More

    ವರ್ಷಾಂತ್ಯಕ್ಕೆ ಕರೊನಾ ಲಸಿಕೆ ತಯಾರಾಗುವುದು ಖಚಿತ

    ವಾಷಿಂಗ್ಟನ್​: ಜಗತ್ತಿನಾದ್ಯಂತ ಕೋವಿಡ್​-19 ಕಾಯಿಲೆಗೆ ಲಸಿಕೆ ಕಂಡು ಹಿಡಿಯಲು ಹಲವು ಸಂಸ್ಥೆಗಳು ಪೈಪೋಟಿ ಮೇಲೆ ಸಂಶೋಧನೆಗೆ ಇಳಿದಿವೆ. ಕ್ಲಿನಿಕಲ್​ ಟ್ರಯಲ್​ಗಳನ್ನು ನಡೆಸುತ್ತಿವೆ.

    ಇನ್ನೂ ಕೆಲ ಸಂಸ್ಥೆಗಳು ಈಗಿರುವ ಲಸಿಕೆಗಳನ್ನೇ ಮಾರ್ಪಡಿಸಿ ಕರೊನಾ ಕೊಲ್ಲಲು ಸಿದ್ಧತೆ ನಡೆಸಿವೆ. ಕರೊನಾಗೆ ಲಸಿಕೆ ಯಾವಾಗ ಸಿದ್ಧವಾಗುತ್ತೋ ಎಂದು ಎಲ್ಲ ರಾಷ್ಟ್ರಗಳು ಕಾಯುತ್ತಿವೆ. ಇಂಥ ಅವಧಿಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ.

    ವರ್ಷಾಂತ್ಯಕ್ಕೆ ಕೋವಿಡ್​-19 ನಿವಾರಿಸುವ ಔಷಧ ಸಿದ್ಧಗೊಳ್ಳುವುವು ಖಚಿತ ಎಂದು ಹೇಳಿದ್ದಾರೆ. ಎರಡನೇ ಅವಧಿಗೆ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿರುವ ಟ್ರಂಪ್​ ಈಗಾಗಲೇ ಚುನಾವಣೆ ಪ್ರಚಾರಕ್ಕೆ ಚಾಲನೆ ನೀಡಿದ್ದು, ಇದನ್ನೇ ಚುನಾವಣೆ ವಿಷಯವನ್ನಾಗಿಸಿಕೊಂಡಿದ್ದಾರೆ.

    ಇದನ್ನೂ ಓದಿ; ಯುಪಿಎಸ್ಸಿ ಪೂರ್ವಭಾವಿ ಪರೀಕ್ಷೆಗಳು ಅನಿರ್ದಿಷ್ಟಾವಧಿಗೆ ಮುಂದೂಡಿಕೆ

    ಈ ಬೇಸಿಗೆಯಲ್ಲಿ ಜನರು ಸಮುದ್ರ ತೀರಗಳಲ್ಲಿ ವಿಹರಿಸುವಂತಾಗಬೇಕು. ಸೆಪ್ಟಂಬರ್​ ವೇಳೆಗೆ ಎಲ್ಲ ಶಿಕ್ಷಣ ಸಂಸ್ಥೆಗಳು ಮತ್ತೆ ಕಾರ್ಯಾರಂಭಿಸಬೇಕು ಎನ್ನುವುದು ನಮ್ಮ ಆಶಯವಾಗಿದೆ ಎಂದು ಹೇಳಿದ್ದಾರೆ.

    ಈ ದೇಶವನ್ನು ತೊರೆಯವುದು ಅಥವಾ ದೇಶವನ್ನು ಎಲ್ಲ ರೀತಿಯಿಂದ ಮುಚ್ಚಿರುವಂತೆ ಬಿಡಲು ಸಾಧ್ಯವಾಗದು. ಮುಂದಿನ ವರ್ಷ ಅತ್ಯದ್ಭುತವನ್ನಾಗಿಸುವ ಉದ್ದೇಶ ಹೊಂದಿದ್ದೇನೆ ಎಂದು ಟ್ರಂಪ್​ ಹೇಳಿದ್ದಾರೆ. ಕಳೆದುಕೊಂಡಿರುವ ಉದ್ಯೋಗವನ್ನು ಅಮೆರಿಕನ್ನರು ಪಡೆದುಕೊಳ್ಳಲಿದ್ದಾರೆ ಹಾಗೂ ಈ ಹಿಂದಿಗಿಂತಲೂ ಹೆಚ್ಚು ಗಳಿಸಲಿದ್ದಾರೆ ಎಂದು ಟ್ರಂಪ್​ ಭರವಸೆ ನೀಡಿದ್ದಾರೆ.

    ಅಮೆರಿಕದ ಆರ್ಥಿಕತೆ ಉತ್ತುಂಗದಲ್ಲಿದ್ದಾಗ, ಎರಡನೇ ಅವಧಿ ಖಚಿತ ಎನ್ನುವ ಸ್ಥಿತಿಯಿಂದ ಟ್ರಂಪ್​ ಈಗ ಕೆಳಗೆ ಜಾರಿದ್ದಾರೆ. ಪ್ರತಿಸ್ಪರ್ಧಿ ಜಾಯ್​ ಬಿಡೆನ್​ಗಿಂತಲೂ ಹಲವು ವಿಷಯಗಳಲ್ಲಿ ಹಿಂದಿದ್ದಾರೆ ಎಂದು ಅಮೆರಿಕ ಮಾಧ್ಯಮಗಳು ವಿಶ್ಲೇಷಿಸಿವೆ.

    ಇದೆಂಥ ದೌರ್ಭಾಗ್ಯ.. ಕೇರಳದ ಅತಿದೊಡ್ಡ ಅರಮನೆಯಲ್ಲಿ ಅದರ ಮಾಲೀಕ ವಾಸವಿದ್ದದ್ದು ಕೇವಲ ಒಂದು ತಿಂಗಳಷ್ಟೇ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts