More

    ಅವನು ಬಂದಾಗ ಕಾರ್ಯಕರ್ತರು ಹಲ್ಲು ಗಿಂಜುತ್ತಾರೆ… ಎಚ್​ಡಿಕೆ ವಿರುದ್ಧ ನಾಲಗೆ ಹರಿಬಿಟ್ಟ ಯೋಗೇಶ್ವರ್​

    ರಾಮನಗರ: ಎಚ್​.ಡಿ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಜನರ ಕೈಗೆ ಸಿಗುತ್ತಿರಲಿಲ್ಲ. ಬೆಳಗ್ಗೆ 6 ಗಂಟೆಗೆ ಹೋದರೂ ಜನರನ್ನ ಆತ ಮನೆಗೆ ಸೇರಿಸುತ್ತಿರಲಿಲ್ಲ. ಅಧಿಕಾರ ಕಳೆದುಕೊಂಡ ಬಳಿಕ ಅವನೀಗ ಬೆಳಗ್ಗೆ 6 ಗಂಟೆಗೆ ಚನ್ನಪಟ್ಟಣಕ್ಕೆ ಬರ್ತಿದ್ದಾನೆ. ಜನರ ಜೊತೆ ನಮ್ಮ ದುರಾಹಂಕಾರ ನಡೆಯಲ್ಲ ಎಂಬುದು ಅವನಿಗೀಗ ಗೊತ್ತಾಗಿದೆ ಎಂದು ಎಂಎಲ್​ಸಿ ಸಿ.ಪಿ.ಯೋಗೇಶ್ವರ್​ ಕಿಡಿಕಾರಿದರು.

    ಎಚ್​.ಡಿ.ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್​ ಮತ್ತು ಜೆಡಿಎಸ್​ ಸಮ್ಮಿಶ್ರ ಸರ್ಕಾರವನ್ನು ಸ್ಕೆಚ್​ ಹಾಕಿ ಕೆಡವಿದ್ದು ನಾನೇ ಎಂದು ಯೋಗೇಶ್ವರ್ ಮಾತನಾಡಿದ್ದ ಆಡಿಯೋ ಕಳೆದ ಡಿಸೆಂಬರ್​ನಲ್ಲಿ ವೈರಲ್​ ಆಗಿ ರಾಜ್ಯ ರಾಜಕೀಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಮತ್ತೊಮ್ಮೆ ಅಂದರೆ ಫೆ.25ರಂದು ಎಚ್.ಡಿ.ಕುಮಾರಸ್ವಾಮಿ ವಿರುದ್ಧ ನಾಲಗೆ ಹರಿಯಬಿಟ್ಟ ಸಿ.ಪಿ‌.ಯೋಗೇಶ್ವರ್, ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ. ನಿನ್ನೆ ನಡೆದ ಚನ್ನಪಟ್ಟಣ ಯೋಜನಾ ಪ್ರಾಧಿಕಾರದ ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಪಿವೈ, ಕುಮಾರಸ್ವಾಮಿ ಬಂದಾಗ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರು ಹಲ್ಲು ಗಿಂಜುತ್ತಾರೆ. ಹೂವಿನ ಹಾರ ಹಿಡ್ಕೊಂಡು ಹೋಗ್ತಾರೆ ಅವನಿಗೆ. ಆದರೆ ಅವನು ಅಧಿಕಾರದಲ್ಲಿದ್ದಾಗ ಯಾರಿಗೆ ಅಧಿಕಾರ ಕೊಟ್ಟಿದ್ದಾನೆ? ಎಂದು ಪ್ರಶ್ನಿಸಿದರು. ಇದನ್ನೂ ಓದಿರಿ ಮಧುಬಂಗಾರಪ್ಪ, ಜಿಟಿಡಿ, ಶಶಿಭೂಷಣ್​, ಅಸ್ನೋಟಿಕರ್​ ಜೆಡಿಎಸ್​ ಬಿಡ್ತಾರಾ? ಎಚ್​ಡಿಡಿ ಸ್ಫೋಟಕ ಹೇಳಿಕೆ

    ವಿಧಾನಸೌಧ ಚನ್ನಪಟ್ಟಣದಿಂದ 60 ಕಿ.ಮೀ. ದೂರದಲ್ಲಿದೆ ಅಷ್ಟೆ. ಆದರೆ ಜೆಡಿಎಸ್​ನವರು ಯಾರೆಲ್ಲ ವಿಧಾನಸೌಧದ ಮೆಟ್ಟಿಲು ಹತ್ತಿದ್ದಾರೆ? ಮುಂದಿನ ಏಪ್ರಿಲ್ ನಂತರ ನನ್ನ ರಾಜಕೀಯ ಪ್ರಾರಂಭವಾಗಲಿದೆ. ‘ಇಲ್ಲಿನ ಶಾಸಕ ನಾನು, ಬೇರೆಯವರು ಯಾಕೆ ಬರ್ತಾರೆ?’ ಅಂತಾರೆ ಕುಮಾರಸ್ವಾಮಿ ಎಂದು ಸಿಪಿವೈ ವಾಗ್ದಾಳಿ ನಡೆಸಿದರು.

    ಹಾಗಾಗಿ ಮುಂದಿನ ಏಪ್ರಿಲ್ ನಂತರ ಕ್ಷೇತ್ರ ಪ್ರವಾಸ ಮಾಡ್ತೇನೆ. ಪ್ರತಿಹಳ್ಳಿಗೂ ಭೇಟಿ ಕೊಡ್ತೇನೆ, ಪಕ್ಷ ಸಂಘಟನೆ ಮಾಡ್ತೇನೆ. ಚನ್ನಪಟ್ಟಣ ನನ್ನ ತವರೂರು, ನನಗೆ ರಾಜಕೀಯ ಜನ್ಮ ನೀಡಿದ ತಾಲೂಕು. ನನಗೆ ನೀವು ಬಿಡುವು ಮಾಡಿಕೊಟ್ಟಿದ್ದೀರಿ. ಚನ್ನಪಟ್ಟಣದಿಂದ ರಾಜ್ಯ ಪ್ರವಾಸ ಮಾಡಲು ಅವಕಾಶ ಮಾಡಿಕೊಟ್ಟಿದ್ದೀರಿ. ಸರ್ಕಾರ ನನಗೆ ವಿಧಾನಸೌಧದಲ್ಲಿ ಕಚೇರಿ ಕೊಟ್ಟಿದೆ, ಬೆಂಗಳೂರಿನಲ್ಲಿ ಬಂಗಲೆ ಕೊಟ್ಟಿದೆ. ಜನ ನನಗೆ ಮತಹಾಕದಿದ್ದರೂ ಸಚಿವನಾಗುವ ಶಕ್ತಿ ಕೊಟ್ಟಿದ್ದೀರಿ ಎಂದು ಯೋಗೇಶ್ವರ್​ ಹೇಳಿದರು.

    ಸ್ಕೆಚ್​ ಹಾಕಿ ಕುಮಾರಸ್ವಾಮಿ ಸರ್ಕಾರವನ್ನ ಕೆಡವಿದ್ದು ನಾನೇ… ಎಂದ ಯೋಗೇಶ್ವರ್​ ಆಡಿಯೋ ವೈರಲ್​

    Video| ದೇವರ ಹೆಸರಲ್ಲಿ ಬೆತ್ತಲೆ ಸೇವೆ! ನಡುರಸ್ತೆಯಲ್ಲಿ ಬೆತ್ತಲೆ ಮಹಿಳೆಯ ಮೆರವಣಿಗೆ…

    ಖಾಸಗಿ ಶಾಲೆ ಮಾಲೀಕ ಆತ್ಮಹತ್ಯೆ! ಸಾವಿಗೂ ಮುನ್ನ ಬರೆದ ಡೆತ್​ನೋಟ್​ನಲ್ಲಿದೆ ನೋವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts