More

    ಕರೊನಾ ರೋಗಿಯ ಮೇಲೆ ಆಂಬುಲೆನ್ಸ್​ ಡ್ರೈವರ್​ ಅತ್ಯಾಚಾರ: ಕರಾಳ ಘಟನೆ ಬಗ್ಗೆ ಸಂತ್ರಸ್ತೆಯ ಮೊದಲ ಪ್ರತಿಕ್ರಿಯೆ!

    ತಿರುವನಂತಪುರಂ: ಕೇರಳದಲ್ಲಿ ಕರೊನಾ ರೋಗಿಯ ಮೇಲೆ ಆಂಬುಲೆನ್ಸ್​ ಡ್ರೈವರ್​ನಿಂದ ನಡೆದಿದ್ದ ಅತ್ಯಾಚಾರ ಎಲ್ಲರನ್ನೂ ಬೆಚ್ಚಿಬೀಳಿಸಿತ್ತು. ಪಟ್ಟಣಂತಿಟ್ಟದಲ್ಲಿರುವ ಕೋವಿಡ್​-19 ಕೇಂದ್ರಕ್ಕೆ 19 ವರ್ಷದ ಯುವತಿಯನ್ನು ಕರೆದೊಯ್ಯುವಾಗ ಚಾಲಕ ಆಕೆಯ ಮೇಲೆ ದೌರ್ಜನ್ಯ ಎಸಗಿದ್ದ.

    ಈ ಘಟನೆ ನಡೆದು ಹಲವು ದಿನಗಳೇ ಕಳೆದಿದ್ದು, ಇದೇ ಮೊದಲ ಬಾರಿಗೆ ಸಂತ್ರಸ್ತ ಯುವತಿ ಅಂದು ನಡೆದ ಕರಾಳ ಘಟನೆಯನ್ನು ಸಂದರ್ಶನವೊಂದರಲ್ಲಿ ವಿವರಿಸಿದ್ದಾಳೆ. ಯುವತಿ ದಲಿತ ಸಮುದಾಯಕ್ಕೆ ಸೇರಿದವಳಾಗಿದ್ದು, ಸಣ್ಣ ಮನೆಯೊಂದರಲ್ಲಿ ಅಜ್ಜ, ಒಡಹುಟ್ಟಿದವರು ಮತ್ತು ತಾಯಿಯೊಂದಿಗೆ ವಾಸವಿದ್ದಾಳೆ.

    ಘಟನೆಯ ಬಳಿಕ ಆತ್ಮಹತ್ಯೆ ಮಾಡಿಕೊಳ್ಳಲು ನಾನು ನಿರ್ಧರಿಸಿದೆ. ಆದರೆ, ಅದರಲ್ಲೂ ನಾನು ಸೋತೆ. ಬೇರೊಬ್ಬರು ನನ್ನನ್ನು ಪಂಜರದಲ್ಲಿ ಬಂಧಿಸಿದ್ದಾರೆ ಎಂಬ ಭಾವನೆ ವ್ಯಕ್ತವಾಗುತ್ತಿತ್ತು. ನನಗೆ ಹೊರಗಡೆ ಹೋಗಬೇಕೆನಿಸುತ್ತಿತ್ತು. ಅಂತಿಮವಾಗಿ ನಾನು ಎಲ್ಲದರಿಂದಲೂ ಹೊರಬಂದು ಸ್ವತಂತ್ರಳಾದೆ. ಸಾವಿನ ಬದಲಾಗಿ ಜೀವನವನ್ನು ಆಯ್ಕೆ ಮಾಡಿಕೊಂಡೆ. ನನ್ನದಲ್ಲದ ತಪ್ಪಿಗೆ ನಾನೇನು ಕಳೆದುಕೊಳ್ಳಬಾರದು ಅನಿಸಿತು. ಇಂದು ಸಾಧಿಸಬೇಕಾದ ಅನೇಕ ಗುರಿಗಳಿವೆ. ಸಂತೋಷವಾಗಿ ಜೀವನ ನಡೆಸಬೇಕು ಅಂದುಕೊಂಡಿದ್ದೇನೆ ಮತ್ತು ನನ್ನ ಮೇಲೆ ದಾಳಿ ಮಾಡಿದವನ ಶಿಕ್ಷೆಯನ್ನು ನೋಡಬೇಕಿದೆ. ನನಗಾದ ಕೆಟ್ಟ ಅನುಭವ ಯಾವ ಹುಡುಗಿಯರಿಗೂ ಆಗದಿರಲಿ ಎಂದು ಯುವತಿ ಹೇಳಿದಳು.

    ಇದನ್ನೂ ಓದಿ: ವಿಶ್ವದ ದುಬಾರಿ ಹ್ಯಾಂಡ್​ಬ್ಯಾಗ್​ ಕಣ್ತುಂಬಿಸಿಕೊಳ್ಳಿ​: ಬೆಲೆ ಎಷ್ಟಿರಬಹುದು ಎಂದು ಊಹಿಸಬಲ್ಲಿರಾ?

    ಯಾರಾದರೂ ಆಕಸ್ಮಿಕವಾಗಿ ನನ್ನ ದೇಹ ಸ್ಪರ್ಶಿಸಿದಾಗ ನಾನು ತಕ್ಷಣ ಪ್ರತಿಕ್ರಿಯಿಸುತ್ತಿದ್ದೆ. ಆದರೆ, ನನ್ನ ಮೇಲೆ ದಾಳಿ ಮಾಡಿದ ವ್ಯಕ್ತಿಯ ವಿರುದ್ಧ ಪ್ರತಿಕ್ರಿಯೆ ನೀಡುವಲ್ಲಿ ನಾನು ಸೋತಿದ್ದು ನನಗೆ ದುಃಖವಾಗಿತ್ತು. ಸದ್ಯ ಪ್ರಕರಣ ದಾಖಲಾಗಿದ್ದು, ಎಫ್​ಐಆರ್​ ಸಹ ಸಿದ್ಧವಾಗಿದೆ. ಆದರೂ ನನ್ನ ತಾಯಿ ನನ್ನ ಮೇಲಾದ ಕ್ರೌರ್ಯ ನೆನೆದು ಇಂದಿಗೂ ದುಃಖಿಸುತ್ತಾರೆ. ನನ್ನ ಮೇಲೆ ದಾಳಿ ಮಾಡಿದ ಮರು ದಿನ ನನ್ನ ಕುರಿತಾದ ಸಾಕಷ್ಟು ಸ್ಟೋರಿಗಳನ್ನು ಕೇಳಿದೆ. ತುಂಬಾ ನೋವಾಯಿತು ಎಂದಿರುವ ಸಂತ್ರಸ್ತ ಯುವತಿ ಸಾಕ್ಷ್ಯ ಸಂಗ್ರಹದ ಭಾಗವಾಗಿ ದೈಹಿಕ ಪರೀಕ್ಷೆಯು ಅತ್ಯಂತ ನೋವಿನ ಅನುಭವವಾಗಿತ್ತು ಎಂದಿದ್ದಾಳೆ.

    ನನ್ನ ಬಗ್ಗೆ ಯಾರೂ ಸಹ ಕನಿಕರ ತೋರಲಿಲ್ಲ. ಆಂಬುಲೆನ್ಸ್​ ಒಳಗೆ ನಡೆದ ಘಟನೆಯನ್ನು ಪದೇಪದೆ ಕೇಳುತ್ತಿದ್ದರು. ಆದರೆ, ಮಾನಸಿಕವಾಗಿ ಸಿದ್ಧಳಾಗಿಯೇ ದೈಹಿಕ ಪರೀಕ್ಷೆಯಲ್ಲಿ ಭಾಗಿಯಾಗಿದ್ದೆ. ಪ್ರಕರಣಕ್ಕೆ ಬಲವಾದ ಸಾಕ್ಷಿ ಯಾವುದು ಇಲ್ಲದಿದ್ದರಿಂದ ಅತಿಮವಾಗಿ ಗಟ್ಟಿ ಮನಸ್ಸಿನಿಂದ ದೈಹಿಕ ಪರೀಕ್ಷೆಯಲ್ಲಿ ಭಾಗಿಯಾದೆ. ಇದರ ನಡುವೆ ಅನೇಕರು ನನ್ನ ಕಡೆಯೇ ಅನುಮಾನದಿಂದ ನೋಡಲು ಆರಂಭಿಸಿದರು. ಆಂಬುಲೆನ್ಸ್​ ಡ್ರೈವರ್​ ಜತೆ ಅಕ್ರಮ ಸಂಬಂಧ ಇತ್ತು ಎಂದು ವದಂತಿ ಹರಡಿಸಿದರು ಎಂದು ಯುವತಿ ಭಾವುಕಳಾದಳು.

    ನನಗೆ ಯಾರು ಸಹ ಗೌರವ ಕೊಡುತ್ತಿರಲಿಲ್ಲ. ಎಲ್ಲರೂ ಟೀಕೆ ಮಾಡುತ್ತಿದ್ದರು. ಒಂದು ಕಡೆ ಕರೊನಾ ಸೋಂಕು ಮತ್ತೊಂದು ಕಡೆ ಡಯಾಬಿಟೀಸ್ ಹಾಗೂ ನನ್ನ ಮೇಲಿನ ದೌರ್ಜನ್ಯದಿಂದ ನಾನು ಮಾನಸಿಕವಾಗಿ ಒತ್ತಡಕ್ಕೆ ಒಳಗಾಗಿದ್ದೆ. ಯಾರೊಬ್ಬರು ನನ್ನ ಬೆಂಬಲಕ್ಕೆ ನಿಲ್ಲಲಿಲ್ಲ. ಎಲ್ಲ ಸಾಕ್ಷ್ಯಾಧಾರಗಳನ್ನು ನೀಡಿದ ಬಳಿಕ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದೆ. ಆಸ್ಪತ್ರೆಯ ಸೀಲಿಂಗ್​ ಫ್ಯಾನ್​ಗೆ ನೇಣು ಬಿಗಿದುಕೊಂಡಿದ್ದೆ. ಆದರೆ, ಯಾರೋ ನನ್ನ ನೋಡಿ ಜೀವ ಉಳಿಸಿದರು ಎಂದು ಅತ್ಯಾಚಾರ ಬಳಿಕ ಅನುಭವಿಸಿದ ನರಕಯಾತನೆಯನ್ನು ಸಂತ್ರಸ್ತ ಯುವತಿ ಬಹಿರಂಗಪಡಿಸಿದ್ದಾಳೆ. (ಏಜೆನ್ಸೀಸ್​)

    ಮಾರ್ಗಮಧ್ಯೆ ಕರೊನಾ ಸೋಂಕಿತೆಯನ್ನು ಅತ್ಯಾಚಾರ​ ಮಾಡಿದ ಆಂಬುಲೆನ್ಸ್​ ಚಾಲಕನಿಗೆ ಶಾಕ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts