More

    ಮಾದರಿ ಗ್ರಾಮಕ್ಕಾಗಿ ಸ್ವಂತ ಜಾಗವನ್ನೇ ಕೊಟ್ಟ ದಂಪತಿ.. ಮುಖ್ಯಮಂತ್ರಿಯಿಂದಲೂ ಮೆಚ್ಚುಗೆ..

    ಯಾರ್ಯಾರದ್ದೋ ಜಾಗವನ್ನು ಕಬಳಿಸಿ ತಮ್ಮದಾಗಿಸಿಕೊಳ್ಳುವವರೇ ಹೆಚ್ಚಾಗುತ್ತಿರುವ ಈ ಸಮಾಜದಲ್ಲಿ ತಮ್ಮ ಸ್ವಂತ ಜಾಗವನ್ನೇ ಮಾದರಿ ಗ್ರಾಮಕ್ಕೆ ಉದಾರವಾಗಿ ನೀಡಿದ ದಂಪತಿ ಹಲವರ ಗಮನ ಸೆಳೆದಿದ್ದಾರೆ. ಮಾತ್ರವಲ್ಲ ಮುಖ್ಯಮಂತ್ರಿ ಅವರಿಂದಲೂ ಮೆಚ್ಚುಗೆ ಗಳಿಸಿಕೊಂಡಿದ್ದಾರೆ.

    ಜಿಬಿ ಟಾಟೊ ಮತ್ತು ಮಿನ್ಲಿ ಟಾಟೊ ಎಂಬ ಹೆಸರಿನ ಈ ದಂಪತಿ ತಮಗೆ ಸೇರಿದ್ದ 22 ಸಾವಿರ ಚದರ ಮೀಟರ್​ ಜಾಗವನ್ನು ಮಾದರಿ ಗ್ರಾಮಕ್ಕೆ ದೇಣಿಗೆಯಾಗಿ ನೀಡಿದ್ದಾರೆ. ಇನ್ನು ಆ ಮಾದರಿ ಗ್ರಾಮಕ್ಕೆ ಅವರ ಹೆಸರನ್ನೇ ಇಡಲಾಗುತ್ತಿದ್ದು, ಎಂಜಿ (Minli-Gibi) ವಿಲೇಜ್​ ಎಂದೇ ನಾಮಕರಣ ಮಾಡಲಾಗುತ್ತದೆಯಂತೆ.

    ಅರುಣಾಚಲ ಪ್ರದೇಶದ ವೆಸ್ಟ್​ ಸಿಯಾಂಗ್​ನ ಆಲೊ ಬಳಿಯ ಕೆರಂಗ್ ಹಾಗೂ ಕೀಕ್ ಗ್ರಾಮಗಳ ನಡುವಿನ ಬಾರ್ಡರ್ ರೋಡ್ಸ್​ ಟಾಸ್ಕ್​ ಫೋರ್ಸ್​ ಹತ್ತಿರ ಇರುವ ತಮ್ಮ ಜಾಗವನ್ನು ಈ ದಂಪತಿ ನೀಡಿದ್ದಾರೆ. ಇದನ್ನು ಮಾದರಿ ಗ್ರಾಮವಾಗಿಸುವಲ್ಲಿ ಮೂರು ವರ್ಷಗಳ ಕಾಲ ದಂಪತಿ ಶ್ರಮಿಸಿದ್ದರ ಪರಿಣಾಮವಾಗಿ ರಸ್ತೆ ಸಂಪರ್ಕ, ಮಕ್ಕಳ ಉದ್ಯಾನ, ಆಟದ ಮೈದಾನ, 9 ಸಮಾನ ತೂಗುವ ಮನೆಗಳು ನಿರ್ಮಾಣವಾಗಿವೆ. ಇನ್ನುಳಿದ ಎಲ್ಲ ವ್ಯವಸ್ಥೆಗಳಾದ ಬಳಿಕ ಮಾದರಿ ಗ್ರಾಮ ಉದ್ಘಾಟನೆ ಆಗಲಿದೆ. ಸದ್ಯ ಈ ದಂಪತಿಯ ಕೊಡುಗೆ ಅರುಣಾಚಲದ ಮುಖ್ಯಮಂತ್ರಿ ಪೇಮಾ ಖಂಡು ಅವರ ಗಮನಕ್ಕೂ ಬಂದಿದ್ದು, ಅವರು ಕೂಡ ಈ ದಂಪತಿಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts