More

    ಉತ್ತರ ಕರ್ನಾಟಕದ ಐದು ಜಿಲ್ಲೆಗಳಲ್ಲಿ ಇಂದು ಶೂನ್ಯ ಕರೊನಾ ಪ್ರಕರಣ!

    ಬೆಂಗಳೂರು: ಕರ್ನಾಟಕದಲ್ಲಿ ಕರೊನಾ ಅಬ್ಬರ ಕಡಿಮೆಯಾಗಿದೆ. ಅದರಲ್ಲೂ ಉತ್ತರ ಕರ್ನಾಟಕದಲ್ಲಿ ಸೋಂಕಿನ ಪ್ರಮಾಣ ಭಾರೀ ಇಳಿಕೆ ಕಂಡಿದೆ. ಇಂದು ರಾಜ್ಯದ ಐದು ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣ ವರದಿಯಾಗಿದೆ.

    ರಾಜ್ಯದಲ್ಲಿ ಸೋಮವಾರ 1,606 ಜನರಲ್ಲಿ ಕರೊನಾ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ಒಟ್ಟಾರೆ ಸೋಂಕಿತರ ಸಂಖ್ಯೆ 28,96,163ಕ್ಕೆ ಏರಿಕೆಯಾಗಿದೆ. 31 ಮಂದಿ ಸಾವನ್ನಪ್ಪಿದ್ದು, ಒಟ್ಟಾರೆ ಮೃತರ ಸಂಖ್ಯೆ 36,405ಕ್ಕೆ ಹೆಚ್ಚಳವಾಗಿದೆ. ಒಂದೇ ದಿನದಲ್ಲಿ 1937 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಗುಣಮುಖರ ಸಂಖ್ಯೆ 28,36,678ಕ್ಕೆ ಏರಿದೆ. ಸದ್ಯ 23,057 ಸಕ್ರಿಯ ಪ್ರಕರಣ ಬಾಕಿಯುಳಿದಿದೆ. ಇಂದಿನ ಕರೊನಾ ಪಾಸಿಟಿವಿಟಿ ಪ್ರಮಾಣ ಶೇ. 1.40ರಷ್ಟಿದ್ದರೆ, ಮರಣ ಪ್ರಮಾಣ ಶೇ. 1.93ರಷ್ಟಿದೆ.

    ಉತ್ತರ ಕರ್ನಾಟಕದ ಬಾಗಲಕೋಟೆ, ಬೀದರ್, ಕಲಬುರಗಿ, ಕೊಪ್ಪಳ ಮತ್ತು ಬಳ್ಳಾರಿಯಲ್ಲಿಂದು ಒಂದೇ ಒಂದು ಪ್ರಕರಣವೂ ಕಾಣಿಸಿಕೊಂಡಿಲ್ಲ. ಎಂದಿನಂತೆ ಬೆಂಗಳೂರು ನಗರ ಜಿಲ್ಲೆಯಲ್ಲಿ ಅತಿ ಹೆಚ್ಚು (467) ಪ್ರಕರಣಗಳು ಕಾಣಿಸಿಕೊಂಡಿವೆ. ಜಿಲ್ಲೆಯ ಒಟ್ಟಾರೆ ಪ್ರಕರಣಗಳ ಸಂಖ್ಯೆ 12,25,227ಕ್ಕೆ ಏರಿಕೆಯಾಗಿದ್ದು, ಅದರಲ್ಲಿ 8,182 ಸೋಂಕಿತರು ಚೇತರಿಕೆ ಹಂತದಲ್ಲಿದ್ದಾರೆ. ಉಳಿದಂತೆ, ದಕ್ಷಿಣ ಕನ್ನಡದಲ್ಲಿ 357, ಮೈಸೂರಿನಲ್ಲಿ 162 ಪ್ರಕರಣ ದೃಢವಾಗಿದೆ. ಚಿಕ್ಕಬಳ್ಳಾಪುರ, ಧಾರವಾಡ, ಹಾವೇರಿ, ರಾಯಚೂರು, ರಾಮನಗರ, ವಿಜಯಪುರ ಮತ್ತು ಯಾದಗಿರಿಯಲ್ಲಿ ಏಕದಿನ ಏರಿಕೆ ಸಂಖ್ಯೆ ಒಂದಂಕಿಯಲ್ಲಿದೆ. ಉಳಿದ ಜಿಲ್ಲೆಗಳಲ್ಲಿ ಸೋಂಕಿನ ಏರಿಕೆ ಸಂಖ್ಯೆ ಎರಡಂಕಿಯಲ್ಲಿದೆ ಎಂದು ರಾಜ್ಯದ ವೈದ್ಯಕೀಯ ಇಲಾಖೆ ವರದಿಯಲ್ಲಿ ತಿಳಿಸಿದೆ. (ಏಜೆನ್ಸೀಸ್)

    VIDEO| ಯುವತಿಯ ರೋಲರ್ ಕೋಸ್ಟರ್ ಖುಷಿಯನ್ನ ಹಾಳು ಮಾಡ್ತು ಆ ಒಂದು ಪಕ್ಷಿ!

    VIDEO| ಬೆಳ್ಳಿ ಗೆದ್ದ ಮೀರಾಬಾಯಿ ಭಾರತಕ್ಕೆ ವಾಪಸ್: ಏರ್​ಪೋರ್ಟ್​ನಲ್ಲಿ ಸಿಕ್ತು ಭರ್ಜರಿ ಸ್ವಾಗತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts