More

    ಸಗಣಿಯನ್ನೂ ಬಿಡದ ಕಳ್ಳರು; 800 ಕೆ.ಜಿ. ಗೋಮಯ ಕಳವು, ಪೊಲೀಸರಿಗೆ ದೂರು..

    ನವದೆಹಲಿ: ಸಗಣಿ ಅರ್ಥಾತ್ ಗೋಮಯದಲ್ಲಿ ಬಹಳಷ್ಟು ಔಷಧೀಯ ಗುಣಗಳಿವೆ, ಅದನ್ನು ಪವಿತ್ರ ಎಂದೂ ಪರಿಗಣಿಸಲಾಗಿರುತ್ತದೆ. ಹಾಗಿದ್ದರೂ ಅದನ್ನು ಯಾರೂ ಕಳವು ಮಾಡುವುದಿಲ್ಲ. ಆದರೆ ಇಲ್ಲೊಂದು ಕಡೆ ಕಳ್ಳರು ಸಗಣಿಯನ್ನೂ ಬಿಟ್ಟಿಲ್ಲ. ಸುಮಾರು 800 ಕೆ.ಜಿ. ಸಗಣಿಯನ್ನು ಕಳವು ಮಾಡಲಾಗಿದ್ದು, ಪೊಲೀಸರಿಗೆ ದೂರು ನೀಡಲಾಗಿದೆ.

    ಇಂಥದ್ದೊಂದು ಅಪರೂಪದ ಕಳವು ಪ್ರಕರಣ ಛತ್ತೀಸ್​ಗಢದ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಛತ್ತೀಸ್​ಗಢದ ಕೊರಬ ಜಿಲ್ಲೆಯ ಧುರೇನಾ ಗ್ರಾಮದಿಂದ 800 ಕೆ.ಜಿ. ಸಗಣಿಯನ್ನು ಕಳವು ಮಾಡಲಾಗಿದೆ. ಇಲ್ಲಿನ ದಿಪ್ಕಾ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಜೂನ್​ 8-9ರ ರಾತ್ರಿ ಈ ಕಳ್ಳತನ ಸಂಭವಿಸಿದ್ದು, ಪ್ರಕರಣ ದಾಖಲಾಗಿದೆ.

    ಇದನ್ನೂ ಓದಿ: ಆತ್ಮಹತ್ಯೆ ಮಾಡಿಕೊಳ್ಳುವವರಲ್ಲಿ ಪುರುಷರೇ ಹೆಚ್ಚು, ಏಕೆ?; ಗೃಹಿಣಿಯರಿಗೆ ಖುಷಿ ಕೊಟ್ಟೀತು ಈ ಅಧ್ಯಯನ ವರದಿ!

    8 ಕ್ವಿಂಟಾಲ್ ಸಗಣಿ ಕಳ್ಳತನ ಆಗಿದ್ದು, 1600 ರೂ. ಮೌಲ್ಯದ ಗೋಮಯವನ್ನು ಯಾರೋ ಅಪರಿಚಿತರು ಕಳವು ಮಾಡಿದ್ದಾರೆ ಎಂದು ದೂರು ಬಂದಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂಧು ದಿಪ್ಕಾ ಪೊಲೀಸ್ ಠಾಣೆಯ ಎಎಸ್​ಐ ಸುರೇಶ್ ಕುಮಾ ತಿಳಿಸಿದ್ದಾರೆ. ಗೋಧನ್ ನ್ಯಾಯ್ ಯೋಜನ್ ಸ್ಕೀಮ್​ನಲ್ಲಿ ಕೆ.ಜಿ.ಗೆ 2 ರೂ.ನಂತೆ ಸರ್ಕಾರ ಸಗಣಿಯನ್ನು ಖರೀದಿಸುವುದಾಗಿ ಹೇಳಿರುವ ಹಿನ್ನೆಲೆಯಲ್ಲಿ ಸಗಣಿಗೂ ಬೇಡಿಕೆ ಉಂಟಾಗಿದ್ದು, ಕಳ್ಳತನ ಮಾಡಲಾಗಿದೆ ಎನ್ನಲಾಗಿದೆ. (ಏಜೆನ್ಸೀಸ್​)

    ನಾಪತ್ತೆಯಾದ ಹದಿನಾಲ್ಕರ ಹುಡುಗಿ 2 ವರ್ಷಗಳ ಬಳಿಕ 4 ತಿಂಗಳ ಮಗುವಿನೊಂದಿಗೆ ಪತ್ತೆಯಾದಳು!

    ಜೊಮ್ಯಾಟೋ ಡೆಲಿವರಿ ಯುವಕನಿಗೆ ಬೈಕ್ ಕೊಡುಗೆಯಾಗಿ ಕೊಟ್ಟ ಗ್ರಾಹಕರು; ಕಾರಣ ತಿಳಿದರೆ ಅಯ್ಯೋ ಅನಿಸುತ್ತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts