More

    ರಾಜಧಾನಿಯಲ್ಲಿ ದ್ವಿಶತಕ ದಾಟಿದ ಕರೊನಾ ಸೋಂಕಿತರ ಸಂಖ್ಯೆ

    ಬೆಂಗಳೂರು: ರಾಜಧಾನಿಯಲ್ಲಿ ಶುಕ್ರವಾರ 13 ಜನರಿಗೆ ಸೋಂಕು ಪತ್ತೆಯಾಗಿದ್ದು, ಒಟ್ಟು ಕರೊನಾಪೀಡಿತರ ಸಂಖ್ಯೆ ದ್ವಿಶತಕದ ಗಡಿ ದಾಟಿ 207ಕ್ಕೆ ತಲುಪಿದೆ! ಮಾ.9ರಂದು ವಿದೇಶದಿಂದ ಬೆಂಗಳೂರಿಗೆ ಬಂದ ವ್ಯಕ್ತಿಯೊಬ್ಬರಲ್ಲಿ ಸೋಂಕು ಕಾಣಿಸಿಕೊಳ್ಳುವ ಮೂಲಕ ರಾಜ್ಯದಲ್ಲಿ ಕರೊನಾ ತನ್ನ ಆಟಾಟೋಪ ಆರಂಭಿಸಿತ್ತು. ಆಗಿನಿಂದ ಶುಕ್ರವಾರದ (ಮೇ 15) ಅಂತ್ಯಕ್ಕೆ 207 ಜನರಿಗೆ ಸೋಂಕು ಬಾಧಿಸಿದೆ. ಇವರಲ್ಲಿ ಪ್ರಸ್ತುತ 101 ಜನರು ಚಿಕಿತ್ಸೆ ಪಡೆಯುತ್ತಿದ್ದು, 98 ಜನರು ಗುಣಮುಖರಾಗಿದ್ದಾರೆ, 8 ಜನರು ಮೃತಪಟ್ಟಿದ್ದಾರೆ. ಈವರೆಗೆ ಪಾಲಿಕೆಯ 51 ವಾರ್ಡ್ ಗಳಲ್ಲಿ ಮಾತ್ರ ಸೋಂಕಿತರು ಕಾಣಿಸಿಕೊಂಡಿದ್ದು, 147 ವಾರ್ಡ್​ಗಳು ಸೋಂಕುಮುಕ್ತವಾಗಿವೆ.

    ಇದನ್ನೂ ಓದಿ: ಅಪ್ಪನ ಬೆನ್ನಿಗೆ ಚೂರಿ ಇಟ್ಟ ಆ ಹುಡುಗ, “ಬೈಕ್ ಓಡಿಸು” ಅಂದ; ಮುಂದೇನಾಯಿತು..

    ಒಬ್ಬನಿಂದ 11 ಜನರಿಗೆ: ಶಿವಾಜಿನಗರ ಚಾಂದಿನಿ ಚೌಕ್​ನಲ್ಲಿರುವ ರಿಜೆಂಟಾ ಹೋಟೆಲ್​ನಲ್ಲಿ ವಾರ್ಡ್ ಬಾಯ್ ಆಗಿ ಕೆಲಸ ಮಾಡಿಕೊಂಡಿದ್ದ ವ್ಯಕ್ತಿಗೆ (ರೋಗಿ- 653) ಮೇ 5ರಂದು ಸೋಂಕು ದೃಢಪಟ್ಟಿತ್ತು. ಆತನ ಸಂಪರ್ಕದಲ್ಲಿದ್ದ ಒಟ್ಟು 42 ಜನರನ್ನು ಬಿಬಿಎಂಪಿ ಕ್ವಾರಂಟೈನ್ ಮಾಡಿತ್ತು. ಅವರಲ್ಲಿ ಮೊದಲ ಬಾರಿ 22 ಜನರನ್ನು ಪರೀಕ್ಷೆಗೊಳಪಡಿಸಿದಾಗ 11 ಮಂದಿಗೆ ಸೋಂಕು ಇರುವುದು ದೃಢಪಟ್ಟಿದೆ. ಉಳಿದ 20 ಜನರ ಪರೀಕ್ಷಾ ವರದಿ ಬರಬೇಕಿದೆ ಎಂದು ಬಿಬಿಎಂಪಿ ಆರೋಗ್ಯಾಧಿಕಾರಿ ಬಿ.ಕೆ. ವಿಜಯೇಂದ್ರ ತಿಳಿಸಿದ್ದಾರೆ.

    ಇದನ್ನೂ ಓದಿ: 1.5 ಲಕ್ಷ ಟಿನ್​ ಕೋಕ್ ಕುಡಿದ ಮಹಿಳೆಯ ವಯಸ್ಸು 74! 

    6 ವರ್ಷದ ಮಗುವಿಗೆ ಕರೊನಾ: ಮಂಗಮ್ಮನಪಾಳ್ಯ ವಾರ್ಡ್​ನಲ್ಲಿ ಸೋಂಕಿಗೆ ಒಳಗಾಗಿದ್ದ ಆಟೋ ಚಾಲಕನ (ಪಿ-911) ಪ್ರಾಥಮಿಕ ಸಂಪರ್ಕದಲ್ಲಿದ್ದ 21 ಮತ್ತು ದ್ವಿತೀಯ ಸಂಪರ್ಕದಲ್ಲಿದ್ದ 14 ಜನರನ್ನು ಕ್ವಾರಂಟೈನ್ ಮಾಡಲಾಗಿತ್ತು. ಪ್ರಾಥಮಿಕ ಸಂಪರ್ಕ ಹೊಂದಿದವರನ್ನು ಪರೀಕ್ಷೆಗೆ ಒಳಪಡಿಸಿದ ವರದಿ ಬಂದಿದ್ದು, ಅದರಲ್ಲಿ ಆಟೋ ಚಾಲಕನ ಪತ್ನಿ ಹಾಗೂ 6 ವರ್ಷದ ಪುತ್ರಿ ಸೋಂಕಿರುವುದು ದೃಢಪಟ್ಟಿದೆ.

    ಇದನ್ನೂ ಓದಿ: ಒಂದು ಹಾವು ಕಚ್ಚಿದ್ರೂ ಬಚಾವ್​, ಆದ್ರೆ ಮತ್ತೊಂದು ಬೆಡ್​ರೂಮ್​ಗೇ ನುಗ್ಗಿತ್ತು..

    ಮನೆ ಮನೆಯಲ್ಲಿ ತಪಾಸಣೆಗೆ ವಿರೋಧ: ಪಾದರಾಯನಪುರದಲ್ಲಿ ಈವರೆಗೆ 54 ಸೋಂಕಿತರು ಕಂಡುಬಂದಿದ್ದು, ಸಮುದಾಯಕ್ಕೆ ಸೋಂಕು ಹರಡಿರುವ ಬಗ್ಗೆ ಬಿಬಿಎಂಪಿ ಆತಂಕಕ್ಕೆ ಒಳಗಾಗಿದೆ. ಹೀಗಾಗಿ ಪ್ರತಿ ಮನೆಯ ತಲಾ ಒಬ್ಬರನ್ನು ತಪಾಸಣೆಗೆ ಒಳಪಡಿಸುತ್ತಿದೆ. ಆದರೆ, ಜನರು ಚಿಕಿತ್ಸೆ ಹಾಗೂ ಕ್ವಾರಂಟೈನ್ ಭಯದಿಂದ ಪರೀಕ್ಷೆ ಮಾಡಿಸಿಕೊಳ್ಳಲು ಬರುತ್ತಿಲ್ಲ. ಅಲ್ಲದೆ, ಪಕ್ಕದ ರಾಯಪುರ ವಾರ್ಡ್​ನಲ್ಲಿ ಕರೊನಾ ಪರೀಕ್ಷಾ ಲ್ಯಾಬ್ ಆರಂಭಿಸಲು ವಿರೋಧ ವ್ಯಕ್ತವಾಗುತ್ತಿದೆ. ಪಾದರಾಯನಪುರದ ಯಾರೊಬ್ಬರನ್ನೂ ರಾಯಪುರ ವಾರ್ಡ್​ಗೆ ಕರೆತರಬಾರದು ಎಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.

    ಇದನ್ನೂ ಓದಿ: ದೇವಸ್ಥಾನದಲ್ಲಿ ಮದುವೆ ಮುಗಿಸಿ ಪೊಲೀಸ್ ಠಾಣೆ ಮೆಟ್ಟಿಲೇರಿತು ಆ ಜೋಡಿ!

    ಇಂದು 27 ಜನರ ಪರೀಕ್ಷಾ ವರದಿ: ಕೆಎಸ್​ಆರ್​ಟಿಸಿ ಬಸ್​ನಲ್ಲಿ ನಿರ್ವಿುಸಲಾದ ಸಂಚಾರಿ ಕ್ಲಿನಿಕ್​ನಲ್ಲಿ ಗುರುವಾರದಿಂದ ಪಾದರಾಯನಪುರದ ಮನೆಗಳ ತಲಾ ಒಬ್ಬರನ್ನು ಕರೆತಂದು ಸ್ವಾಬ್ ಸಂಗ್ರಹಿಸಿ, ಕರೊನಾ ಪರೀಕ್ಷೆಗೆ ಕಳುಹಿಸಲಾಗುತ್ತಿದೆ. ಗುರುವಾರ 11 ಹಾಗೂ ಶುಕ್ರವಾರ 16 ಜನರ ಸ್ವಾಬ್ ಸಂಗ್ರಹಿಸಲಾಗಿದೆ. ಒಟ್ಟು 27 ಜನರ ಪರೀಕ್ಷಾ ವರದಿ ಶನಿವಾರ (ಮೇ 16) ಬರಲಿದೆ.

    ಹೆಂಡ್ತಿ ಡೈವೋರ್ಸ್ ಕೇಳಿದ್ಳು.. ಗಂಡ ಆಕೆಯ ಮೂಗನ್ನೇ ಕತ್ತರಿಸಿದ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts