More

    ರಾಜ್ಯದಲ್ಲಿಂದು 1,653 ಕರೊನಾ ಕೇಸ್ ಪತ್ತೆ; ಈ ಎರಡು ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣ

    ಬೆಂಗಳೂರು: ರಾಜ್ಯದಲ್ಲಿ ಗುರುವಾರದಂದು 1,653 ಜನರಲ್ಲಿ ಕರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ಒಟ್ಟಾರೆ ಸೋಂಕಿತರ ಸಂಖ್ಯೆ 28,89,994ಕ್ಕೆ ಏರಿಕೆಯಾಗಿದೆ. 24 ಗಂಟೆಗಳಲ್ಲಿ 31 ಸೋಂಕಿತರು ಸಾವನ್ನಪ್ಪಿದ್ದು, ಒಟ್ಟಾರೆ ಮೃತರ ಸಂಖ್ಯೆ 36,293ಕ್ಕೆ ಏರಿದೆ.

    ಇಂದು 2,572 ಸೋಂಕಿತರು ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೆ 28,28,983 ಗುಣಮುಖ ಪ್ರಕರಣ ವರದಿಯಾಗಿದ್ದು, ಸದ್ಯ 24,695 ಸಕ್ರಿಯ ಪ್ರಕರಣಗಳು ಬಾಕಿಯುಳಿದಿವೆ. ಇಂದಿನ ಕರೊನಾ ಪಾಸಿಟಿವಿಟಿ ಪ್ರಮಾಣ ಶೇ. 1.17ರಷ್ಟಿದ್ದರೆ ಮರಣ ಪ್ರಮಾಣ ಶೇ. 1.87ರಷ್ಟಿದೆ.

    ಬೆಂಗಳೂರಿನಲ್ಲಿಂದು 418 ಪ್ರಕರಣಗಳು ದೃಢವಾಗಿವೆ. ಜಿಲ್ಲೆಯ ಒಟ್ಟಾರೆ ಪ್ರಕರಣಗಳ ಸಂಖ್ಯೆ 12,23,644ಕ್ಕೆ ಏರಿದೆ. ಅದರಲ್ಲಿ ಇಂದು 1,162 ಸೇರಿ ಒಟ್ಟು 11,99,078 ಸೋಂಕಿತರು ಗುಣಮುಖರಾಗಿದ್ದರೆ 8,748 ಸಕ್ರಿಯ ಪ್ರಕರಣಗಳು ಬಾಕಿಯುಳಿದಿವೆ. ದಕ್ಷಿಣ ಕನ್ನಡದಲ್ಲಿ 229, ಮೈಸೂರು 134, ಕೊಡಗು 107 ಮತ್ತು ತುಮಕೂರಿನಲ್ಲಿ 104 ಪ್ರಕರಣ ಕಾಣಿಸಿಕೊಂಡಿದೆ. ಬಾಗಲಕೋಟೆ, ಬಳ್ಳಾರಿ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ರಾಮನಗರ ಮತ್ತು ವಿಜಯಪುರದಲ್ಲಿ ಏಕದಿನ ಏರಿಕೆ ಸಂಖ್ಯೆ ಒಂದಂಕಿಗೆ ಇಳಿದಿದೆ. ಬೀದರ್ ಮತ್ತು ಯಾದಗಿರಿಯಲ್ಲಿ ಇಂದು ಒಂದೂ ಪ್ರಕರಣ ದೃಢವಾಗಿಲ್ಲ. (ಏಜೆನ್ಸೀಸ್)

    ಚಿನ್ನಾಭರಣ ಪ್ರಿಯರಿಗೆ ಶುಭಸುದ್ದಿ: ಬಂಗಾರದ ಬೆಲೆಯಲ್ಲಿ ಇಳಿಕೆ

    ಇದ್ದಕ್ಕಿದ್ದಂತೆ ಬಿಸಿಯಾಯ್ತು ಬಾವಿ ನೀರು! ಅಚ್ಚರಿಗೊಂಡ ಗ್ರಾಮಸ್ಥರು

    ರಾಜ್ಯದಲ್ಲಿ ಮಳೆ ಮತ್ತಷ್ಟು ಬಿರುಸು, ನಾಳೆ ಕರಾವಳಿಯಲ್ಲಿ ರೆಡ್ ಅಲರ್ಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts