More

    ಇದ್ದಕ್ಕಿದ್ದಂತೆ ಬಿಸಿಯಾಯ್ತು ಬಾವಿ ನೀರು! ಅಚ್ಚರಿಗೊಂಡ ಗ್ರಾಮಸ್ಥರು

    ಮುಂಬೈ: ಪ್ರತಿನಿತ್ಯ ಬಳಕೆಯಾಗುತ್ತಿದ್ದ ಬಾವಿ ನೀರು ಇದ್ದಕ್ಕಿದ್ದಂತೆ ಬಿಸಿಯಾಗಿರುವ ಘಟನೆ ಮಧ್ಯಪ್ರದೇಶದ ಬುಲ್ಖಾನಾ ಜಿಲ್ಲೆಯಲ್ಲಿ ನಡೆದಿದೆ. ಈ ವಿಚಾರವಾಗಿ ಗ್ರಾಮಸ್ಥರು ಗಾಬರಿಗೊಂಡಿದ್ದು, ನೀರಿನ ಸ್ಯಾಂಪಲ್​ ಪರೀಕ್ಷೆಗೆಂದು ಲ್ಯಾಬೋರೇಟರಿಗೆ ಕಳಿಸಲಾಗಿದೆ.

    ಮಹಾರಾಷ್ಟ್ರದ ಬುಲ್ಖಾನಾ ಜಿಲ್ಲೆಯ ಸಂಗ್ರಾಂಪುರದ ಅಕೋಲಿ ಗ್ರಾಮದಲ್ಲಿ ಇಂತಹ ವಿಚಿತ್ರ ಘಟನೆ ನಡೆದಿದೆ. ಭನುದಾಸ್ ಸಲುಂಕಿ ಎನ್ನುವವರು ಸುಮಾರು 14-15 ವರ್ಷಗಳ ಹಿಂದೆ 40 ಅಡಿ ಆಳದ ಬಾವಿ ತೆಗೆಸಿದ್ದರು. ಅದರಲ್ಲಿ ಸಿಗುತ್ತಿದ್ದ ನೀರನ್ನೇ ಪ್ರತಿದಿನ ಬಳಕೆ ಮಾಡಲಾಗುತ್ತಿತ್ತು. ಆದರೆ ಜುಲೈ 14ರಂದು ಬಾವಿಯಿಂದ ನೀರು ಸೇದಿದಾಗ ಬಿಸಿ ನೀರು ಬಂದಿದೆ.

    ಆಶ್ಚರ್ಯ ಪಟ್ಟ ಭನುದಾಸ್ ಮತ್ತೊಂದು ಕೊಡ ನೀರು ಸೇದಿದ್ದಾನೆ. ಆಗಲೂ ಬಿಸಿ ನೀರೇ ಬಂದಿದೆ. ಆತ ಈ ವಿಚಾರವನ್ನು ಗ್ರಾಮಸ್ಥರಿಗೆ ತಿಳಿಸಿದ್ದಾನೆ. ತಹಶೀಲ್ದಾರರಿಗೂ ವಿಚಾರ ಮುಟ್ಟಿದ್ದು ಅವರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಬಾವಿಯಿಂದ ಎಷ್ಟು ಸೇದಿದರೂ ಬಿಸಿ ನೀರೇ ಬಂದಿದೆ. ಆ ಬಾವಿಯಿಂದ ಸುಮಾರು 25 ಅಡಿ ದೂರದಲ್ಲಿದ್ದ ಇನ್ನೊಂದು ಬಾವಿ ಪರಿಶೀಲಿಸಿದಾಗ ಬಿಸಿ ನೀರು ಬರದೆ ಮಾಮೂಲಿಯಾಗಿಯೇ ಬಂದಿದೆ. ಬಿಸಿ ನೀರು ಬರುತ್ತಿರುವ ಬಾವಿಯ ಹಿಂದಿನ ರಹಸ್ಯ ತಿಳಿದುಕೊಳ್ಳುವ ಸಲುವಾಗಿ ನೀರನ್ನು ಲ್ಯಾಬೋರೇಟರಿಗೆ ಕಳುಹಿಸಿಕೊಡಲಾಗಿದೆ. (ಏಜೆನ್ಸೀಸ್)

    ರಾಜ್ಯದಲ್ಲಿ ಮಳೆ ಮತ್ತಷ್ಟು ಬಿರುಸು, ನಾಳೆ ಕರಾವಳಿಯಲ್ಲಿ ರೆಡ್ ಅಲರ್ಟ್

    ಸರ್ಕಾರಿ ಅಧಿಕಾರಿಯ ಮನೆಯಲ್ಲಿ ಚಿನ್ನದ ಟಾಯ್ಲೆಟ್!

    50 ಡಿಗ್ರಿ ಸೆ. ದಾಟಿದ ತಾಪಮಾನ; ಮಳೆಗಾಗಿ ಮೋಡ ಬಿತ್ತನೆ ಮೊರೆ ಹೋದ ದುಬೈ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts