More

    ನಗರಸಭೆ ಆಯುಕ್ತರೇ ಮಾಡಬಾರದ್ದನ್ನು ಮಾಡಿದರು; ಸ್ಥಳದಲ್ಲಿ ಪೊಲೀಸರಿದ್ದರೂ ಡೋಂಟ್ ಕೇರ್!

    ರಾಯಚೂರು: ವ್ಯವಸ್ಥೆ ಸರಿ ಇರಿಸಲೆಂದೇ ಸರ್ಕಾರ ಹೊರಡಿಸುವ ಆದೇಶಗಳಲ್ಲಿನ ನಿಯಮಗಳನ್ನು ರೂಪಿಸುವ, ಜನರು ನಿಯಮಗಳನ್ನು ಪಾಲಿಸುವಂತೆ ಮಾಡುವ ಅಧಿಕಾರಿಗಳೇ ಅವುಗಳನ್ನು ಮೀರಿದಾಗ ಜನರೂ ಆ ನಿಯಮಗಳನ್ನು ಸರಿಯಾಗಿ ಪಾಲಿಸುವುದಿಲ್ಲ. ಅಂಥದ್ದೇ ಒಂದು ಪ್ರಕರಣ ಇಲ್ಲಿ ನಡೆದಿದ್ದು, ಸರ್ಕಾರ ಏನು ಮಾಡಬಾರದು ಎಂದು ಹೇಳಿದೆಯೋ ಅದನ್ನು ಸರ್ಕಾರಿ ಅಧಿಕಾರಿಯೇ ಮಾಡಿದ್ದು, ಇದೀಗ ಅವರೆಡೆಗೆ ಎಲ್ಲರೂ ಬೊಟ್ಟು ಮಾಡಿ ತೋರಿಸುವಂತಾಗಿದೆ.

    ರಾಯಚೂರಿನ ನಗರಸಭೆ ಆಯುಕ್ತ ವೆಂಟೇಶ್​ ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಾರೆ. ಕರೊನಾ ನಿಯಂತ್ರಣಕ್ಕಾಗಿ ವಿಧಿಸಿರುವ ನಿಯಮಗಳನ್ನು ಮೀರಿ ಜನರು ಜಮಾಯಿಸಿದ್ದು, ಆ ಗುಂಪಲ್ಲಿ ಅಧಿಕಾರಿ ಎಂಬುದನ್ನೂ ಮರೆತು ತಾವೂ ಸೇರಿಕೊಂಡಿದ್ದಾರೆ. ರಾಯಚೂರು ನಗರದ ಕಂದಗಡ್ಡೆಯ ಮಾರಮ್ಮ ದೇವಸ್ಥಾನ ಬಳಿ ಈ ಘಟನೆ ನಡೆದಿದೆ.

    ಇದನ್ನೂ ಓದಿ: ಕರೊನಾ ಮೂರನೇ ಅಲೆಯನ್ನು ತಡೆಯಬಹುದಂತೆ!; ಅದಕ್ಕಾಗಿ ಏನು ಮಾಡಬೇಕು? ಇಲ್ಲಿದೆ ಮಾಹಿತಿ…

    ಕಾರ ಹುಣ್ಣಿಮೆ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದ ಸಾರ್ವಜನಿಕರು, ಕರೊನಾ ತೊಲಗಲಿ ಎಂದು ದೇವಾಲಯ ಮುಂದೆ ಪೂಜೆ ಸಲ್ಲಿಸುತ್ತಿದ್ದರು. ಈ ಸಂದರ್ಭದಲ್ಲಿ ಜನರು ದೈಹಿಕ ಅಂತರ ಪಾಲನೆ ಮಾಡದಿರುವುದು ಸೇರಿ ಇತರ ಕರೊನಾ ನಿಯಮಗಳನ್ನು ಪಾಲಿಸಿಲ್ಲ.

    ಆ ಜನಜಂಗುಳಿಯಲ್ಲಿ ನಗರಸಭೆ ಆಯುಕ್ತ ವೆಂಕಟೇಶ ಸಹ ಜವಾಬ್ದಾರಿ ಮರೆತು ಜನರ ಜೊತೆ ಸೇರಿ ಪೂಜೆ ಸಲ್ಲಿಸಿದ್ದಾರೆ. ದೇವಾಲಯ ತೆರೆಯಲು ಅವಕಾಶ ಇಲ್ಲದ್ದರಿಂದ ದೇವಸ್ಥಾನದ ಎದುರು ರಸ್ತೆಬದಿಯಲ್ಲೇ ಭಕ್ತರ ನೂಕುನುಗ್ಗಲು ಉಂಟಾಗಿತ್ತು.

    ಇದನ್ನೂ ಓದಿ: ಜೊಮ್ಯಾಟೋ ಡೆಲಿವರಿ ಯುವಕನಿಗೆ ಬೈಕ್ ಕೊಡುಗೆಯಾಗಿ ಕೊಟ್ಟ ಗ್ರಾಹಕರು; ಕಾರಣ ತಿಳಿದರೆ ಅಯ್ಯೋ ಅನಿಸುತ್ತೆ!

    ಈ ಸಂದರ್ಭದಲ್ಲಿ ಮಹಿಳೆಯರು, ಮಕ್ಕಳು ಸೇರಿ ನೂರಾರು ಜನರು ಜಮಾಯಿಸಿದ್ದು, ದೇವಸ್ಥಾನದ ಗೇಟ್​ ಮುಂಭಾಗದಲ್ಲೇ ಹಣ್ಣು-ಕಾಯಿ, ಅನ್ನ ನೈವೇದ್ಯ ಮುಂತಾದವು ನಡೆದವು. ಈ ವೇಳೆ ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಪಾಡದೆ ಜನರು ಕೋವಿಡ್ ನಿಯಮವನ್ನು ಉಲ್ಲಂಘಿಸಿದ್ದರು. ಸ್ಥಳದಲ್ಲಿ ಪೊಲೀಸರಿದ್ದರೂ ಜನರು ಡೋಂಟ್ ಕೇರ್ ಎಂಬಂತೆ ವರ್ತಿಸಿದ್ದಾರೆ.

    ಸೀಟ್​​ ಹಿಂದಿನಿಂದ ಕೈ ತೂರಿಸಿ ಅಲ್ಲೇ ಮುಟ್ಟಲು ಯತ್ನಿಸುತ್ತಿದ್ದ; ಅಸಹ್ಯ ಅನುಭವ ಬಿಚ್ಚಿಟ್ಟ ಯುವತಿ

    ಕೆಎಸ್​ಆರ್​ಟಿಸಿ ಬಸ್​ನಲ್ಲಿ ಹಾವು!; ಲಾಕ್​ಡೌನ್​ ಇಫೆಕ್ಟ್​, ಚಾಲಕರಲ್ಲಿ ಭಯ…

    ಸಗಣಿಯನ್ನೂ ಬಿಡದ ಕಳ್ಳರು; 800 ಕೆ.ಜಿ. ಗೋಮಯ ಕಳವು, ಪೊಲೀಸರಿಗೆ ದೂರು..

    ನಾಪತ್ತೆಯಾದ ಹದಿನಾಲ್ಕರ ಹುಡುಗಿ 2 ವರ್ಷಗಳ ಬಳಿಕ 4 ತಿಂಗಳ ಮಗುವಿನೊಂದಿಗೆ ಪತ್ತೆಯಾದಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts