More

    ಗೋಹತ್ಯೆ ತಡೆಗೆ ಒಂದಡಿ ಮುಂದಿರಿಸಿತು ಯೋಗಿ ಸರ್ಕಾರ: ಕಠಿಣ ಶಿಕ್ಷೆ ಎಂಥವರನ್ನೂ ಹಿಮ್ಮೆಟ್ಟಿಸೀತು!

    ಲಖನೌ: ಮಹತ್ವದ ಬೆಳವಣಿಗೆಯೊಂದರಲ್ಲಿ ಉತ್ತರದ ಪ್ರದೇಶದ ಯೋಗಿ ಆದಿತ್ಯನಾಥರ ಸರ್ಕಾರ ಗೋಹತ್ಯೆ ತಡೆಯ ಕರಡು ಆರ್ಡಿನೆನ್ಸ್ ಗೆ ಮಂಗಳವಾರ ಒಪ್ಪಿಗೆ ನೀಡಿದೆ. ಇದರಂತೆ, ಗೋ ಹತ್ಯೆ ನಡೆಸುವವರಿಗೆ ಗರಿಷ್ಠ ಕಠಿಣ ಸಜೆ 10 ವರ್ಷ ಮತ್ತು 5 ಲಕ್ಷ ರೂಪಾಯಿ ತನಕದ ದಂಡ ವಿಧಿಸಬಹುದಾಗಿದೆ.

    ಮೊದಲ ಸಲದ ಗೋಹತ್ಯೆ ಆದರೆ ವ್ಯಕ್ತಿಗೆ ಒಂದು ವರ್ಷದಿಂದ ಏಳು ವರ್ಷ ತನಕದ ಕಠಿಣ ಸಜೆ ಮತ್ತು ಒಂದು ಲಕ್ಷ ರೂಪಾಯಿಯಿಂದ ಮೂರು ಲಕ್ಷ ರೂಪಾಯಿ ತನಕ ದಂಡ ವಿಧಿಸುವ ಪ್ರಸ್ತಾಪವೂ ಅದರಲ್ಲಿದೆ. ಎರಡನೇ ಸಲದ ತಪ್ಪೆಸಗಿದರೆ ಅಂಥ ವ್ಯಕ್ತಿಗೆ 10 ವರ್ಷಗಳ ಕಠಿಣ ಸಜೆ ಮತ್ತು 5 ಲಕ್ಷ ರೂಪಾಯಿ ತನಕದ ದಂಡ ವಿಧಿಸಬಹುದಾಗಿದೆ ಎಂದು ಸರ್ಕಾರ ತಿಳಿಸಿದೆ.

    ಇದನ್ನೂ ಓದಿ:  ಜಡ್ಜ್​ಗಳ ವಸತಿಗೃಹದಲ್ಲಿ ಕಳವು

    ಕೌ ಸ್ಲಾಟರ್ ಪ್ರಿವೆನ್ಶನ್​ (ಅಮೆಂಡಮೆಂಟ್​) ಆರ್ಡಿನೆನ್ಸ್ 2020 ರ ಕರಡನ್ನು ನಿನ್ನೆ ನಡೆದ ಯೋಗಿ ಸಚಿವ ಸಂಪುಟ ಸಭೆ ಅನುಮೋದಿಸಿದೆ. ಈ ಹೊಸ ಕಾನೂನು ಈಗಿರುವ 1955ರ ಉತ್ತರ ಪ್ರದೇಶ ಪ್ರಿವೆನ್ಶನ್ ಆಫ್ ಕೌ ಸ್ಲಾಟರ್ ಆ್ಯಕ್ಟ್​ ನ ಜಾಗವನ್ನು ತುಂಬಲಿದೆ. ಹೊಸ ಕಾನೂನು ಪರಿಣಾಮಾತ್ಮಕವಾಗಿ ಗೋ ಹತ್ಯೆಯನ್ನು ತಡೆಯಲಿದೆ. ಅಂಥ ಘಟನೆಯೇ ನಡೆಯದಂತೆ ನೋಡಿಕೊಳ್ಳಲಿದೆ.

    ಒಂದೊಮ್ಮೆ ಹಸುಗಳು ಅಥವಾ ಕರುಗಳನ್ನು ಯಾರಾದರೂ ಅಕ್ರಮವಾಗಿ ಸಾಗಿಸುವುದು ಕಂಡುಬಂದಲ್ಲಿ ಚಾಲಕ, ನಿರ್ವಾಹಕ ಮತ್ತು ಆ ವಾಹನದ ಮಾಲೀಕನ ವಿರುದ್ಧ ಹೊಸ ಕಾನೂನು ಪ್ರಕಾರ ಪ್ರಕರಣ ದಾಖಲಾಗಲಿದೆ. ಮಾಲೀಕನ ಗಮನಕ್ಕೆ ಬಾರದೆ ಅಥವಾ ತಾರದೇ ಈ ಕೆಲಸ ಆಗಿದ್ದಲ್ಲಿ ಮಾಲೀಕನ ವಿರುದ್ಧ ಪ್ರಕರಣ ಇರಲಾರದು. ಅಲ್ಲದೆ, ಈ ಸಂದರ್ಭದಲ್ಲಿ ವಾಹನದಿಂದ ವಶಪಡಿಸಿದ ಹಸು ಅಥವಾ ಕರುಗಳ ಸಾಕಣೆ, ಸಂಗೋಪನೆಗೆ ಒಂದು ವರ್ಷದ ಮಟ್ಟಿಗೆ ಬೀಳುವ ವೆಚ್ಚವನ್ನೂ ಇದೇ ಆರೋಪಿಗಳು ಭರಿಸಬೇಕಾಗುತ್ತದೆ. ಅಥವಾ ಹಸುಗಳು, ಕರುಗಳನ್ನು ಬಿಡುಗಡೆ ಮಾಡುವ ತನಕದ ಅವುಗಳ ಖರ್ಚು ವೆಚ್ಚಗಳನ್ನು ಆರೋಪಿಗಳು ಭರಿಸಬೇಕು. ಇದರಲ್ಲಿ ಯಾವುದು ಮೊದಲಾಗುವುದೋ ಅದನ್ನು ಕಾನೂನು ಪರಿಗಣಿಸುತ್ತದೆ.

    ಇದನ್ನೂ ಓದಿ: ಇಸ್ರೋ ಸೌಲಭ್ಯಗಳನ್ನು ಶೀಘ್ರವೇ ಖಾಸಗಿಯವರೂ ಬಳಸಬಹುದು- ಸುಳಿವು ನೀಡಿದ್ರು ಕೇಂದ್ರ ಸಚಿವ

    ಗೋವುಗಳ ಅಂಗಾಂಗ ಛೇದಿಸುವುದು ಮತ್ತು ಇತರೆ ಕ್ರೌರ್ಯಗಳನ್ನು ತೋರಿಸಿದರೆ ತಪ್ಪಿತಸ್ಥರಿಗೆ ಸಿಗುವ ಶಿಕ್ಷೆಯೂ ಕಠಿಣವಾಗಿರಲಿದೆ. ಉದಾಹರಣೆಗೆ ಹಸುವಿನ ಪ್ರಾಣವನ್ನು ಅಪಾಯಕ್ಕೆ ತಳ್ಳಿದರೆ ಅಂಥ ವ್ಯಕ್ತಿಗೆ ಮೊದಲ ಪ್ರಕರಣವಾದರೆ ಒಂದು ವರ್ಷದ ಕಠಿಣ ಶಿಕ್ಷೆ ಖಚಿತ. ಇದನ್ನು ಏಳು ವರ್ಷದ ತನಕವೂ ವಿಸ್ತರಿಸಬಹುದಾಗಿದೆ. ಇದಲ್ಲದೆ ಕನಿಷ್ಠ ಒಂದು ಲಕ್ಷ ರೂಪಾಯಿ ದಂಡ ಗರಿಷ್ಠ 3 ಲಕ್ಷ ರೂಪಾಯಿ ದಂಡ ವಿಧಿಸುವುದಕ್ಕೂ ಅವಕಾಶವಿದೆ.

    ಉತ್ತರ ಪ್ರದೇಶ ಪ್ರಿವೆನ್ಶನ್ ಆಫ್ ಕೌ ಸ್ಲಾಟರ್ ಆ್ಯಕ್ಟ್ 1955 ಕಾಯ್ದೆಯು 1956ರ ಜನವರಿ 6ರಂದು ಜಾರಿಗೆ ಬಂತು. ಇದಾಗಿ 1958, 1961, 1979 ಮತ್ತು 2002ರಲ್ಲಿ ಕಾಯ್ದೆ ತಿದ್ದುಪಡಿ ಆಗಿದೆ. ಇದಲ್ಲದೆ, 1964 ಮತ್ತು 1979ರಲ್ಲಿ ನಿಯಮಗಳ ತಿದ್ದುಪಡಿ ಆಗಿದೆ. (ಏಜೆನ್ಸೀಸ್)

    ಬೆಳ್ಳಂಬೆಳಗ್ಗೆಯೇ ಎಸಿಬಿ ದಾಳಿ: ರಾಯಚೂರು ನಗರಾಭಿವೃದ್ಧಿ ಯೋಜನಾ ಕೋಶದ ಇಇಗೆ ಶಾಕ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts