಾರಿನಾಂಶಗಳು ಸಿಗಲಿದೆ ಎಂದರು.
  ಅಜ್ಜಂಪುರ ತಾಲೂಕು ಯೋಜನಾಧಿಕಾರಿ ಸಂಜೀವ್‌ಗೌಡ, ಜಯರಾಮ್, ಕೃಷಿ ಮೇಲ್ವಿಚಾರಕ ಅಭಿಷೇಕ್, ದಿವಾಕರ್ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts