More

    ಚಿಕ್ಕಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್​ಗೆ ಕರೆ

    ಬೆಂಗಳೂರು: ಕಳೆದ 2 ದಿನದಿಂದ ಚಿಕ್ಕಪೇಟೆ, ಕಾಟನ್​ಪೇಟೆ ಸುತ್ತ ಕರೊನಾ ಕೇಸ್​ಗಳ ಸಂಖ್ಯೆ ಹೆಚ್ಚಾಗುತ್ತಿದ್ದರಿಂದ ಚಿಕ್ಕಪೇಟೆ ಬಟ್ಟೆ ವ್ಯಾಪಾರಿಗಳ ಸಂಘ ಸೇರಿ ವಿವಿಧ ಸಂಘಟನೆಗಳು ಮಾರುಕಟ್ಟೆಯನ್ನು ಜೂ.29ರವರೆಗೆ ಸ್ವಯಂಪ್ರೇರಿತವಾಗಿ ಬಂದ್ ಮಾಡಲು ನಿರ್ಧರಿಸಿವೆ. ಸ್ವರ್ಣಕಾರ್ ಅಸೋಸಿಯೇಷನ್, ಸಿಲ್ಕ್ ಕ್ಲಾತ್ ಮರ್ಚೆಂಟ್ಸ್,ಸ್ವಿಚ್ ಗೇರ್ ಅಸೋಸಿಯೇಷನ್, ಹಾರ್ಡ್​ವೇರ್ ಅಸೋಸಿಯೇಷನ್ ಸೇರಿ ವಿವಿಧ ಸಂಘಟನೆಗಳು ಬಂದ್​ಗೆ ಸಾಥ್ ನೀಡಲಿವೆ.

    ಇತರ ಮಾರುಕಟ್ಟೆಗಳಿಗೂ ಗಂಡಾಂತರ: ಕರೊನಾ ಹರಡುವಿಕೆ ತಡೆಯುವುದಕ್ಕಾಗಿ ಸಾರ್ವಜನಿಕ ಸ್ಥಳಗಳು ಹಾಗೂ ಅಗತ್ಯ ವಸ್ತುಗಳ ಮಾರಾಟ ಕೇಂದ್ರಗಳು, ಮಾರುಕಟ್ಟೆಗಳಲ್ಲಿ ಸ್ವಚ್ಛತೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು ಎಂಬ ಆದೇಶವನ್ನು ಪಾಲಿಸದವರ ಸಂಖ್ಯೆ ಹೆಚ್ಚಿರುವುದರಿಂದ ಕರೊನಾ ಕೇಸ್​ಗಳು ಏರಿಕೆಯಾಗುತ್ತಿವೆ. ಸರ್ಕಾರದ ಮಾರ್ಗಸೂಚಿ ಪಾಲಿಸುತ್ತಿಲ್ಲ.

    ಇದನ್ನೂ ಓದಿ: ಮನೋಲ್ಲಾಸ: ದೇವಕೀ ಪರಮಾನಂದಂ…

    ಇದು ಹೀಗೆಯೇ ಮುಂದುವರಿದರೆ ದಾಸನಪುರ, ಯಶವಂತಪುರ, ಸಿಂಗೇನ ಅಗ್ರಹಾರ, ರಸೆಲ್ ಮಾರುಕಟ್ಟೆ ಸೇರಿ ಹಲವು ಮಾರುಕಟ್ಟೆಗಳಲ್ಲೂ ಸೋಂಕು ಹೆಚ್ಚಾಗುವುದರಲ್ಲಿ ಸಂಶಯವೇ ಇಲ್ಲ. ಬಾಕಿ ಮಾರುಕಟ್ಟೆಗಳಲ್ಲೂ ಕರೊನಾ ಹರಡುವ ಮುನ್ನ ಎಚ್ಚರಿಕೆ ವಹಿಸುವುದು ಸೂಕ್ತ ಎಂದು ವ್ಯಾಪಾರಸ್ಥರು ಅಭಿಪ್ರಾಯಪಟ್ಟಿದ್ದಾರೆ.

    ಒಂದೇ ದಿನ 16 ಪೊಲೀಸರಿಗೆ ಸೋಂಕು: ಸುರಕ್ಷತೆಗೆ ದಶ ಸೂತ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts