More

    ವರ್ಷಾರಂಭದ ಬಳಿಕ ಇದೀಗ ಭಾರಿ ಸಮಾಧಾನ; ಗಣನೀಯವಾಗಿ ಇಳಿದ ಕರೊನಾ ಪ್ರಕರಣ

    ಬೆಂಗಳೂರು: ಈ ವರ್ಷದ ಆರಂಭದ ಮೊದಲ ದಿನದಂದೇ ದೈನಂದಿನ ಪ್ರಕರಣ 1 ಸಾವಿರದ ಗಡಿ ದಾಟಿ, ನಂತರ ಹ್ಯಾಟ್ರಿಕ್ ಬಾರಿಸಿ, ನಿರಂತರ ಏರುತ್ತಲೇ ಬಂದಿದ್ದ ಕರೊನಾ ಪ್ರಕರಣಗಳ ಸಂಖ್ಯೆ ಇದೀಗ ಬಹಳ ದಿನಗಳ ಬಳಿಕ ಗಣನೀಯವಾಗಿ ಇಳಿದಿದೆ.

    ತಾರಕಕ್ಕೇರಿ ತಲೆನೋವಾಗಿದ್ದ ಕರೊನಾ ಸೋಂಕಿನ ಪ್ರಕರಣಗಳ ಸಂಖ್ಯೆ ಮೂರ್ನಾಲ್ಕು ದಿನಗಳಿಂದ ತೀವ್ರಗತಿಯಲ್ಲಿ ಇಳಿಯುತ್ತಿದ್ದು, ಇದೀಗ ಒಂದಂಕಿಗೆ ಇಳಿಕೆ ಕಂಡಿದೆ. ರಾಜಧಾನಿ ಬೆಂಗಳೂರಿನಲ್ಲಿ ಪಾಸಿಟಿವಿಟಿ ದರ ಶೇ. 9.17ಕ್ಕೆ ಇಳಿದಿದ್ದು, ಇದು ಜ. 8ರ ಬಳಿಕ ಅತ್ಯಂತ ಕಡಿಮೆ ಪಾಸಿಟಿವಿಟಿ ದರವಾಗಿದೆ. ಅಲ್ಲದೆ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲೂ ಭಾರಿ ಇಳಿಕೆಯಾಗಿದ್ದು, ಅದು 51 ಸಾವಿರಕ್ಕೆ ಕುಸಿದಿದೆ.

    ಇದನ್ನೂ ಓದಿ: ಸಿಡಿ ಕೇಸ್​ಗೆ ಸಿಲುಕಿದ್ದ ಜಾರಕಿಹೊಳಿ ಈಗ ನಿರಾಳ; ವಿಶೇಷ ತನಿಖಾ ದಳದಿಂದ ನ್ಯಾಯಾಲಯಕ್ಕೆ ಬಿ-ರಿಪೋರ್ಟ್ ಸಲ್ಲಿಕೆ

    ಇನ್ನು ರಾಜ್ಯದಲ್ಲಿ ಇಂದು ಹೊಸದಾಗಿ 14,950 ಮಂದಿಯಲ್ಲಿ ಕೋವಿಡ್​ ಸೋಂಕು ದೃಢಪಟ್ಟಿದ್ದು, ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ. 10.93ಕ್ಕೆ ಇಳಿದಿದೆ. ಮತ್ತೊಂದೆಡೆ ರಾಜ್ಯದಲ್ಲಿ ಒಂದೇ ದಿನ 40,599 ಮಂದಿ ಆಸ್ಪತ್ರೆಗಳಿಂದ ಬಿಡುಗಡೆ ಆಗಿದ್ದಾರೆ. ಅಲ್ಲದೆ ರಾಜ್ಯದಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ 1,23,098ಕ್ಕೆ ಇಳಿದಿದೆ.

    ಕೋವಿಡ್ ವೇಳೆ ಕರ್ತವ್ಯ ನಿಭಾಯಿಸಿದ ಬಗ್ಗೆ ತೃಪ್ತಿ ಇದೆ ಎಂದ ಬಿಎಸ್‌ವೈ; ಶಿವಾನಂದ ತಗಡೂರು ಅವರ ‘ಕೋವಿಡ್ ಕತೆಗಳು’ ಪುಸ್ತಕ ಲೋಕಾರ್ಪಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts