More

    ಎಸ್ಸೆಸ್ಸೆಲ್ಸಿ ಪರೀಕ್ಷಾ ವಿದ್ಯಾರ್ಥಿಗೆ ಸೋಂಕು ಪತ್ತೆ

    ಹಾಸನ: ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಮಲ್ಲಿಪಟ್ಟಣ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುತ್ತಿದ್ದ 16 ವರ್ಷದ ವಿದ್ಯಾರ್ಥಿಗೆ ಕೋವಿಡ್ -19 ಸೋಂಕು ಇರುವುದು ಕಂಡುಬಂದಿದೆ.
    ಡೆಂಘೆ ಜ್ವರದಿಂದ ಬಳಲುತ್ತಿದ್ದ ಬಾಲಕ ಚಿಕಿತ್ಸೆಗಾಗಿ ಅರಕಲಗೂಡು ತಾಲ್ಲೂಕು ಆಸ್ಪತ್ರೆಗೆ ತೆರಳಿದಾಗ ಅಲ್ಲಿ ಗಂಟಲು ದ್ರವದ ಮಾದರಿಗಳನ್ನು ಸಂಗ್ರಹಿಸಿ ಶುಕ್ರವಾರ ಹಾಸನದ ನಿಗದಿತ ಕೋವಿಡ್-19 ಆಸ್ಪತ್ರೆಗೆ ಪರೀಕ್ಷೆಗೆ ಕಳುಹಿಸಲಾಗಿತ್ತು.

    ಇದನ್ನೂ ಓದಿ:ಕರ್ತಾಪುರ್ ಕಾರಿಡಾರ್ ಮರು ಆರಂಭಕ್ಕೆ ಸಿದ್ಧತೆ: ಪಾಕಿಸ್ತಾನದ್ದು ತೋರಿಕೆ ಸದ್ಭಾವನೆ ಎಂದ ಕೇಂದ್ರ

    ಗಂಟಲು ದ್ರವ ಪರೀಕ್ಷಾ ವರದಿಯನ್ನು ಶನಿವಾರ ತಾಲ್ಲೂಕು ಪ್ರಾಧಿಕಾರಕ್ಕೆ ಕಳುಹಿಸಲಾಯಿತು, ಆನಂತರ ಅಧಿಕಾರಿಗಳು ಆ ಬಾಲಕ ಇತರ ಹದಿನೇಳು ವಿದ್ಯಾರ್ಥಿಗಳೊಂದಿಗೆ ಕೊಠಡಿಯಲ್ಲಿ ಪರೀಕ್ಷೆ ಬರೆಯುತ್ತಿದ್ದ ಮಲ್ಲಿಪಟ್ಟಣದ ಶಾಲೆಗೆ ಧಾವಿಸಿದರು.
    ಪರೀಕ್ಷೆಯ ನಂತರ ವಿದ್ಯಾರ್ಥಿಯನ್ನು ಆರೋಗ್ಯ ಸಿಬ್ಬಂದಿ ಹಾಸನದ ಕೋವಿಡ್ ಆಸ್ಪತ್ರೆಗೆ ಕರೆದೊಯ್ದರು. ಪರೀಕ್ಷಾ ಕೇಂದ್ರದಲ್ಲಿ ಶಿಕ್ಷಣ ಇಲಾಖೆಯ ಸಿಬ್ಬಂದಿ ಆ ವಿದ್ಯಾರ್ಥಿಯನ್ನು ಥರ್ಮಲ್ ಸ್ಕ್ರೀನಿಂಗ್​​ಗೆ ಒಳಪಡಿಸಿದಾಗ ಬಾಲಕನ ಆರೋಗ್ಯ ಸ್ಥಿತಿ ಮತ್ತು ತಾಪಮಾನ ಸಾಮಾನ್ಯ ಮಟ್ಟದ್ದಾಗಿತ್ತು.
    ವಿದ್ಯಾರ್ಥಿಯು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಉಪ ಆಯುಕ್ತ ಗಿರೀಶ್ ತಿಳಿಸಿದ್ದಾರೆ.

    ಇದನ್ನೂ ಓದಿ: ಲಡಾಖ್​ನಲ್ಲಿ ಆಕ್ರಮಣಕಾರಿ ಮನೋಭಾವ ತೋರುತ್ತಿರುವುದಕ್ಕೆ ಚೀನಾ ಭಾರಿ ಬೆಲೆ ತೆರಬೇಕಾಗುತ್ತೆ

    ಅದೇ ತರಗತಿಯಲ್ಲಿ ಬಾಲಕನೊಂದಿಗೆ ಪರೀಕ್ಷೆ ಬರೆದ ಉಳಿದ 17 ವಿದ್ಯಾರ್ಥಿಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಸಲಹೆಗಳನ್ನು ಕೋರಿ ಶಿಕ್ಷಣ ಆಯುಕ್ತರಿಗೆ ವರದಿ ಕಳುಹಿಸಿರುವುದಾಗಿ ಅವರು ಹೇಳಿದರು. ಪರೀಕ್ಷಾ ಕೇಂದ್ರಕ್ಕೆ ನಿಯೋಜಿಸಲಾಗಿರುವ ಮೇಲ್ವಿಚಾರಕರು ಮತ್ತು ಸಿಬ್ಬಂದಿಯನ್ನೂ ಸಹ ಹೋಮ್ ಕ್ವಾರಂಟೈನ್​​ಗೆ ಒಳಪಡಿಸಲಾಗುತ್ತದೆ ಎಂದು ಅವರು ತಿಳಿಸಿದರು.

    ಅತಿ ದೊಡ್ಡ ಕೊವಿಡ್​-19 ಕೇರ್​ ಸೆಂಟರ್​​ಗೆ ಅಮಿತ್​ ಷಾ, ಅರವಿಂದ್​ ಕೇಜ್ರಿವಾಲ್​ ಜಂಟಿ ಭೇಟಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts