More

    ಮಲೆನಾಡಿನಲ್ಲೂ ಶುರುವಾಯಿತು ತಬ್ಲಿಘ್‌ಗಳ ಆತಂಕ!

    ಶಿವಮೊಗ್ಗ: ತಬ್ಲಿಘ್ ಜಮಾತ್ ಸಮಾವೇಶದಲ್ಲಿ ಪಾಲ್ಗೊಂಡವರೀಗ ದೇಶದ ಯಾವ ಯಾವ ಭಾಗಕ್ಕೆ ಹೋಗಿದ್ದಾರೋ ಅಲ್ಲೆಲ್ಲ ಕರೊನಾ ವೈರಸ್‌ನ ಆತಂಕ ಹರಡಿರುವುದು ನಿಮಗೆ ಗೊತ್ತೇ ಇದೆ. ಅದೇ ರೀತಿಯ ಆತಂಕ ಈಗ ಶಿವಮೊಗ್ಗ ಜಿಲ್ಲೆಯಲ್ಲೂ ತಲೆದೋರಿದೆ. ಕರೊನಾ ಆವರಿಸುವುದಕ್ಕೆ ಮೊದಲು ಈ ಸಮಾವೇಶಗಳು ಅಲ್ಲಲ್ಲಿ ನಡೆಯುತ್ತಲೇ ಇದ್ದವು. ಆದರೆ ಇವು ಯಾರ ಗಮನಕ್ಕೂ ಬಂದಿರಲಿಲ್ಲ. ದೆಹಲಿಯ ನಿಜಾಮುದ್ದೀನ್ ಬಳಿ ನಡೆದ ಸಮಾವೇಶ ವಿವಾದಕ್ಕೆ ಕಾರಣವಾದ ನಂತರ ಒಂದೊಂದಾಗಿ ಬಹಿರಂಗವಾಗತೊಡಗಿದವು.

    ಇದನ್ನೂ ಓದಿ: ಛತ್ತೀಸ್​ಗಢ ಮಾಜಿ ಸಿಎಂ ಅಜಿತ್​ ಜೋಗಿಗೆ ಕಾರ್ಡಿಯಾಕ್ ಅರೆಸ್ಟ್​

    ಈಗ, ಗುಜರಾತ್‌ನ ತಬ್ಲಿಘ್ ಜಮಾತ್‌ನಲ್ಲಿ ಪಾಲ್ಗೊಂಡಿದ್ದ ಶಿಕಾರಿಪುರದ ಒಂಬತ್ತು ಜನ ಸೇರಿ ಹೊರ ರಾಜ್ಯ ಮತ್ತು ಜಿಲ್ಲೆಗಳಿಂದ 30ಕ್ಕೂ ಅಧಿಕ ಮಂದಿ ಶನಿವಾರ ಶಿವಮೊಗ್ಗ ಜಿಲ್ಲೆಗೆ ಮರಳಿದ್ದಾರೆ. ಅವರಲ್ಲಿ ಹಲವರನ್ನು ಆರೋಗ್ಯಾಧಿಕಾರಿಗಳು ಕ್ವಾರಂಟೈನ್‌ಗೆ ಒಳಪಡಿಸಿದ್ದಾರೆ. ಆದರೆ ಶುಕ್ರವಾರವಷ್ಟೇ ನೆರೆಯ ಚಿತ್ರದುರ್ಗದಲ್ಲೂ ಮೂವರು ತಬ್ಲಿಘ್‌ಗಳಿಗೆ ಕರೊನಾ ಸೋಂಕು ದೃಢಪಟ್ಟಿರುವುದು ಇದೀಗ ಮಲೆನಾಡಲ್ಲೂ ಆತಂಕಕ್ಕೆ ಕಾರಣವಾಗಿದೆ.

    ಇದನ್ನೂ ಓದಿ: ಕಾಂಗ್ರೆಸ್ಸಿಗರಿಗೆ ಶಾಕ್ ನೀಡಿದ ಜಾರಿ ನಿರ್ದೇಶನಾಲಯ!

    ಮಾ.9ರಂದು ದಾವಣಗೆರೆಯಿಂದ ರೈಲಿನ ಮೂಲಕ ಅಹ್ಮದಾಬಾದ್‌ಗೆ ತೆರಳಿದ್ದ 9 ಮಂದಿ ಲಾಕ್‌ಡೌನ್‌ನಿಂದ ಅಲ್ಲಿನ ಮಸೀದಿಯಲ್ಲೇ ವಾಸ್ತವ್ಯ ಹೂಡಿದ್ದರು. ಬೇರೆ ರಾಜ್ಯಗಳಲ್ಲಿ ಇರುವವರು ತಮ್ಮ ರಾಜ್ಯಗಳಿಗೆ ಹೋಗಲು ಕೇಂದ್ರ ಸರ್ಕಾರ ಅನುಮತಿ ನೀಡಿದ ಹಿನ್ನೆಲೆಯಲ್ಲಿ ನಗರಕ್ಕೆ ವಾಪಸ್ ಆಗಿದ್ದು, ಬೆಳಗಾವಿ ಮೂಲಕ ರಾಜ್ಯವನ್ನು ತಬ್ಲಿಘ್‌ಗಳು ಪ್ರವೇಶ ಮಾಡಿದ್ದಾರೆ.

    ಇದನ್ನೂ ಓದಿ:   ಬಾಂಗ್ಲಾ ಹಿಂದುಗಳ ಮೇಲೆ ಮಿತಿಮೀರಿದೆ ದೌರ್ಜನ್ಯ- ಕಳೆದ ತಿಂಗಳ ಪಟ್ಟಿ ನೋಡಿ…

    ಜಮಾತ್‌ನಲ್ಲಿ ಭಾಗವಹಿಸಿದ ಬಳಿಕ ಮಸೀದಿಯಲ್ಲಿ ಆಶ್ರಯ ಪಡೆದಿದ್ದ 9 ಮಂದಿಯನ್ನು ಲಾಕ್‌ಡೌನ್ ವೇಳೆ ಗುಜರಾತ್ ಸರ್ಕಾರ ಕ್ವಾರಂಟೈನ್‌ನಲ್ಲಿ ಇರಿಸಿತ್ತು. ಇದೀಗ ಕ್ವಾರಂಟೈನ್ ಮುಗಿಸಿ ಅಲ್ಲಿನ ಸರ್ಕಾರದ ಅನುಮತಿ ಪಡೆದು ಶಿವಮೊಗ್ಗಕ್ಕೆ ವಾಪಸ್ ಬಂದಿದ್ದು, ಮುಂಜಾಗ್ರತಾ ಕ್ರಮವಾಗಿ ಎಲ್ಲರೂ ಕ್ವಾರಂಟೈನ್‌ನಲ್ಲಿ ಇರುವಂತೆ ಸೂಚಿಸಲಾಗಿದೆ.

    ಮೇ 17ರ ಬಳಿಕ ಪದವಿ ಪರೀಕ್ಷೆ ಕುರಿತು ನಿರ್ಧಾರ: ಸುಳಿವು ನೀಡಿದ್ರು ಡಿಸಿಎಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts