More

    ಕೋವಿಡ್​ ನಿಯಮ ಮೀರಿ ನಡೆಯುತ್ತಿದ್ದ ಮದುವೆ; ಅಧಿಕಾರಿಗಳೊಂದಿಗೆ ಮದ್ವೆ ಮನೆಯವರ ವಾಗ್ವಾದ, ಮೂರು ಕಾರು ಜಪ್ತಿ…

    ಮಂಡ್ಯ: ಕೋವಿಡ್ ನಿಯಮ ಮೀರಿ ಮದುವೆ ನಡೆಯುತ್ತಿದ್ದ ಜಾಗಕ್ಕೆ ಅಧಿಕಾರಿಗಳು ದಾಳಿ ನಡೆಸಿ, ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಮದುವೆ ಮನೆಯಲ್ಲಿ ಕೆಲಕಾಲ ಗದ್ದಲ-ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಮಂಡ್ಯ ತಾಲೂಕು ಎಚ್.ಮಲ್ಲಿಗೆರೆ ಗ್ರಾಮದ ಅಂಬೆಗಾಲು ಕೃಷ್ಣ ದೇವಸ್ಥಾನದಲ್ಲಿ ಈ ಮದುವೆ ಆಯೋಜಿಸಲಾಗಿತ್ತು.

    ಮದುವೆಯಲ್ಲಿ ಸುಮಾರು 300 ಜನರು ಭಾಗವಹಿಸಿದ್ದರು. ಕೋವಿಡ್​-19 ಮಾರ್ಗಸೂಚಿಗಳ ಪಾಲನೆಯಾಗದ್ದನ್ನು ಅರಿತ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಮದುವೆ ಮನೆಯವರು ಅಧಿಕಾರಿಗಳ ಮೇಲೆ ಹರಿಹಾಯ್ದ ಪ್ರಸಂಗವೂ ನಡೆಯಿತು.

    ಇದನ್ನೂ ಓದಿ: ಹೆಂಡತಿಗೆ ಕಿರುಕುಳ ಕೊಟ್ಟು ಸಾವು ತಂದುಕೊಂಡ ಗಂಡ; ಆಕೆ ಹೊಡೆಯಿರಿ ಎಂದಳು, ಅವರಿಬ್ಬರು ಕೊಂದೇ ಬಿಟ್ಟರು…

    ಮದುವೆ ನಿಲ್ಲಿಸುವಂತೆ ಆಯೋಜಕರಿಗೆ ಅಧಿಕಾರಿಗಳು ಹಾಗೂ ಪೊಲೀಸರು ಸೂಚನೆ ನೀಡಿದ್ದರೂ ಮದುವೆ ಮನೆಯವರು ಲೆಕ್ಕಿಸದೆ ವಾದಕ್ಕಿಳಿದರು. ಕೊನೆಗೆ ಕರ್ತವ್ಯ ಅಡ್ಡಿ ಪ್ರಕರಣ ದಾಖಲಿಸಿಕೊಂಡ ಅಧಿಕಾರಿಗಳು, ಮದುವೆ ಮನೆಯಲ್ಲಿದ್ದ ಮೂರು ಕಾರುಗಳನ್ನು ವಶಕ್ಕೆ ಪಡೆದಿದ್ದಾರೆ. ಕೆರಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಅಪ್ಪನ ಹೆಣ ಬೇಡ, ಅವರ ಹಣ ಬೇಕು; ಅನಾಥ ಶವ ಎಂದರೂ ಸರಿ ಎಂದ, 6 ಲಕ್ಷ ಇದೆ ಎಂದಾಗ 5 ನಿಮಿಷ ಎಂದು ಹೇಳಿದ ಮಗ!

    ಗಾಳಿಯಲ್ಲೂ ಹರಡುವ ಕರೊನಾ ವೈರಸ್ ನಿಷ್ಕ್ರಿಯಗೊಳಿಸಲು ಬಂದಿದೆ ಏರ್ ಡಕ್ಟ್​!; ಸಿಎಸ್ಐಆರ್ ಸಂಶೋಧಿತ ಯುವಿ-ಸಿ ವಾಯುನಾಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts