More

    ಕೋವಿಡ್ ನಿಯಮ ಉಲ್ಲಂಘನೆಗೆ 1 ಲಕ್ಷ ರೂ.ವರೆಗೆ ದಂಡ: ಮಾಲೀಕರು, ಆಯೋಜಕರೇ ಭರಿಸಬೇಕು

    ಬೆಂಗಳೂರು: ಸಾರ್ವಜನಿಕ ಪ್ರವೇಶ ಸ್ಥಳಗಳು ಮತ್ತು ಸಭೆ-ಸಮಾರಂಭಕ್ಕೆ ವೇದಿಕೆ ಕಲ್ಪಿಸುವ ಹೋಟೆಲ್, ಮಾಲ್, ಕಲ್ಯಾಣ ಮಂಟಪ, ಚಿತ್ರಮಂದಿರಗಳಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘನೆಯಾದಲ್ಲಿ ಮಾಲೀಕರಿಗೆ 5 ಸಾವಿರ ರೂ. ಗಳಿಂದ 1 ಲಕ್ಷ ರೂ. ವರೆಗೆ ದಂಡ ವಿಧಿಸುವುದಾಗಿ ಬಿಬಿಎಂಪಿ ಆದೇಶ ಹೊರಡಿಸಿದೆ.

    ಚಳಿಗಾಲದಲ್ಲಿ ಮತ್ತೆ ಸೋಂಕು ಹೆಚ್ಚಾಗುವ ಮತ್ತು 2ನೇ ಅಲೆ ಆರಂಭವಾಗುವ ಆತಂಕವಿದೆ. ಹೀಗಾಗಿ, ಹೆಚ್ಚು ಜನರು ಸೇರುವ ಕಡೆಗಳಲ್ಲಿ ಕಡ್ಡಾಯವಾಗಿ ಕೋವಿಡ್ ನಿಯಮ ಪಾಲಿಸಬೇಕು. ಜನರು ಮಾಸ್ಕ್ ಧರಿಸಿದ ಮತ್ತು ವ್ಯಕ್ತಿಗತ ಅಂತರ ಪಾಲನೆ ಬಗ್ಗೆ ಮಾಲೀಕರೇ ಜವಾಬ್ದಾರಿ ವಹಿಸಬೇಕು. ಒಂದು ವೇಳೆ ನಿಯಮ ಉಲ್ಲಂಘನೆಯಾದಲ್ಲಿ ಮಾಲೀಕರಿಗೆ ದಂಡ ಬೀಳಲಿದೆ.

    ಆಯೋಜಕರೇ ಪಾವತಿಸಬೇಕು: ಸಾರ್ವಜನಿಕ ಸಭೆ- ಸಮಾರಂಭ, ರ‌್ಯಾಲಿ, ಕೂಟಗಳು ಇತ್ಯಾದಿ ಕಾರ್ಯಕ್ರಮ ಆಯೋಜಕರಿಗೆ 50 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ಜತೆಗೆ, ಪಾಲಿಕೆಯಿಂದ ಸೂಚಿಸಿದ ಸ್ಥಳಗಳನ್ನು ಹೊರತುಪಡಿಸಿ ಉಳಿದ ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಕೋವಿಡ್ ನಿಯಮ ಉಲ್ಲಂಘನೆಗೆ 10 ಸಾವಿರ ರೂ.ಗಿಂತ ಅಧಿಕ ದಂಡ ವಿಧಿಸಲಾಗುತ್ತದೆ. ಎಲ್ಲ ಸ್ಥಳಗಳ ತಪಾಸಣೆ ಮತ್ತು ದಂಡ ವಿಧಿಸುವ ಕಾರ್ಯವನ್ನು ಪಾಲಿಕೆ ಆರೋಗ್ಯ ನಿರೀಕ್ಷಕರು ಹಾಗೂ ವಾರ್ಡ್ ಮಾರ್ಷಲ್‌ಗಳು ಮಾಡಲಿದ್ದಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

    ದಂಡದ ಪ್ರಮಾಣ
    5 ಸಾವಿರ ರೂ. ದಂಡ: ಬೀದಿಬದಿ ವ್ಯಾಪಾರಿಗಳು, ಸಣ್ಣ ಅಂಗಡಿ ಮುಂಗಟ್ಟುಗಳು, ಹೋಟೆಲ್‌ಗಳು, ದರ್ಶಿನಿಗಳು, ಆಹಾರ ಮಳಿಗೆಗಳು.
    25 ಸಾವಿರ ರೂ.: ಎಸಿ ರಹಿತ ರೆಸ್ಟೋರೆಂಟ್‌ಗಳು, ಪಾರ್ಟಿ ಹಾಲ್‌ಗಳು, ಡಿಪಾರ್ಟ್‌ಮೆಂಟಲ್ ಸ್ಟೋರ್, ಖಾಸಗಿ ಬಸ್ ನಿಲ್ದಾಣಗಳಿಗೆ ದಂಡದ ಮೊತ್ತ.
    50 ಸಾವಿರ ರೂ.: ಎಸಿ ವ್ಯವಸ್ಥೆಯ ರೆಸ್ಟೋರೆಂಟ್‌ಗಳು, ಪಾರ್ಟಿ ಹಾಲ್‌ಗಳು, ಅಂಗಡಿ ಮಳಿಗೆಗಳಿಗೆ ಜುಲ್ಮಾನೆ. ಡಿಪಾರ್ಟ್‌ಮೆಂಟಲ್ ಸ್ಟೋರ್‌ಗಳು, ಸಿನಿಮಾ ಹಾಲ್, ಮಲ್ಟಿಫ್ಲೆಕ್ಸ್, ಶಾಪಿಂಗ್ ಮಾಲ್‌ಗಳು
    1 ಲಕ್ಷ ರೂ. ದಂಡ: 3 ಸ್ಟಾರ್ ಮತ್ತು ಅದಕ್ಕೂ ಹೆಚ್ಚಿನ ತಾರಾಂಕಿತ ಹೋಟೆಲ್‌ಗಳು, 500ಕ್ಕಿಂತ ಅಧಿಕ ಆಸನ ಹೊಂದಿದ ಕಲ್ಯಾಣ ಮಂಟಪಗಳು, ಸಮುದಾಯ ಭವನಗಳು.

    ಕರೊನಾ ಲಸಿಕೆ ಇವರಿಗೇ ಮೊದಲು ಬೇಕಂತೆ; ಪ್ರಧಾನಿಗೆ ಪತ್ರ ಬರೆದು ಮನವಿ

    ಕುಂಭ ಮೇಳದಲ್ಲಿ ಟೆಂಟ್​ ಹಾಕಿ ಟೋಪಿ ಹಾಕಿದ್ರು; ಕೋಟಿ ಲೂಟಿ ಮಾಡಿ ಸಿಕ್ಕಿಬಿದ್ರು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts