More

    100 ದೇಶಗಳಿಗೆ ಮಾದರಿಯಾದ ಕೋವಿನ್! ಲಸಿಕೆ ಸಾಧನೆಯಲ್ಲಿ ಈ ಆ್ಯಪ್​ನ ಪಾತ್ರ ಮಹತ್ತರ

    ನವದೆಹಲಿ: ಭಾರತದ ಕರೊನಾ ಲಸಿಕಾ ಅಭಿಯಾನ ಹಲವು ಮೈಲಿಗಲ್ಲುಗಳೊಂದಿಗೆ ಅಗಾಧ ಯಶಸ್ಸು ಕಾಣುತ್ತಾ ಬಂದಿದೆ. ಇದೀಗ 100 ಕೋಟಿ ಲಸಿಕೆ ಡೋಸ್​ಗಳನ್ನು ನೀಡಿರುವ ಜಗತ್ತಿನ ಎರಡನೇ ರಾಷ್ಟ್ರವಾಗಿ ಭಾರತ ಹೊರಹೊಮ್ಮಿದೆ. ಈ ಸಂದರ್ಭದಲ್ಲಿ ದೇಶದ ಈ ಸಾಧನೆಯಲ್ಲಿ ಲಸಿಕೀಕರಣದ ಪ್ರಕ್ರಿಯೆಯನ್ನು ನಿರ್ವಹಿಸಲು ಬಳಸುತ್ತಿರುವ ಕೋವಿನ್​ ಆ್ಯಪ್​ನ ಪಾತ್ರ ಶ್ಲಾಘನೀಯವಾಗಿದೆ ಎಂದು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ(ಎನ್​ಎಚ್​ಎ)ದ ಸಿಇಒ ಹಾಗೂ ಕೋವಿನ್ ಮುಖ್ಯಸ್ಥ ಡಾ. ಆರ್​.ಎಸ್​.ಶರ್ಮಾ ಹೇಳಿದ್ದಾರೆ.

    ಲಸಿಕಾ ಅಭಿಯಾನವು ಸರಾಗವಾಗಿ, ಕ್ರಮಬದ್ಧವಾಗಿ ಮತ್ತು ಪಾರದರ್ಶಕವಾಗಿ ನಡೆಯುವಲ್ಲಿ ಭಾರತದಲ್ಲೇ ಡಿಸೈನ್​ ಮಾಡಲಾದ ಕೋವಿನ್​ ಆ್ಯಪ್​ ಮಹತ್ತರ ಪಾತ್ರ ವಹಿಸಿದೆ. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಮತ್ತು ಖಾಸಗಿ ಕ್ಷೇತ್ರದ ಸಹಭಾಗಿತ್ವದಲ್ಲಿ ಪ್ರತಿಯೊಂದು ಡೋಸ್​ ಲಸಿಕೆಯನ್ನೂ ಟ್ರ್ಯಾಕ್​ ಮಾಡುವಲ್ಲಿ ಕೋವಿನ್​ ವೇದಿಕೆ ಅತ್ಯಂತ ಮುಖ್ಯ ಪಾತ್ರ ವಹಿಸಿದೆ ಎಂದು ಅವರು ಹೇಳಿದ್ದಾರೆ.

    ಇದನ್ನೂ ಓದಿ: 100 ಕೋಟಿ ಕರೊನಾ ಲಸಿಕೆ ಡೋಸ್ ಮೈಲುಗಲ್ಲು ಮುಟ್ಟಿದ ಭಾರತ!

    ಜಗತ್ತಿನಲ್ಲಿ ಒಂಭತ್ತು ತಿಂಗಳ ಕಡಿಮೆ ಅವಧಿಯಲ್ಲಿ ಇಷ್ಟು ವೇಗವಾಗಿ ಸಾಧನೆ ಮಾಡಿದ ಬೇರೊಂದು ಡಿಜಿಟಲ್ ವೇದಿಕೆ ಇಲ್ಲ. ಲಸಿಕೆಗೆ ಅಪಾಯಿಂಟ್​ಮೆಂಟ್​ಗಳನ್ನು ನೀಡುವುದರಿಂದ ಲಸಿಕೆ ಪ್ರಮಾಣ ಪತ್ರ ನೀಡುವವರೆಗೆ ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ. ಕೋವಿನ್​ ಆ್ಯಪ್​ ಬಗ್ಗೆ ವಿವಿಧ ರಾಷ್ಟ್ರಗಳು ಆಸಕ್ತಿ ವ್ಯಕ್ತಪಡಿಸಿದ್ದರಿಂದ ಇದನ್ನು ಜುಲೈ 5 ರಂದು 100 ದೇಶಗಳು ಭಾಗವಹಿಸಿದ ಜಾಗತಿಕ ಸಮ್ಮೇಳನದಲ್ಲಿ ‘ಓಪನ್​ ಸೋರ್ಸ್​’ ಮಾಡಿ ದಾಖಲೀಕರಿಸಲಾಗಿದೆ ಎಂದು ಡಾ.ಶರ್ಮಾ ತಿಳಿಸಿದ್ದಾರೆ. (ಏಜೆನ್ಸೀಸ್)

    ಮುಂದುವರೆದ ಡ್ರಗ್ಸ್​ ಕೇಸ್​ ತನಿಖೆ… ಯುವ ನಟಿಗೆ ಎನ್​ಸಿಬಿ ಸಮನ್ಸ್​!

    ಕರೊನಾ ಲಸಿಕಾ ಅಭಿಯಾನದಲ್ಲಿ ಸೆಂಚುರಿ ಬಾರಿಸಿದ ಭಾರತ! 100 ಕೋಟಿ ಡೋಸ್​​ ನೀಡಿದ ಜಗತ್ತಿನ 2ನೇ ದೇಶ

    ಜೈಲಿಗೆ ತೆರಳಿ ಮಗನನ್ನು ಭೇಟಿಯಾದ ನಟ ಶಾರುಖ್​ ಖಾನ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts