More

    ರಾಜ್ಯರಾಜಧಾನಿಯ ಟಿಪ್ಪುನಗರದಲ್ಲಿ 75 ಪ್ರಾಥಮಿಕ ಸೋಂಕಿತರು: ಹಾಗಾದರೆ ಬೆಂಗಳೂರಿನಲ್ಲಿರುವ ಹಾಟ್​ಸ್ಪಾಟ್ ವಾರ್ಡ್​ಗಳ ವಿವರ ಇಲ್ಲಿದೆ ಓದಿ..

    ಬೆಂಗಳೂರು: ಕರೊನಾ ಸೋಂಕಿತರು ಪತ್ತೆಯಾಗಿರುವ ಬೆಂಗಳೂರಿನ 39 ವಾರ್ಡ್​ಗಳನ್ನು ಹಾಟ್​ಸ್ಪಾಟ್​ಗಳೆಂದು ಬಿಬಿಎಂಪಿ ಗುರುತಿಸಿದೆ. ಕರೊನಾ ಸೋಂಕಿತ ವ್ಯಕ್ತಿ ಹಾಗೂ ಸೋಂಕಿತ ವ್ಯಕ್ತಿಯೊಂದಿಗೆ 50 ಮಂದಿ ಪ್ರಾಥಮಿಕ ಸಂಪರ್ಕ ಹೊಂದಿದ್ದರೆ ಆ ಪ್ರದೇಶವನ್ನು ಹಾಟ್​ಸ್ಪಾಟ್ ಎಂದು ಪರಿಗಣಿಸಲಾಗುತ್ತದೆ. ಕರೊನಾ ಸೋಂಕು ಪತ್ತೆಯಾದ ವ್ಯಕ್ತಿ ವಾಸವಿರುವ 3 ಕಿ.ಮೀ. ಸುತ್ತಲಿನ ಪ್ರದೇಶವನ್ನು ಬಫರ್​ಜೋನ್ ಎಂದು ಗುರುತಿಸಲಾಗಿದೆ.

    ರಾಜ್ಯರಾಜಧಾನಿಯ ಟಿಪ್ಪುನಗರದಲ್ಲಿ 75 ಪ್ರಾಥಮಿಕ ಸೋಂಕಿತರು: ಹಾಗಾದರೆ ಬೆಂಗಳೂರಿನಲ್ಲಿರುವ ಹಾಟ್​ಸ್ಪಾಟ್ ವಾರ್ಡ್​ಗಳ ವಿವರ ಇಲ್ಲಿದೆ ಓದಿ..ಟಿಪ್ಪುನಗರದಲ್ಲಿ 75 ಶಂಕಿತರು: ಮೈಸೂರು ರಸ್ತೆಯ ಟಿಪ್ಪುನಗರದ ಬಳಿ ಕರೊನಾ ಸೋಂಕಿತ ವೃದ್ಧ ಸೋಮವಾರ ಮೃತಪಟ್ಟ ಹಿನ್ನೆಲೆಯಲ್ಲಿ ಆತನ ಜತೆ ಪ್ರಾಥಮಿಕ ಸಂಪರ್ಕ ಹೊಂದಿದ್ದ 75 ಜನರನ್ನು ಈಗಾಗಲೇ ಗುರುತಿಸಿ ಕ್ವಾರಂಟೈನ್ ಮಾಡಲಾಗಿದೆ. ಪಾಲಿಕೆ ಅಧಿಕಾರಿಗಳ ಗಮನಕ್ಕೆ ಬರದಿದ್ದಲ್ಲಿ ಸ್ವಯಂ ಕ್ವಾರಂಟೈನ್ ಆಗಲು ಬಿಬಿಎಂಪಿಗೆ ಸಹಕರಿಸಬೇಕು ಎಂದು ಪಾಲಿಕೆ ಆಯುಕ್ತ ಬಿ.ಎಚ್. ಅನಿಲ್ ಕುಮಾರ್ ಮನವಿ ಮಾಡಿದ್ದಾರೆ.

    ಸ್ಥಳೀಯರಲ್ಲಿ ಆತಂಕ, ಗೊಂದಲ ಸೃಷ್ಟಿ ಬೆಳಗಾಗುತ್ತಿದ್ದಂತೆ ಪೊಲೀಸ್ ಸಿಬ್ಬಂದಿ ಮತ್ತು ಬಿಬಿಎಂಪಿ ಆರೋಗ್ಯಾಧಿಕಾರಿಗಳು ಕರೊನಾ ಸೋಂಕಿತ ಮೃತ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಲ್ಲಿ ಇದ್ದವರನ್ನು ಕ್ವಾರಂಟೈನ್ ಗೆ ಕರೆದೊಯ್ಯಲು ಆಗಮಿಸಿದರು. ಆಗ ಸ್ಥಳೀಯರು ಭಯದಿಂದ ತಪ್ಪಿಸಿಕೊಳ್ಳುವ ಹಾಗೂ ಕ್ವಾರಂಟೈನ್ ಮಾಡಲು ಸಿಬ್ಬಂದಿ ನಡುವೆ ವಾಗ್ವಾದ ನಡೆಸಿದ ವಾತಾವರಣ ಕಂಡುಬಂದಿತು. ಆಂಬುಲೆನ್ಸ್ ಸ್ಥಳದಲ್ಲಿ ನಿಲ್ಲಿಸಿ ಸಂಪರ್ಕ ಹೊಂದಿದವರನ್ನು ಕರೆದೊಯ್ಯಲಾಯಿತು. ಅವರ ವಾಸವಿದ್ದ ಬೀದಿಗೆ ಯಾರೊಬ್ಬರೂ ಆಗಮಿಸದಂತೆ ಕಬ್ಬಿಣದ ಶೀಟ್​ಗಳನ್ನು ಹಾಕಿ ರಸ್ತೆ ಬಂದ್ ಮಾಡಲಾಯಿತು.

    ಹೊರ ರಾಜ್ಯಗಳ ವಲಸೆ ಕಾರ್ವಿುಕರಿಗೆ ಹೆಲ್ಪ್​ಲೈನ್ ಆಯ್ತು ಐಜಿಪಿ ಮೊಬೈಲ್ ನಂಬರ್- ಯಾಕೆ ಏನಾಯಿತು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts