More

    1.9 ಲಕ್ಷ ಇರಾನ್​ ರಿಯಾಲ್ ಮೌಲ್ಯ ಕೇವಲ 1 ಅಮೆರಿಕನ್ ಡಾಲರ್​!

    ತೆಹ್ರಾನ್​: ಇರಾನ್ ವಿರುದ್ಧ ಅಮೆರಿಕ ಹಲವು ನಿರ್ಬಂಧಗಳನ್ನು ಹೇರಿದ್ದು, ಇದೀಗ ಅದರ ಕರೆನ್ಸಿ ರಿಯಾಲ್​ ಅಮೆರಿಕದ ಡಾಲರ್ ಎದುರು ಸಾರ್ವಕಾಲಿಕ ಕುಸಿತ ಕಂಡಿದೆ. ಒಂದು ಡಾಲರ್​ನ ಮೌಲ್ಯವನ್ನು ಸರಿಗಟ್ಟಲು 1.9 ಲಕ್ಷ ರಿಯಾಲ್ ಬೇಕಾಗುತ್ತದೆ. ಭಾರತದ ರೂಪಾಯಿ ಲೆಕ್ಕಾಚಾರದಲ್ಲಿ ಇರಾನ್​ ರಿಯಾಲ್​ ಮೌಲ್ಯವನ್ನು ಹೇಳುವುದಾದರೆ 552.18 ರಿಯಾಲ್ ಇದ್ದರಷ್ಟೇ ಭಾರತದ ಒಂದು ರೂಪಾಯಿ ಆದೀತು.

    ಇರಾನ್​ನ ರಿಯಾಲ್​ ಮೌಲ್ಯ ಕುಸಿತ ಕಂಡದ್ದು 2015ರಲ್ಲಿ. ಅಂದು ತೆಹ್ರಾನ್​ ಜಾಗತಿಕ ಶಕ್ತಿಗಳ ಜತೆಗೆ ಅಣು ಒಪ್ಪಂದಕ್ಕೆ ಮುಂದಾದ ವೇಳೆ ಒಂದು ಅಮೆರಿಕನ್ ಡಾಲರ್​ ಎದುರು ರಿಯಾಲ್ ಬೆಲೆ 32,000 ಆಗಿತ್ತು. ಎರಡು ವರ್ಷಗಳ ಹಿಂದೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ ಅವರು ಅಣು ಒಪ್ಪಂದದಿಂದ ಹಿಂದೆ ಸರಿಯುವುದಾಗಿ ಘೋಷಿಸಿದ ವೇಳೆ ಅನಿರೀಕ್ಷಿತವಾಗಿ ಇರಾನ್ ರಿಯಾಲ್​ ಭಾರಿ ಚೇತರಿಕೆ ಕಂಡಿತ್ತು.

    ಇದನ್ನೂ ಓದಿ: ಕೊವಿಡ್​-19 ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿರುವ ದೆಹಲಿ ಆರೋಗ್ಯ ಸಚಿವರ ಸ್ಥಿತಿ ಗಂಭೀರ…

    ಅಮೆರಿಕದ ನಿರ್ಬಂಧಗಳಿಂದಾಗಿ ಇರಾನ್​ನ ತೈಲ ರಫ್ತಿನ ಮೇಲೆ ಹೊಡೆತ ಬಿದ್ದು, ಆದಾಯ ಭಾರಿ ಇಳಿಕೆಯಾಗಿತ್ತು. ಕಳೆದ ವಾರ ಹಿರಿಯ ವಿಪಿ ಇಶಾಕ್​ ಜಹಾಂಗಿರಿ ಹೇಳಿದ ಪ್ರಕಾರ, ಇರಾನ್​ನ ತೈಲ ಆದಾಯ 2011ರಲ್ಲಿ 100 ಬಿಲಿಯನ್ ಡಾಲರ್ ಇದ್ದುದ್ದು ಈಗ 8 ಬಿಲಿಯನ್ ಡಾಲರ್​ಗೆ ಕುಸಿತ ಕಂಡಿದೆ. ಈಗ ಆದಾಯ ವೃದ್ಧಿಗಾಗಿ ಇರಾನ್​ ಬೇರೆ ಬೇರೆ ದಾರಿಗಳನ್ನು ಕಂಡುಕೊಳ್ಳುತ್ತಿದೆ. ಇತ್ತೀಚೆಗೆ 45,5 ದಶಲಕ್ಷ ಡಾಲರ್ ಮೌಲ್ಯದ 5 ಟ್ಯಾಂಕರ್ ತೈಲವನ್ನು ವೆನೆಜುವೆಲಾಕ್ಕೆ ಕಳುಹಿಸಿತ್ತು. ಆ ಮೂಲಕ ಹಣ ಗಳಿಸಿತ್ತು. (ಏಜೆನ್ಸೀಸ್)

    ‘ಗಲ್ವಾನ್ ಚೀನಾದ್ದಲ್ಲ, ಭಾರತದ್ದು…ಅದಕ್ಕೆ ಪುರಾವೆ ಇದೆ’: ಕಣಿವೆ ಅನ್ವೇಷಿಸಿದವರ ಮರಿ ಮೊಮ್ಮಗನ ಮಾತುಗಳಿವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts