More

    ದಾಖಲೆ ಇಲ್ಲದ 7 ಕೋಟಿ ರೂ. ಪತ್ತೆ; ಐಎಎಸ್​ ಅಧಿಕಾರಿಯೊಬ್ಬರು ಸ್ಥಳಕ್ಕೆ ಹೋದ ಬಳಿಕ ಹಣವೇ ನಾಪತ್ತೆ!

    ಬೆಂಗಳೂರು: ನಗರದ ದಕ್ಷಿಣ ಕ್ಷೇತ್ರದಲ್ಲಿ 7 ಕೋಟಿ ನಗದು ಪತ್ತೆಯಾಗಿದ್ದು, ಐಎಎಸ್ ಅಧಿಕಾರಿಯೊಬ್ಬರು ಸ್ಥಳಕ್ಕೆ ತೆರಳಿದ ನಂತರ ಆ ಹಣ ಮಂಗಮಾಯವಾಗಿದೆ ಎಂಬ ಆರೋಪ ಕೇಳಿ ಬಂದಿದೆ.

    ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಪೊಲೀಸರು ವಾಹನಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದು, ಸೋಮವಾರ ತಡರಾತ್ರಿ ಪೊಲೀಸರು ವಾಹನಗಳ ತಪಾಸಣೆ ನಡೆಸುವ ವೇಳೆ 7 ಕೋಟಿ ರೂ. ಪತ್ತೆಯಾಗಿದೆ. ಅಚ್ಚರಿ ಎಂದರೆ ಹಣ ಪತ್ತೆಯಾಗುತ್ತಿದ್ದಂತೆ ಐಎಎಸ್ ಅಧಿಕಾರಿಯೊಬ್ಬರು ಸ್ಥಳಕ್ಕೆ ಬಂದಿದ್ದು, ಬಳಿಕ ಹಣ ಎಲ್ಲಿ ಹೋಗಿದೆ ಎಂಬುದು ನಿಗೂಢವಾಗಿದೆ.

    ಇದನ್ನೂ ಓದಿ: ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆ; ಮಾಜಿ ಪ್ರಧಾನಿ ಮೊಮ್ಮಗನ ವಾರ್ಷಿಕ ಆದಾಯ ಇಷ್ಟು!

    ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಗೆ ಬಂದ ಬಳಿಕ ಪತ್ತೆಯಾದ ಬೃಹತ್ ಮೊತ್ತದ ಹಣ ಇದಾಗಿದೆ ಎಂದು ತಿಳಿದು ಬಂದಿದೆ. ಇದೀಗ ಪೊಲೀಸರಿಗೆ ಸಿಕ್ಕ ಕೋಟ್ಯಂತರ ರೂಪಾಯಿಯನ್ನು ಯಾರ ಕೈಗೂ ಸಿಗದೆ ಕಣ್ತಪ್ಪಿಸಿ ತೆಗೆದುಕೊಂಡು ಹೋಗಿರುವ ಬಗ್ಗೆ ಐಟಿ ಅಧಿಕಾರಿಗಳಿಗೆ ಮಾಹಿತಿ ಲಭಿಸಿದ್ದು, ಶೋಧ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

    ಪ್ರಭಾವಿಗಳ ಕೈವಾಡ?

    ಹಣ ಸಿಕ್ಕ ಕೆಲವೇ ಕ್ಷಣದಲ್ಲಿ ಹಿರಿಯ ಐಎಎಸ್ ಅಧಿಕಾರಿಯೊಬ್ಬರು ಸ್ಥಳಕ್ಕೆ ಬಂದಿದ್ದಾರೆ. ನಂತರ 7 ಕೋಟಿ ರೂ. ಏನಾಯಿತು ಎಂಬುದು ಯಾರಿಗೂ ಗೊತ್ತಿಲ್ಲ. ಸ್ಥಳೀಯ ಪೊಲೀಸರಿಗೂ ಈ ಬಗ್ಗೆ ಮಾಹಿತಿ ಇಲ್ಲ. ಸದ್ಯ ಇಂತಹ ಗಂಭೀರ ಆರೋಪ ಕೇಳಿ ಬಂದ ಬೆನ್ನಲ್ಲೇ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು (ಐಟಿ) ಮಾಹಿತಿ ಕಲೆ ಹಾಕಿ ಹಣದ ಜಾಡು ಹಿಡಿಯಲು ಹೊರಟಿದ್ದಾರೆ.

    ಹಣ ಸಿಕ್ಕಿರುವ ಕುರಿತು ಸ್ಥಳೀಯ ಪೊಲೀಸರಿಗೆ ಯಾವುದೇ ಮಾಹಿತಿ ಇಲ್ಲ. ಜತೆಗೆ ಯಾವುದೇ ದೂರು ದಾಖಲಾಗಿಲ್ಲ. ಮಾಧ್ಯಮಗಳ ಮೂಲಕ ನಮಗೆ ವಿಷಯ ಗೊತ್ತಾಗಿದೆ. ಈ ಸಂಬಂಧ ತನಿಖೆ ಕೈಗೊಳ್ಳಲಾಗುವುದು.
    | ಕೃಷ್ಣಕಾಂತ್, ದಕ್ಷಿಣ ವಿಭಾಗದ ಡಿಸಿಪಿ

    ಆ ಹಣ ಯಾರದ್ದು ಮತ್ತು ಎಲ್ಲಿಗೆ ಹೋಗಿದೆ? ಎಂಬುದರ ಬಗ್ಗೆ ತನಿಖೆ ಪ್ರಾರಂಭಿಸಿದ್ದಾರೆ. ಹಿರಿಯ ಐಟಿ ಅಧಿಕಾರಿಗಳು ಸೆಕ್ಟರ್ ಐಟಿ ಅಧಿಕಾರಿಯಿಂದ ಹೆಚ್ಚಿನ ಮಾಹಿತಿ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಆದರೆ, ಪ್ರಕರಣದ ಕುರಿತು ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇಷ್ಟೊಂದು ದೊಡ್ಡ ಮೊತ್ತದ ಹಣ ಪತ್ತೆಯಾಗಿ ನಿಗೂಢವಾಗಿ ಕಣ್ಮರೆಯಾಗಿರುವುದರ ಹಿಂದೆ ಪ್ರಭಾವಿಗಳ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ. ಆದರೆ, ಈ ಬಗ್ಗೆ ಅಧಿಕಾರಿಗಳಲ್ಲೂ ಗೊಂದಲ ಉಂಟಾಗಿದೆ ಎಂದು ತಿಳಿದು ಬಂದಿದೆ.

    ನಾನು ನಿಮಗೆ, ನಿಮ್ಮ ಕುಟುಂಬಕ್ಕೆ ಮಾಡಿದ ಅನ್ಯಾಯ ಏನು? ನನ್ನ ಮೇಲೆ ಯಾಕಿಷ್ಟು ದ್ವೇಷ?: ಸುಮಲತಾಗೆ ಎಚ್​ಡಿಕೆ ಪ್ರಶ್ನೆ

    ಶ್ರೀರಾಮುಲು ಮಾತ್ರವಲ್ಲ, ಅವರ ಪತ್ನಿ ಮತ್ತು ಮಕ್ಕಳಿಬ್ಬರೂ ಕೋಟ್ಯಧಿಪತಿಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts