More

    ರಾಜ್ಯದಲ್ಲಿ ಕೋವಿಡ್ ಪ್ರಕರಣ ಏರಿಕೆ: ಸೋಂಕಿನ ತೀವ್ರತೆಗೆ ಮೂವರು ವೃದ್ಧರ ಸಾವು: ಗುರಿ ತಲುಪುತ್ತಿಲ್ಲ ಟೆಸ್ಟ್ ಟಾರ್ಗೆಟ್!

    ಬೆಂಗಳೂರು: ಕೋವಿಡ್ ಸೋಂಕು ಪ್ರಕರಣಗಳ ಏರಿಕೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ದೈನಂದಿನ ಕೋವಿಡ್ ಪರೀಕ್ಷೆಗಳ ಸಂಖ್ಯೆಯನ್ನು 20 ಸಾವಿರಕ್ಕೆ ಹೆಚ್ಚಿಸಲು ಆರೋಗ್ಯ ಇಲಾಖೆ ಸೂಚನೆ ನೀಡಿ ಐದು ದಿನಗಳು ಕಳೆದಿದ್ದರೂ, ಪರೀಕ್ಷೆ ಸಂಖ್ಯೆ ಗುರಿ ತಲುಪುತ್ತಿಲ್ಲ.

    ಏ. 14ರಂದು 16, 496 ಪರೀಕ್ಷೆ ನಡೆಸಲಾಗಿದ್ದು, 498 (ಶೇ. 3.31) ಪ್ರಕರಣಗಳು ವರದಿಯಾಗಿವೆ. ಏ. 15ರಂದು 9,265 ಪರೀಕ್ಷೆ, 377 (ಶೇ. 4.06), ಏ. 16ರಂದು 11,693 ಪರೀಕ್ಷೆ 235 (ಶೇ. 2), ಏ. 17ರಂದು 4,012 ಪರೀಕ್ಷೆ 358 (ಶೇ. 8.92) ಹಾಗೂ ಏ. 18ರಂದು 16,634 ಪರೀಕ್ಷೆ ನಡೆಸಲಾಗಿದ್ದು, 379 (ಶೇ. 2.27) ಪ್ರಕರಣಗಳು ವರದಿಯಾಗಿವೆ.

    ಇದನ್ನೂ ಓದಿ: ತಾನೂ ಕೋಟ್ಯಧಿಪತಿ, ಮಕ್ಕಳಿಬ್ಬರೂ ಕೋಟ್ಯಧಿಪತಿ, ಹೆಂಡತಿಯೂ ಕೋಟಿ ರೂ. ಮೌಲ್ಯದ ಚಿನ್ನಾಭರಣದ ಒಡತಿ, ಆದ್ರೆ ಸ್ವಂತ ಕಾರಿಲ್ಲ!

    ಸೋಂಕು ಹೆಚ್ಚಳ ಆಗಿರುವುದರಿಂದ ಮನೆ ಹಾಗೂ ಕಚೇರಿಗಳಲ್ಲಿ ಸೋಂಕಿತರ ಪ್ರಾಥಮಿಕ ಸಂಪರ್ಕಿತರಿಗೆ ಕಡ್ಡಾಯವಾಗಿ ಪರೀಕ್ಷೆ ನಡೆಸುವಂತೆ ಹಾಗೂ ಸಾರಿ (ತೀವ್ರ ಉಸಿರಾಟದ ತೊಂದರೆ) ಮತ್ತು ಐಎಲ್‌ಐ (ಶೀತಜ್ವರ ಸಮಸ್ಯೆಗಳು) ಪ್ರಕರಣಗಳನ್ನು, ರೋಗ ಲಕ್ಷಣ ಹೊಂದಿರುವ ಅಂತರರಾಜ್ಯ ಹಾಗೂ ಅಂತರರಾಷ್ಟ್ರೀಯ ಪ್ರಯಾಣಿಕರನ್ನು ಕಡ್ಡಾಯವಾಗಿ ಪರೀಕ್ಷೆಗೆ ಒಳಪಡಿಸಬೇಕು ಎಂದು ಸೂಚಿಸಲಾಗಿತ್ತು.

    ಇದನ್ನೂ ಓದಿ: ಜಲಮಂಡಳಿಯ ನಿರ್ಲಕ್ಷ್ಯಕ್ಕೆ 2 ವರ್ಷದ ಮಗು ಬಲಿ; ಗುಂಡಿ ತೆಗೆದು ತಿಂಗಳಾದರೂ ಮುಚ್ಚಿರಲಿಲ್ಲ!

    ಕೋವಿಡ್ ಸೋಂಕು ಪ್ರಕರಣಗಳು ದಿನೇದಿನೆ ಹೆಚ್ಚುತ್ತಿರುವುದರಿಂದ ನಿತ್ಯದ ಪರೀಕ್ಷೆ ಸಂಖ್ಯೆ 20 ಸಾವಿರಕ್ಕೆ ಹೆಚ್ಚಿಸಲಾಗಿದೆ. ಇದರಿಂದ ದಿನದ ಸೋಂಕು ದೃಢ ಪ್ರಮಾಣ ದರ ಶೇ. 5ಕ್ಕಿಂತ ಕಡಿಮೆ ಇದ್ದಲ್ಲಿ ಆತಂಕ ಪಡುವ ಅಗತ್ಯವಿಲ್ಲ. ಜೊತೆಗೆ ಹೊಸ ತಳಿ ಪತ್ತೆಗೂ ಅನುಕೂಲವಾಗಲಿದೆ. ಆದರೆ ಜನರು ಸೋಂಕು ಲಕ್ಷಣಗಳಿದ್ದರೂ ಪರೀಕ್ಷೆ ಮಾಡಿಸಿಕೊಳ್ಳಲು ಹಿಂದೇಟು ಹಾಕುತ್ತಿರುವುದೂ ನಿರ್ದಿಷ್ಟ ಪರೀಕ್ಷೆ ನಡೆಸಲು ಹಿನ್ನಡೆಯಾಗುತ್ತಿದೆ ಎಂದು ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ.

    ಸಕ್ರಿಯ ಪ್ರಕರಣಗಳ ಸಂಖ್ಯೆ 2 ಸಾವಿರಕ್ಕೆ ಏರಿಕೆ

    ರಾಜ್ಯದಲ್ಲಿ ಮಂಗಳವಾರ 16,634 ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, 379 ಮಂದಿಗೆ ಸೋಂಕು ದೃಢಪಟ್ಟಿದೆ. ಇದರೊಂದಿಗೆ ದಿನದ ಸೋಂಕು ಪ್ರಮಾಣ ದರ ಶೇ. 2.27 ತಲುಪಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 2,056ಕ್ಕೆ ಏರಿಕೆಯಾಗಿದೆ. ಮತ್ತೊಂದೆಡೆ ಸಾವಿನ ಪ್ರಕರಣಗಳು ಹೆಚ್ಚುತ್ತಿದ್ದು, ಕಲಬುರಗಿಯಲ್ಲಿ (71 ವರ್ಷ), ಧಾರವಾಡದಲ್ಲಿ (69 ವರ್ಷ) ಹಾಗೂ ತುಮಕೂರಿನಲ್ಲಿ (60 ವರ್ಷ) ತಲಾ ಒಬ್ಬರಂತೆ ಮೂವರು ಸೋಂಕಿನ ತೀವ್ರತೆಯಿಂದ ಮೃತಪಟ್ಟಿದ್ದಾರೆ. ಇವರೆಲ್ಲರೂ ತೀವ್ರ ಉಸಿರಾಟದ ತೊಂದರೆಯಿಂದ ಚಿಕಿತ್ಸೆ ದಾಖಲಾಗಿದ್ದರು. ಇದರೊಂದಿಗೆ ಈವರೆಗೂ ಮೃತಪಟ್ಟವರ ಒಟ್ಟು ಸಂಖ್ಯೆ 40,297ಕ್ಕೆ ಏರಿಕೆಯಾಗಿದೆ.

    ಇದನ್ನೂ ಓದಿ: ಕೋವಿಡ್​ನಿಂದ ಸತ್ತಿದ್ದ ಎನ್ನಲಾದ ವ್ಯಕ್ತಿ 2 ವರ್ಷದ ಬಳಿಕ ಮನೆಗೇ ಬಂದ!; ಅಂತ್ಯಸಂಸ್ಕಾರ ಮಾಡಿದ್ವಿ ಎಂದಿದ್ದ ಅಧಿಕಾರಿಗಳು!

    ಬೆಂಗಳೂರು ನಗರದಲ್ಲಿ ಅತಿ ಹೆಚ್ಚು 231 ಪ್ರಕರಣಗಳು ವರದಿಯಾಗಿವೆ. ಶಿವಮೊಗ್ಗ 36, ಬೆಂಗಳೂರು ಗ್ರಾಮಾಂತರ 15, ದಾವಣಗೆರೆ 14, ವಿಜಯನಗರ 13, ಮೈಸೂರು 10, ಬೆಳಗಾವಿ 9, ಚಿಕ್ಕಮಗಳೂರು 7, ಹಾಸನ ಮತ್ತು ಕಲಬುರಗಿ ತಲಾ 6, ಉತ್ತರ ಕನ್ನಡ 5, ಬಳ್ಳಾರಿ, ದಕ್ಷಿಣ ಕನ್ನಡ ಮತ್ತು ಧಾರವಾಡ ತಲಾ 4, ಕೋಲಾರ ಮತ್ತು ತುಮಕೂರು ತಲಾ 3, ಬಾಗಲಕೋಟೆ, ಚಿತ್ರದುರ್ಗ ಮತ್ತು ರಾಯಚೂರು ತಲಾ ಇಬ್ಬರು ಹಾಗೂ ಬೀದರ್, ಚಿಕ್ಕಬಳ್ಳಾಪುರ ಮತ್ತು ಗದಗದಲ್ಲಿ ತಲಾ ಒಬ್ಬರಂತೆ 379 ಮಂದಿಗೆ ಸೋಂಕು ದೃಢಪಟ್ಟಿದೆ.

    ದಾಖಲೆ ಇಲ್ಲದ 7 ಕೋಟಿ ರೂ. ಪತ್ತೆ; ಐಎಎಸ್​ ಅಧಿಕಾರಿಯೊಬ್ಬರು ಸ್ಥಳಕ್ಕೆ ಹೋದ ಬಳಿಕ ಹಣವೇ ನಾಪತ್ತೆ!

    ಶ್ರೀರಾಮುಲು ಮಾತ್ರವಲ್ಲ, ಅವರ ಪತ್ನಿ ಮತ್ತು ಮಕ್ಕಳಿಬ್ಬರೂ ಕೋಟ್ಯಧಿಪತಿಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts