More

    ಬೇಸಿಗೆ ಹಿನ್ನೆಲೆ: ರಾಜ್ಯದಲ್ಲಿ ಬಿಯರ್​ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್​!

    ಬೆಂಗಳೂರು: ಬಿಸಿಲಿನ ತಾಪಕ್ಕೆ ರಾಜ್ಯದಲ್ಲಿ ಬಿಯರ್​ಗೆ ಹೆಚ್ಚು ಬೇಡಿಕೆ ಬಂದಿದೆ. ದಿನದಿಂದ ದಿನಕ್ಕೆ ಬಿಯರ್​ ಮಾರಾಟದಲ್ಲಿ ಗಣನೀಯವಾಗಿ ಹೆಚ್ಚಳವಾಗುತ್ತಿದೆ.

    2024ರ ಏ.1ರಿಂದ ಏ.16ರವರೆಗೆ ರಾಜ್ಯಾದ್ಯಂತ 26.62 ಲಕ್ಷ ಬಾಕ್ಸ್​ ಬಿಯರ್​ ಮಾರಾಟವಾಗಿದೆ. 2023ರ ಏ.1ರಿಂದ ಏ.16ರವರೆಗೆ 18.33 ಲಕ್ಷ ಬಾಕ್ಸ್​ ಮಾರಾಟವಾಗಿತ್ತು. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ಬಾರಿ 8.29 ಲಕ್ಷ ಬಾಕ್ಸ್​ ಬಿಯರ್​ ಅಧಿಕ ಮಾರಾಟವಾಗಿದ್ದು, ಶೇ.48ರಷ್ಟು ಬೆಳವಣಿಗೆಯಾಗಿದೆ.

    ಐದು ಗ್ಯಾರಂಟಿ ಯೋಜನೆಗಳಿಗೆ ಆರ್ಥಿಕ ಸಂಪನ್ಮೂಲ ಕ್ರೂಢಿಕರಿಸಲು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​ ಸರ್ಕಾರ,ಬಜೆಟ್​ನಲ್ಲಿ ಇಂಡಿಯನ್​ ಮೇಡ್​ ಲಿಕ್ಕರ್​ (ಐಎಂಎಲ್​), ಬಿಯರ್​ ಮೇಲಿನ ಅಬಕಾರಿ ಸುಂಕ ಪರಿಷ್ಕರಿಸಿ ಮದ್ಯವ್ಯಸನಿಗಳಿಗೆ ಬೆಲೆ ಏರಿಕೆ ಶಾಕ್​ ಕೊಟ್ಟಿತ್ತು. 2023ರ ಜುಲೈನಲ್ಲಿ ಮಂಡಿಸಿದ್ದ ಬಜೆಟ್​ನಲ್ಲಿಯೂ ಸಿಎಂ ಸಿದ್ದರಾಮಯ್ಯ, ಐಎಂಎಲ್​ ಮೇಲೆ ಶೇ.20 ಮತ್ತು ಬಿಯರ್​ ಮೇಲೆ ಶೇ.10 ಅಬಕಾರಿ ಶುಂಕ ಹೆಚ್ಚಿಸಿದ್ದರು. ಇದಕ್ಕೂ ಮುನ್ನ ರಾಜ್ಯದಲ್ಲಿ ತಯಾರಿಸಲಾದ ಅಥವಾ ಆಮದು ಮಾಡಿಕೊಳ್ಳುವ ಬಿಯರ್​ ಬಾಟಲ್​ ಮೇಲೆ ಹೆಚ್ಚವರಿ ಅಬಕಾರಿ ಸುಂಕವನ್ನು ಶೇ.10 ಹೆಚ್ಚಿಸಲಾಗಿತ್ತು. ಈ ಬಗ್ಗೆ ಇಲಾಖೆ, ಬಿಯರ್​ ದರ ಹೆಚ್ಚಿಸಿ ಕರ್ನಾಟಕ ಅಬಕಾರಿ (ಸುಂಕಗಳ ಮತ್ತು ಶುಲ್ಕಗಳು) ನಿಯಮಕ್ಕೆ ತಿದ್ದುಪಡಿ 2024ರ ಕರಡನ್ನು ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿತ್ತು. ನಿರಂತರವಾಗಿ ಬಿಯರ್​ ದರ ಹೆಚ್ಚಳವಾದರೂ ರಾಜ್ಯದಲ್ಲಿ ಬಿಯರ್​ ಸೇವನೆ ಕಡಿಮೆಯಾಗಿಲ್ಲ. ಬದಲಾಗಿ ಮೊದಲಿಗಿಂತ ಹೆಚ್ಚಾಗಿ ಬಿಯರ್​ ಖರೀದಿಸಿ ಕುಡಿಯುತ್ತಿದ್ದಾರೆ.

    ರಾಜ್ಯದಲ್ಲಿ ಮತ್ತೊಂದು ಸಾಂಕ್ರಾಮಿಕ ಭೀತಿ; ಕುದುರೆಗಳಲ್ಲಿ ‘Glanders disease’ ಪತ್ತೆ
    ಮೇವರೆಗೂ ಬಿಯರ್​ಗೆ ಡಿಮ್ಯಾಂಡ್​
    ಲೋಕಸಭಾ ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಮದ್ಯ ಎತ್ತುವಳಿ ನಿಯಂತ್ರಿಸುವ ಸಂಬಂಧ ಅಬಕಾರಿ ಇಲಾಖೆ ಈಗಾಗಲೇ ಆದೇಶ ಹೊರಡಿಸಿದೆ. ಮಾದರಿ ನೀತಿ ಸಂಹಿತೆ ಅವಧಿಯಲ್ಲಿ ಮದ್ಯ ಮಾರಾಟಗಾರರು ಸರಾಸರಿ ಎತ್ತುವಳಿ ಶೇ.20ಗಿಂತ ಹೆಚ್ಚು ಮದ್ಯ, ಬಿಯರ್​ ದಾಸ್ತಾನನ್ನು ಎತ್ತುವಳಿ ಮಾಡಬಾರದು. ವೆಬ್​ ಇಂಡೆಂಟಿಂಗ್​ನಲ್ಲಿ ಮಿತಿ ಅಳವಡಿಸುವಂತೆ ಮಾರಾಟಗಾರರಿಗೆ ಇಲಾಖೆ ಸೂಚಿಸಿದೆ. ಆದರೆ, ಮೇ ತಿಂಗಳವರೆಗೆ ಬಿಯರ್​ಗೆ ಬಿಯರ್​ ಇನ್ನಷ್ಟು ಬೇಡಿಕೆ ಬರಲಿದ್ದು, ಸರ್ಕಾರಕ್ಕೆ ಕೋಟ್ಯಂತರ ರೂ.ಆದಾಯ ಹರಿದು ಬರಲಿದೆ. ಆದರೆ, ದಿನದಿಂದ ದಿನಕ್ಕೆ ಬಿಯರ್​ ಬೇಡಿಕೆ ಬರುತ್ತಿದ್ದರೂ ಚುನಾವಣಾ ನೀತಿ ಸಂಹಿತೆ ಇರುವುದರಿಂದ ಬೇಡಿಕೆ ತಕ್ಕಂತೆ ಪೂರೈಸಲು ಸಾಧ್ಯವಾಗುತ್ತಿಲ್ಲ. ಸ್ವಲ್ಪ ವ್ಯತ್ಯಯವಾಗುತ್ತಿದೆ ಎಂದು ಮಾಲೀಕರು ಹೇಳುತ್ತಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts