More

    ಬೆಡ್ ಇಲ್ಲ, ಫುಡ್​ ಇಲ್ಲ- ಅವ್ಯವಸ್ಥೆ ಕೇಳೋರಿಲ್ಲ ಅವಸ್ಥೆ

    ಪಂಕಜ ಕೆ.ಎಂ/ಸತೀಶ್ ಕೆ. ಬಳ್ಳಾರಿ
    ಬೆಂಗಳೂರು: ಕರೊನಾ ನಿರ್ವಹಣೆಯಲ್ಲಿ ಇಡೀ ದೇಶಕ್ಕೆ ಮಾದರಿ ನಗರ ಎಂದು ಗುರುತಿಸಿಕೊಂಡಿರುವ ರಾಜಧಾನಿ ಬೆಂಗಳೂರು ಒಳಗೊಂಡು ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆಯೇ ವ್ಯವಸ್ಥೆಯ ಹುಳುಕುಗಳು ಒಂದೊಂದಾಗಿ ಹೊರಬರಲಾರಂಭಿಸಿವೆ. ಒಂದೆಡೆ ಸರ್ಕಾರ ಸೋಂಕಿತರ ಚಿಕಿತ್ಸೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳುತ್ತಿದ್ದರೆ ಮತ್ತೊಂದೆಡೆ ಕೋವಿಡ್ ಕೇರ್ ಸೆಂಟರ್​ಗಳು, ಕ್ವಾರಂಟೈನ್ ಕೇಂದ್ರಗಳಲ್ಲಿನ ಮೂಲಸೌಕರ್ಯಗಳ ಕೊರತೆ ಸೋಂಕಿತರಿಗೆ ನರಕದ ಅನುಭವ ಮಾಡಿಸುತ್ತಿದೆ. ಹೊಸ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಬೆಡ್ ಸಿಗದೆ ರಸ್ತೆಯಲ್ಲೇ ಒದ್ದಾಡಿ ಪ್ರಾಣಬಿಟ್ಟವರೂ ಇದ್ದಾರೆ. 24 ಗಂಟೆಗಳ ಅವಧಿಯಲ್ಲಿ ಬೆಂಗಳೂರಿನಲ್ಲೇ ಮೂವರು ಸಾವನ್ನಪ್ಪಿದ್ದು ಚಿಕಿತ್ಸಾ ಅವ್ಯವಸ್ಥೆಗೆ ಸಾಕ್ಷಿ.

    ತಾಳ-ಮೇಳವಿಲ್ಲ: ರಾಜ್ಯದಲ್ಲಿ ಕರೊನಾ ಚಿಕಿತ್ಸೆಗೆ 23,896 ಹಾಸಿಗೆ ಮೀಸಲಿಟ್ಟಿದ್ದು, ಇದರಲ್ಲಿ ಶೇ.16.3 ಮಾತ್ರ ಭರ್ತಿಯಾಗಿವೆ. ಬೆಂಗಳೂರಲ್ಲಿ 3,879 ಹಾಸಿಗೆಗಳನ್ನು ಮೀಸಲಿಟ್ಟಿದ್ದು, ಇದರಲ್ಲಿ ಶೇ.27 ಮಾತ್ರ ತುಂಬಿದ್ದು, ಶೇ.73 ಖಾಲಿ ಉಳಿದಿರುವುದಾಗಿ ಕೋವಿಡ್ ವಾರ್ ರೂಂ ಬಿಡುಗಡೆ ಮಾಡಿರುವ ವರದಿ ಹೇಳಿದೆ. ಆದರೆ ಹೆಲ್ತ್ ಬುಲೆಟಿನ್ ಪ್ರಕಾರ ಬೆಂಗಳೂರಿನಲ್ಲೇ 3,916 ಸಕ್ರಿಯ ಕೇಸ್​ಗಳಿದ್ದು, ಇನ್ನೂ 37 ಹಾಸಿಗೆಗಳ ಕೊರತೆ ಇದೆ. ಬೆಡ್​ಗಳಿಲ್ಲದೆ ಪಾಸಿಟಿವ್ ವರದಿ ಬಂದ ನಂತರ 2-3ನೇ ದಿನಕ್ಕೆ ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿದೆ. ಕೆಲವೆಡೆ ಆಸ್ಪತ್ರೆಗಳಲ್ಲಿ ಹಾಸಿಗೆಗಳಿದ್ದರೂ ಅಧಿಕಾರಿಗಳ ಸಮನ್ವಯದ ಕೊರತೆಯಿಂದಾಗಿ ರೋಗಿಗಳಿಗೆ ಸಿಗುತ್ತಿಲ್ಲ.

    ಇದನ್ನೂ ಓದಿ: ಮಾಧ್ಯಮಗಳಿಗೆ ಕಿವಿ ಮಾತು ಹೇಳಿದ್ರು ಸಿಎಂ ಬಿಎಸ್​ವೈ: ಏನದು?!

    ಸಮಸ್ಯೆಗಳೇನೇನು? 

    • ಕ್ವಾರಂಟೈನ್ ಕೇಂದ್ರಗಳಲ್ಲಿ ಆಹಾರ ಸಮಸ್ಯೆ, ಮೂಲಸೌಕರ್ಯ ಕೊರತೆ,
    • ಖಾಸಗಿ ಲ್ಯಾಬ್​ನಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬೇಕಾದ ಸ್ಥಿತಿ
    • ಸೋಂಕಿತರು ಕರೆ ಮಾಡಿದರೂ 2-3 ದಿನ ಆಂಬುಲೆನ್ಸ್​ಗಳೇ ಸಿಗುತ್ತಿಲ್ಲ,
    • ಸೋಂಕಿತರನ್ನು ಯಾವ ಆಸ್ಪತ್ರೆಗೆ ಕರೆದೊಯ್ಯಬೇಕೆಂಬ ಕನಿಷ್ಠ ಮಾಹಿತಿಯೂ ಆಂಬುಲೆನ್ಸ್​ಗಳಿಗೆ ಇಲ್ಲ
    • ಆಸ್ಪತ್ರೆ ಬೆಡ್ ಸಿಗದೆ ಆಂಬುಲೆನ್ಸ್​ನಲ್ಲಿ ಸುತ್ತಾಡು ವಾಗಲೇ ಸೋಂಕಿತರು ಪ್ರಾಣಬಿಡುವ ಸ್ಥಿತಿ
    • ಸೋಂಕಿತರು ಆಸ್ಪತ್ರೆ ಸೇರುವುದು ವಿಳಂಬವಾಗುವುದರಿಂದ ಇನ್ನಷ್ಟು ಮಂದಿಗೆ ಸೋಂಕು ಹರಡುವ ಭೀತಿ
    • ಸೋಂಕಿತರ ಪ್ರಾಥಮಿಕ-ದ್ವಿತೀಯ ಸಂರ್ಪತರನ್ನು ಕ್ವಾರಂಟೈನ್​ಗೆ ಕಳುಹಿಸುವಲ್ಲಿ ವಿಳಂಬ

    ಚಿಕಿತ್ಸೆ ಸಿಗದೆ ಪ್ರಾಣ ಬಿಟ್ಟವರು

    ರಸ್ತೆಯಲ್ಲೇ ಶವವಾದ: ಬೆಂಗಳೂರಲ್ಲಿ ಶುಕ್ರ ವಾರ 52 ವರ್ಷದ ಸೋಂಕಿತ ಚಿಕಿತ್ಸೆ ಸಿಗದೆ ಕಲಾಸಿಪಾಳ್ಯ ಠಾಣೆಯ ಮುಂದೆ ಅನಾಥವಾಗಿ ಪ್ರಾಣಬಿಟ್ಟಿದ್ದಾರೆ. ಸೋಂಕಿತ ರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ವ್ಯಕ್ತಿಯನ್ನು ಕ್ವಾರಂಟೈನ್​ನಲ್ಲಿರಿಸಲಾಗಿತ್ತು. 3 ದಿನದ ಹಿಂದೆ ಆತನಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಗುರುವಾರ ಕ್ವಾರಂಟೈನ್ ಕೇಂದ್ರದಿಂದ ವಿಕ್ಟೋರಿಯಾ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ, ದಾಖಲಿಸಿಕೊಳ್ಳದೆ ವಾಪಸ್ ಕಳುಹಿಸಿದ್ದರು. ಆಗ ಮರಳಿ ಕ್ವಾರಂಟೈನ್​ಗೆ ಹೋದರೂ ಸೋಂಕಿರುವ ಕಾರಣಕ್ಕೆ ಸೇರಿಸಿಕೊಂಡಿರಲಿಲ್ಲ.

    ಇದನ್ನೂ ಓದಿ: 21 ಪೊಲೀಸರಿಗೆ ಸೋಂಕು- ಈವರೆಗೆ 168ಕ್ಕೂ ಮಂದಿಗೆ ಕೋವಿಡ್ | ಸಿಐಡಿ ಕಚೇರಿ ಸೀಲ್​ಡೌನ್

    ಆಂಬುಲೆನ್ಸ್​ನಲ್ಲೇ ಕೊನೆಯುಸಿರು: ಮಾಗಡಿ ರಸ್ತೆಯ ಟೋಲ್​ಗೇಟ್ ಬಳಿಯ 53 ವರ್ಷದ ವ್ಯಕ್ತಿ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ಮಂಗಳವಾರ ರಾತ್ರಿ ಮೃತಪಟ್ಟಿದ್ದಾರೆ. ಗುರುವಾರ ರಾತ್ರಿ ಕೋವಿಡ್ ಪರೀಕ್ಷೆಗೆ ಒಳಪಟ್ಟಿದ್ದರು. ಸೋಂಕು ತಗುಲಿರುವ ವಿಷಯವನ್ನು ಭಾನುವಾರ ಹೇಳಿದ ಬಿಬಿಎಂಪಿ ಅಧಿಕಾರಿಗಳು, ಮನೆಗೇ ಬಂದು ಕರೆದೊಯ್ಯುವುದಾಗಿ ತಿಳಿಸಿದ್ದರು. ಆದರೆ ಸೋಮವಾರ ಉಸಿರಾಟದ ಸಮಸ್ಯೆ ತೀವ್ರಗೊಂಡಿದ್ದರಿಂದ ಮನೆಯವರು ಕರೆ ಮಾಡಿದರೆ ಆ ವಾರ್ಡ್ ನಮ್ಮ ವ್ಯಾಪ್ತಿಗೆ ಬರುವುದಿಲ್ಲ . ಹೀಗಾಗಿ ನಾವು ಬರಲಾಗುವುದಿಲ್ಲ ಎಂದಿದ್ದು. ಆಪ್ತಮಿತ್ರ ಸಹಾಯವಾಣಿ ಹಾಗೂ ಪಾಲಿಕೆಯ ಅಧಿಕಾರಿಗಳೂ ನೆರವಿಗೆ ಬಂದಿಲ್ಲ. ‘108’ಕ್ಕೆ ಕಾಲ್ ಮಾಡಿದರೆ ಅರ್ಧಗಂಟೆಯಲ್ಲಿ ಬರುತ್ತೇವೆ ಎಂದವರು ಬಂದಿಲ್ಲ. ಕೊನೆಗೆ ಖಾಸಗಿ ಆಂಬುಲೆನ್ಸ್​ನಲ್ಲಿ ಆಸ್ಪತ್ರೆಗೆ ಹೊರಟಾಗ ದಾರಿಮಧ್ಯೆ ಕೊನೆಯುಸಿರೆಳೆದಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಗೆ ಮೃತದೇಹ ಕೊಂಡೊಯ್ದರೂ ಈವರೆಗೆ ಯಾರೂ ಕೇಳುವವರೇ ಇಲ್ಲ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ.

    ಆಗಸ್ಟ್ ಅಂತ್ಯಕ್ಕೆ ಲಕ್ಷ ಕೇಸ್ : ರೋಗಲಕ್ಷಣ ಇಲ್ಲದಿದ್ರೆ ಮನೇಲೇ ಚಿಕಿತ್ಸೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts