More

    ಪುಟ್ಟ ಬಾಲಕನ ಚಿಕಿತ್ಸೆಗೆ ಒದಗಿಬಂತು 16 ಕೋಟಿ ರೂ.ಗಳ ಚುಚ್ಚುಮದ್ದು

    ಹೈದರಾಬಾದ್​ : ಅಪರೂಪದ ಬೆನ್ನುಮೂಳೆಯ ಸ್ನಾಯು ಕ್ಷೀಣತೆ(ಸ್ಪೈನಲ್ ಮಸಲ್ ಅಟ್ರೋಪಿ) ಎಂಬ ಖಾಯಿಲೆ ಹೊಂದಿದ ಹೈದರಾಬಾದ್‌ನ 3 ವರ್ಷದ ಬಾಲಕನ ಚಿಕಿತ್ಸೆಗಾಗಿ 16 ಕೋಟಿ ರೂ.ಗಳ ಚುಚ್ಚುಮದ್ದನ್ನು ನೀಡಲಾಗಿದೆ. ಅಯಾನ್ಶ್ ಗುಪ್ತ ಎಂಬ ಈ ಮಗುವಿನ ಚಿಕಿತ್ಸೆಗೆ, ಕ್ರೌಡ್​ಫಂಡಿಂಗ್ ಮೂಲಕ, 62,000 ಕ್ಕೂ ಹೆಚ್ಚು ಜನರು ದೇಣಿಗೆ ನೀಡಿದ್ದರು.

    ಎಸ್​ಎಂಎನ್​1 ಜೀನ್​ನಲ್ಲಿನ ಲೋಪದಿಂದಾಗಿ ಉಂಟಾಗುವ ಸ್ಪೈನಲ್​ ಮಸಲ್​ ಅಟ್ರೋಪಿ(ಎಸ್‌ಎಂಎ) ಖಾಯಿಲೆಯು 10 ಸಾವಿರ ಮಕ್ಕಳಲ್ಲಿ ಒಬ್ಬರಿಗೆ ಕಾಣಿಸಿಕೊಳ್ಳುತ್ತದೆ. ಸ್ನಾಯುಗಳಲ್ಲಿ ದೌರ್ಬಲ್ಯ ಕಾಣಿಸಿಕೊಂಡು ಕ್ರಮೇಣ ಉಸಿರಾಟಕ್ಕೆ ಮತ್ತು ನುಂಗುವುದಕ್ಕೆ ಸಮಸ್ಯೆ ಉಂಟಾಗುತ್ತದೆ. ಭಾರತದಲ್ಲಿ ಹಾಲಿ 800 ಮಕ್ಕಳು ಈ ಖಾಯಿಲೆ ಹೊಂದಿದ್ದು, ಇದಕ್ಕೆ ಮೂರರಷ್ಟು ಮಕ್ಕಳು 2 ವರ್ಷ ಪೂರೈಸುವುದರೊಳಗೆ ಮೃತಪಡುತ್ತಾರೆ ಎನ್ನಲಾಗಿದೆ.

    ಇದನ್ನೂ ಓದಿ: ನಿಮ್ಮ ಮಗುವನ್ನು ಓರಿಯೋ ಸ್ಟಾರ್​ ಮಾಡ್ತೇವೆ ಎಂದು ಲಕ್ಷಾಂತರ ರೂಪಾಯಿ ವಂಚಿಸಿದ ಖದೀಮರು!

    ‘ವಿಶ್ವದ ಅತ್ಯಂತ ದುಬಾರಿ ಔಷಧ’ ಎಂದು ಹೆಸರಿಸಲಾಗಿರುವ ‘ಜೋಲ್​ಗೆನ್​ಸ್ಮಾ’ ಚುಚ್ಚುಮದ್ದನ್ನು ಅಯಾನ್ಶ್​ನ ಜೀನ್​ ಥೆರಪಿಗಾಗಿ ಅಮೆರಿಕದಿಂದ ಆಮದು ಮಾಡಿಕೊಳ್ಳಲಾಯಿತು. ಜೂನ್ 9 ರ ಬುಧವಾರ ಸಿಕಂದರಾಬಾದ್​ನ ರೇನ್ಬೋ ಚಿಲ್ರನ್ಸ್​ ಹಾಸ್ಪಿಟಲ್​ನಲ್ಲಿ ಅವನಿಗೆ ಈ ಸಿಂಗಲ್​ ಡೋಸ್​ ಚುಚ್ಚುಮದ್ದಿನ ಚಿಕಿತ್ಸೆ ನೀಡಲಾಯಿತು.

    ಬಾಲಕನ ಪಾಲಕರಾದ ಯೋಗೇಶ್ ಗುಪ್ತ ಮತ್ತು ರೂಪಲ್ ಗುಪ್ತ, ಈ ವರ್ಷದ ಫೆಬ್ರವರಿಯಿಂದ ತಮ್ಮ ಮಗನ ಚಿಕಿತ್ಸೆಗಾಗಿ ಫಂಡ್​ ರೈಸಿಂಗ್ ಕ್ಯಾಂಪೇನ್​ ನಡೆಸಿದ್ದರು. ಅವರ ಪ್ರಯತ್ನ ಫಲಿಸಿದ್ದು, “ಜಗತ್ತಿನ ಅತ್ಯಂತ ದುಬಾರಿ ಔಷಧಿಯನ್ನು ಒದಗಿಸಿ, ಅಯಾನ್ಶ್​ಗೆ ಜೀವ ನೀಡುವಂತಹ ಉಡುಗೊರೆ ನೀಡಿರುವ ಎಲ್ಲಾ ದಾನಿಗಳಿಗೂ ನಾವು ಚಿರಋಣಿಗಳಾಗಿದ್ದೇವೆ” ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಹಸಿವು ತಾಳದೇ ಕೂದಲನ್ನು ತಿನ್ನುತ್ತಿದ್ದ ಬಾಲಕಿ: ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರಿಗೆ ಕಾದಿತ್ತು ಅಚ್ಚರಿ!

    ‘ಇಂಪ್ಯಾಕ್ಟ್​​ಗುರು.ಕಾಂ’ ಮೂಲಕ ನಡೆದ ಈ ಕ್ರೌಡ್ ಫಂಡಿಂಗ್ ಅಭಿಯಾನದಲ್ಲಿ 62,450 ಜನರಿಂದ 14.84 ಕೋಟಿ ರೂ.ಗಳ ದೇಣಿಗೆ ಸಂಗ್ರಹಿಸಲಾಗಿತ್ತು. ಚಿತ್ರೋದ್ಯಮ ಮತ್ತು ಕ್ರಿಕೆಟ್​ ಲೋಕದ ಹಲವು ಗಣ್ಯರು ಈ ಅಭಿಯಾನಕ್ಕೆ ಸಹಾಯ ಒದಗಿಸಿದ್ದರು. ಈ 16 ಕೋಟಿ ರೂ.ಗಳ ಚುಚ್ಚುಮದ್ದಿನ ಮೇಲೆ ಸಲ್ಲುವ 6 ಕೋಟಿ ರೂ.ಗಳ ಆಮದು ಶುಲ್ಕಕ್ಕೆ, ಮಾನವೀಯತೆ ಆಧಾರದ ಮೇಲೆ, ಕೇಂದ್ರ ಹಣಕಾಸು ಸಚಿವಾಲಯ ವಿನಾಯಿತಿ ನೀಡಿತ್ತು ಎನ್ನಲಾಗಿದೆ.

    ಈ ಮುನ್ನ ಮಾನವೀಯತೆಯ ಆಧಾರದ ಮೇಲೆ ನೋವಾರ್ಟಿಸ್​ ಕಂಪೆನಿ ಇಬ್ಬರು ಮಕ್ಕಳಿಗೆ ಈ ಚುಚ್ಚುಮದ್ದನ್ನು ಉಚಿತವಾಗಿ ಒದಗಿಸಿತ್ತು. ಸಿಕಂದರಾಬಾದ್​​ನ ರೇನ್ಬೋ ಆಸ್ಪತ್ರೆಯಲ್ಲೇ ಆಗಸ್ಟ್​ 2020 ರಲ್ಲಿ ಮತ್ತು ಏಪ್ರಿಲ್ 2021 ರಲ್ಲಿ ಈ ಚಿಕಿತ್ಸೆ ಒದಗಿಸಲಾಗಿತ್ತು ಎನ್ನಲಾಗಿದೆ. (ಏಜೆನ್ಸೀಸ್)

    VIDEO | ನೀರುತುಂಬಿದ ರಸ್ತೆಯಲ್ಲಿ ಕೂರಿಸಿ ಕಂಟ್ರಾಕ್ಟರ್​ಗೆ ಕಸದ ಅಭಿಷೇಕ!

    ಕರೊನಾ ಪರೀಕ್ಷೆ ಮಾಡುವಾಗ ಮೂಗಿನೊಳಗೆ ಮುರಿದ ಸ್ವಾಬ್​ ಸ್ಟಿಕ್! ಇದು ಬಹಳ ನೋವಿನ ಕಥೆ

    ಮಗಳಿಗೆ ಹೇರ್​ಕಟ್​ ಮಾಡಿದ ಮಾಜಿ ಮಿಸ್​ ಯೂನಿವರ್ಸ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts