More

    ಹಸುಗಳಿಗೆ ಬಿಯರ್​ ಕುಡಿಸುವ ಜುಕರ್​ಬರ್ಗ್​! ಕಾರಣ ಕೇಳಿದ್ರೆ ದಂಗಾಗ್ತೀರಾ, PETA ಆಕ್ರೋಶ

    ನ್ಯೂಯಾರ್ಕ್​: ಅಮೆರಿಕ ಉದ್ಯಮಿ ಹಾಗೂ ಫೇಸ್​ಬುಕ್​ ಸಂಸ್ಥಾಪಕ ಮಾರ್ಕ್​ ಜುಕರ್​ಬರ್ಗ್​ ಹಸುಗಳಿಗೆ ಬಿಯರ್​ ಕುಡಿಸುತ್ತಿರುವ ಇನ್​ಸ್ಟಾಗ್ರಾಂ ಪೋಸ್ಟ್​ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶಕ್ಕೆ ಗುರಿಯಾಗಿದೆ. ಈ ಸಂಗತಿ ಪೀಪಲ್​ ಫಾರ್​ ದಿ ಎಥಿಕಲ್​ ಟ್ರೀಟ್​ಮೆಂಟ್​ ಆಫ್​ ಅನಿಮಲ್ಸ್​ (PETA) ಸಂಘಟನೆಯ ಗಮನಕ್ಕೂ ಬಂದಿದ್ದು, ಜುಕರ್​ಬರ್ಗ್​ ವಿರುದ್ಧ ವಾಗ್ದಾಳಿ ನಡೆಸಿದೆ.

    ಅಮೆರಿಕದ ಕೌಲೋವಾ ರಾಂಚ್ ಏರಿಯಾದಲ್ಲಿ ಜಾನುವಾರುಗಳನ್ನು ಸಾಕುತ್ತಿರುವ ಕುರಿತು ಇತ್ತೀಚೆಗಷ್ಟೇ ಜುಕರ್​ಬರ್ಗ್​ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಹಂಚಿಕೊಂಡಿದ್ದರು. ಹಸುಗಳಿಗೆ ಮಕಾಡಾಮಿಯಾ ಬೀಜಗಳು ಮತ್ತು ಬಿಯರ್​ ಕುಡಿಸುತ್ತಿರುವ ದೃಶ್ಯಗಳಿದ್ದವು.

    ಈ ಫೋಟೋಗಳು ತಮ್ಮ ಗಮನಕ್ಕೆ ಬರುತ್ತಿದ್ದಂತೆ ಜುಕರ್​ ಬರ್ಗ್​ ನಡೆಯನ್ನು PETA ಖಂಡಿಸಿದೆ. ಪ್ರಾಣಿಗಳಿಗೆ ಉತ್ಪಾದಕವಲ್ಲದ ಊಟವನ್ನು ನೀಡುತ್ತಿರುವುದನ್ನು ಟೀಕಿಸಿದೆ. ಟೆಕ್ನಾಲಜಿಗೆ ಮಾತ್ರ ನೀವು ಸೀಮಿತರಾಗಿ, ಪ್ರಾಣಿಗಳನ್ನು ಒಳಗೊಂಡಿರುವ ಯಾವುದೇ ಪ್ರಾಜೆಕ್ಟ್​ನಲ್ಲಿ ನಿಮ್ಮ ತೊಡಗಿಸಕೊಳ್ಳಬೇಡಿ ಎಂದು ಜುಕರ್​ಬರ್ಗ್​ಗೆ PETA ಕೇಳಿದೆ. ಪ್ರಾಣಿಗಳನ್ನು ಕೊಲ್ಲುವ ಈ ಪ್ರಾಜೆಕ್ಟ್​, ನಮ್ಮ ಗ್ರಹ ಮತ್ತು ನಿಮ್ಮ ಮಕ್ಕಳಿಗೆ ಆಘಾತಕಾರಿಯಾಗಿದೆ ಎಂದು PETA ಕಳವಳ ವ್ಯಕ್ತಪಡಿಸಿದೆ. ಅಂದಹಾಗೆ ಉತ್ತಮ ಗೋಮಾಂಸಕ್ಕಾಗಿ ಜುಕರ್​ಬರ್ಗ್​ ಬಿಯರ್​ ಕುಡಿಸುತ್ತಾರೆ ಎಂದು ತಿಳಿದುಬಂದಿದೆ.

    ತಮ್ಮ ಪೋಸ್ಟ್‌ನಲ್ಲಿ, ಜುಕರ್‌ಬರ್ಗ್ ಅವರು ಸ್ಥಳೀಯವಾಗಿ ಸಂಯೋಜಿತ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ವಿಶ್ವದಲ್ಲೇ ಅತ್ಯುನ್ನತ ಗುಣಮಟ್ಟದ ಗೋಮಾಂಸವನ್ನು ಸೃಷ್ಟಿಸುವ ಗುರಿಯನ್ನು ಹೊಂದಿರುವುದಾಗಿ ಉಲ್ಲೇಖಿಸಿದ್ದಾರೆ. ನನ್ನ ಎಲ್ಲ ಯೋಜನೆಗಳಲ್ಲಿ, ಇದು ಅತ್ಯಂತ ರುಚಿಕರವಾಗಿದೆ ಎಂದು ಹೇಳಿದ್ದಾರೆ.

    ತಮ್ಮ ಜಾನುವಾರು ಸಾಕಣೆಯ ಮೇಲೆ ಹೆಚ್ಚು ಬೆಳಕು ಚೆಲ್ಲಿರುವ ಜುಕರ್​ಬರ್ಗ್​, ಜಾನುವಾರುಗಳು ನಾವು ಬೆಳೆದ ಮಕಾಡಾಮಿಯಾವನ್ನು ತಿನ್ನುತ್ತವೆ ಮತ್ತು ಇಲ್ಲಿ ಉತ್ಪಾದಿಸುವ ಬಿಯರ್ ಅನ್ನು ಕುಡಿಯುತ್ತವೆ. ಪ್ರತಿ ಹಸು ಪ್ರತಿ ವರ್ಷ 5,000-10,000 ಪೌಂಡ್‌ಗಳಷ್ಟು ಆಹಾರವನ್ನು ತಿನ್ನುತ್ತದೆ. ಆದ್ದರಿಂದ, ಬಹಳಷ್ಟು ಎಕರೆಗಳಷ್ಟು ಮಕಾಡಾಮಿಯಾ ಮರಗಳಿವೆ. ಮ್ಯಾಕ್ ಮರಗಳನ್ನು ನೆಡುವ ಮೂಲಕ ಮತ್ತು ಪ್ರಾಣಿಗಳನ್ನು ನೋಡಿಕೊಳ್ಳುವ ಮೂಲಕ ಕೃಷಿ ಕೆಲಸದಲ್ಲಿ ನನಗೆ ನನ್ನ ಹೆಣ್ಣು ಮಕ್ಕಳು ಸಹಾಯ ಮಾಡುತ್ತಾರೆ ಎಂದು ಜುಕರ್​ಬರ್ಗ್​ ಹೇಳಿದ್ದಾರೆ.

    ಆದರೆ, ಜುಕರ್​ಬರ್ಗ್​ ಅವರ ಫೋಸ್ಟ್​ ತೀವ್ರ ಟೀಕೆಗೆ ಗುರಿಯಾಗಿದೆ. ಹಸುಗಳಿಗೆ ಉತ್ಪಾದಕವಲ್ಲದ ಆಹಾರ ಮತ್ತು ಬಿಯರ್​ ನೀಡುತ್ತಿರುವುದನ್ನು ಖಂಡಿಸಿದ್ದಾರೆ. (ಏಜೆನ್ಸೀಸ್​)

    ನಾನು ಮಾತ್ರವಲ್ಲ ನನ್ನ ಪತಿ ಕೂಡ ಪ್ರೆಗ್ನೆಂಟ್​! ಬೇಬಿ ಬಂಪ್​ ಫೋಟೋ ಹಂಚಿಕೊಂಡ ಅಮಲಾ ಪೌಲ್​

    ಬಾಯ್​ಫ್ರೆಂಡ್​ ವದಂತಿ: ಕಡೆಗೂ ಸತ್ಯ ಬಿಚ್ಚಿಟ್ಟ ನಟಿ ಕಂಗನಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts