More

    ಕೋವಿಡ್‌ ಪರೀಕ್ಷಾ ಶುಲ್ಕ ಕಡಿತಮಾಡಿದ ಸರ್ಕಾರ

    ಬೆಂಗಳೂರು: ಕರೊನಾ ವೈರಸ್‌ ಕ್ಷಣದಿಂದ ಕ್ಷಣಕ್ಕೂ ಹೆಚ್ಚುತ್ತಿರುವ ಬೆನ್ನಲ್ಲೇ ಸರ್ಕಾರ ಆಸ್ಪತ್ರೆಗಳಿಗೆ ಮಾತ್ರ ಸೀಮಿತವಾಗಿದ್ದ ಪರೀಕ್ಷಾ ಕೇಂದ್ರಗಳನ್ನು ಖಾಸಗಿ ಆಸ್ಪತ್ರೆಗಳಿಗೂ ವಿಸ್ತರಿಸಿ ತಿಂಗಳುಗಳೇ ಕಳೆದಿವೆ.

    ಆದರೆ, ಕೆಲವು ಖಾಸಗಿ ಆಸ್ಪತ್ರೆಗಳು ಎರ್ರಾಬಿರ್ರಿ ದುಡ್ಡು ವಸೂಲಿ ಮಾಡುವ ಸಾಧ್ಯತೆ ಇದ್ದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವೇ ಖುದ್ದಾಗಿ ಬೆಲೆಯನ್ನು ನಿಗದಿ ಮಾಡಿತ್ತು.

    ಕರೊನಾ ವೈರಸ್‌ ಆರಂಭಿಕ ಹಂತದಿಂದ ಅಂತಿಮ ಹಂತದವರೆಗೆ ಯಾವ್ಯಾವ ಹಂತಗಳು ಇರುತ್ತವೆಯೋ ಆಯಾ ಹಂತಗಳಿಗೆ ತಕ್ಕಂತೆ ಹಾಗೂ ಸೋಂಕಿತನ ಆರ್ಥಿಕ ಸ್ಥಿತಿಯನ್ನು ಮನಗಂಡು ಯಾವ್ಯಾವ ರೀತಿಯಲ ಸೌಲಭ್ಯಗಳನ್ನು ಪಡೆಯಬಹುದು ಎಂಬ ಬಗ್ಗೆ ಬೆಲೆ ನಿಗದಿ ಮಾಡಲಾಗಿತ್ತು.

    ಇದನ್ನೂ ಓದಿ: ರಾಜ್ಯದಲ್ಲಿ ಎತ್ತ ಸಾಗುತ್ತಿದೆ ಕೋವಿಡ್? ಭರವಸೆ ಮೂಡಿಸದ ಅಂಕಿ-ಸಂಖ್ಯೆಗಳು; ಇಂದೆಷ್ಟು ಜನರಿಗೆ ಸೋಂಕು?

    ಆದರೆ ಈ ಬೆಲೆ ಕೂಡ ಹೆಚ್ಚಾಗಿರುವುದಾಗಿ ದೂರುಗಳು ಬಂದ ಹಿನ್ನೆಲೆಯಲ್ಲಿ ಸರ್ಕಾರ ಇದೀಗ ಕೋವಿಡ್‌-19 ಪರೀಕ್ಷಾ ಶುಲ್ಕವನ್ನು ಕಡಿತಗೊಳಿಸಿ ಆದೇಶ ಹೊರಡಿಸಿದೆ.

    ಇದರ ಅನ್ವಯ ಹೊಸ ಬೆಲೆಗಳು ಈ ರೀತಿ ಇವೆ:
    ‌ಐಸಿಎಂಆರ್‌ ಅನುಮೋದಿ ಖಾಸಗಿ ಲ್ಯಾಬ್‌ನಲ್ಲಿ ಕೋವಿಡ್‌-19 ರ್ಯಾಪಿಡ್‌ ಆ್ಯಂಡಿಜೆನ್‌ ಟೆಸ್ಟಿಂಗ್‌ಗೆ ರೂ 700
    ಸರ್ಕಾರ ರೆಫರ್‌ ಮಾಡಿರುವ ಆರ್‌ಟಿ-ಪಿಸಿಆರ್‌ ಪರೀಕ್ಷೆಗೆ 2000 ರೂ.
    ಐಸಿಎಂಆರ್‌ ಅನುಮೋದಿತ ಖಾಸಗಿ ಲ್ಯಾಬ್‌ನಲ್ಲಿ ಆರ್‌ಟಿ-ಪಿಸಿಆರ್‌ ಟೆಸ್ಟಿಂಗ್‌ಗೆ 3000 ರೂ ನಿಗದಿ ಮಾಡಲಾಗಿದೆ.

    ಹೆಚ್ಚಿನ ಮಾಹಿತಿಗೆ 14410ಕ್ಕೆ ಕರೆ ಮಾಡಬಹುದು ಹಾಗೂ ಹತ್ತಿರದ ಪ್ರಯೋಗಾಲಯಗಳ ಮಾಹಿತಿಗೆ http://www.icmr.gov.org ವೀಕ್ಷಿಸಬಹುದು ಎಂದು ಸರ್ಕಾರದ ಪ್ರಕಟಣೆ ಹೇಳಿದೆ.

    ಎಷ್ಟು ಕಿರುಚಾಡಿದ್ರೂ ಹೆಂಡ್ತಿಯರ ಪಾಡು ಇಷ್ಟೇ ಸ್ವಾಮಿ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts