More

    ಹಸು, ಗಂಗಾ, ಗೀತೆ ಇವುಗಳು ಭಾರತದ ಐಡೆಂಟಿಟಿ

    ಲಖನೌ: ಹಸು, ಗಂಗಾನದಿ ಮತ್ತು ಗೀತೆ ಭಾರತದ ಐಡೆಂಟಿಟಿ. ಇದೇ ಮೂರು ಅಂಶಗಳು ಭಾರತವನ್ನು ಇಂದು ವಿಶ್ವಗುರುವಿನ ಸ್ಥಾನಕ್ಕೆ ತಂದು ನಿಲ್ಲಿಸಿವೆ ಎಂದು ಉತ್ತರ ಪ್ರದೇಶದ ಪಶುಸಂಗೋಪನಾ ಮತ್ತು ಮೀನುಗಾರಿಕೆ ಸಚಿವ ಲಕ್ಷ್ಮೀ ನಾರಾಯಣ ಚೌಧರಿ ಶನಿವಾರ ಹೇಳಿದರು.

    ಪಿಟಿಐ ಸುದ್ದಿ ಸಂಸ್ಥೆ ಜತೆಗೆ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಎಮ್ಮೆ, ಕೋಣಗಳು ಇಲ್ಲದ ಕಾಲದಲ್ಲಿ ಹಸುಗಳಷ್ಟೇ ಇದ್ದವು. ಅವುಗಳ ಕೇಂದ್ರಿತವಾಗಿಯೇ ನಮ್ಮವರ ಬದುಕು ಸಾಗಿತ್ತು. ತಾಯಿ ಹಾಲು ಇಲ್ಲ ಎಂದರೆ ಡಾಕ್ಟರ್​ಗಳು ಶಿಫಾರಸು ಮಾಡುವುದು ಹಸುವಿನ ಹಾಲನ್ನೇ. ನವಜಾತ ಶಿಶುವಿಗೂ ಚೈತನ್ಯ ತುಂಬ ಬಲ್ಲ ಶಕ್ತಿ ಇರುವಂಥದ್ದು ಭಾರತೀಯ ತಳಿಯ ಹಸುವಿನ ಹಾಲಿನಲ್ಲಿ ಎಂಬುದನ್ನು ಗಮನಿಸಬೇಕು.

    ಇಂತಹ ಹಸುಗಳ ಹತ್ಯೆ ಹಿಂದಿನ ಸರ್ಕಾರಗಳ ಅವಧಿಯಲ್ಲಿ ಅವ್ಯಾಹತವಾಗಿ ನಡೆಯುತ್ತಿತ್ತು. ಆ ಅಪರಾಧವನ್ನು ತಡೆಯುವ ಕೆಲಸವನ್ನು ಅಂದಿನ ಸರ್ಕಾರಗಳು ಮಾಡಲಿಲ್ಲ. ಅಂದು ಅದು ಜಾಮೀನು ಪಡೆಯಬಹುದಾಗಿದ್ದ ಅಪರಾಧವಾಗಿತ್ತು. ಆದರೆ ಪರಿಸ್ಥಿತಿ ಹಿಂದಿನಂತಿಲ್ಲ ಈಗ. ಉತ್ತರ ಪ್ರದೇಶದಲ್ಲಿ ಸಚಿವ ಸಂಪುಟ ಸಭೆ ಗೋ ಹತ್ಯೆ ನಿಷೇಧ (ತಿದ್ದುಪಡಿ) ಆರ್ಡಿನೆನ್ಸ್ 2020 ಅನ್ನು ಜಾರಿಗೊಳಿಸಲು ಅನುಮತಿ ನೀಡಿದೆ.

    ಇದನ್ನೂ ಓದಿ: ಗೋಹತ್ಯೆ ತಡೆಗೆ ಒಂದಡಿ ಮುಂದಿರಿಸಿತು ಯೋಗಿ ಸರ್ಕಾರ: ಕಠಿಣ ಶಿಕ್ಷೆ ಎಂಥವರನ್ನೂ ಹಿಮ್ಮೆಟ್ಟಿಸೀತು!

    ಈ ಕಾನೂನು ಯಾವುದೇ ಒಂದು ಸಮುದಾಯ ಅಥವಾ ಜನಾಂಗದವರನ್ನು ಉದ್ದೇಶಿಸಿ ಜಾರಿಗೆ ತಂದಿರುವಂಥದ್ದಲ್ಲ. ಇದು ಗೋ ಸಂರಕ್ಷಣೆಗೆ, ನಂಬಿಕೆ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ್ದು. 30 ಹಸುಗಳನ್ನು ಒಂದು ಟ್ರಕ್​ನಲ್ಲಿ ಹಾಕಿ ಕೊಂಡೊಯ್ಯುತ್ತಿದ್ದುದನ್ನು ನಅನು ನೋಡಿದ್ದೆ. ಅದು ಅದನ್ನು ತಡೆದು ಹಸುಗಳನ್ನು ರಕ್ಷಿಸಿದ್ದೆವು. ಆಗ ಮೂರು ಹಸುಗಳು ಪ್ರಾಣ ಕಳೆದುಕೊಂಡಿದ್ದವು. ಗೋಹತ್ಯೆ ಎಂಬುದು ಅತ್ಯಂತ ಹೀನ ಕೃತ್ಯ. ಕಾನೂನು ಜಾರಿಗೊಳಿಸುವ ಮೂಲಕ ಅದಕ್ಕೆ ಒಂದು ಅಂತ್ಯ ಹೇಳಲಾಗುತ್ತಿದೆ. ಜೂನ್ ಒಂಭತ್ತರಂದು ಈ ಕಾನೂನು ಕರಡಿಗೆ ಸಚಿವ ಸಂಪುಟ ಒಪ್ಪಿಗೆ ನೀಡಿತ್ತು ಎಂದು ಹೇಳಿದ್ದಾರೆ. (ಏಜೆನ್ಸೀಸ್)

    1.9 ಲಕ್ಷ ಇರಾನ್​ ರಿಯಾಲ್ ಮೌಲ್ಯ ಕೇವಲ 1 ಅಮೆರಿಕನ್ ಡಾಲರ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts