More

    ಭ್ರಷ್ಟ ಸರ್ಕಾರ ವಜಾಗೊಳ್ಳಲಿ; ಮಾಜಿ ಸಚಿವ ಆರ್.ಅಶೋಕ್ ಆಗ್ರಹ

    ಬೆಂಗಳೂರು: ಐದು ವರ್ಷಗಳ ಜನಾದೇಶ ಪಡೆದ ಕಾಂಗ್ರೆಸ್, ಅಧಿಕಾರಕ್ಕೆ ಬಂದ ನಾಲ್ಕು ತಿಂಗಳಲ್ಲೇ ಅಕ್ರಮ ಹಣ ಪತ್ತೆಯಾಗಿದ್ದು, ರೆಡ್ ಹ್ಯಾಂಡ್ ಆಗಿ‌ ಸಿಕ್ಕಿಬಿದ್ದಿದೆ. ಭ್ರಷ್ಟ ಸರ್ಕಾರವನ್ನು ರಾಜ್ಯಪಾಲರು ವಜಾಗೊಳಿಸಬೇಕು ಎಂದು ಮಾಜಿ ಸಚಿವ ಆರ್.ಅಶೋಕ್ ಆಗ್ರಹಿಸಿದರು.

    ಸ್ವಾತಂತ್ರ್ಯ ಉದ್ಯಾನವನದಲ್ಲಿ ರಾಜ್ಯ ಭ್ರಷ್ಟ ಎಟಿಎಂ ಸರ್ಕಾರದ ವಿರುದ್ಧ ಮಂಗಳವಾರ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಅಭಿವೃದ್ಧಿ‌ ಕಾಮಗಾರಿಗಳ ಬಾಕಿ ಬಿಲ್ ಪಾವತಿಗೆ ತನಿಖೆ ನೆಪವೊಡ್ಡಿದರು. ಪಂಚರಾಜ್ಯಗಳ ಚುನಾವಣೆ ಘೋಷಿಸಿದ ಬೆನ್ನಲ್ಲೇ ಅನುದಾನ ಬಿಡುಗಡೆ ಮಾಡಲಾರಂಭಿಸಿದ್ದಾರೆ. ಐಟಿ ದಾಳಿಯು ಗುತ್ತಿಗೆದಾರ, ಬಿಲ್ಡರ್ ನಿವಾಸದಲ್ಲಿ ಕೋಟ್ಯಂತರ ರೂ ಪತ್ತೆಯಾಗಿದೆ. ಕಾಂಗ್ರೆಸ್ ನ ಲೂಟಿಯ ಪ್ರಮಾಣವನ್ನು ಬಹಿರಂಗವಾಗಿದೆ ಎಂದು ವಾಗ್ದಾಳಿ ಮಾಡಿದರು.

    ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಮಾತನಾಡಿ ಜನರಿಗೆ ಗ್ಯಾರಂಟಿಗಳನ್ನು ಕೊಟ್ಟು, ಕೋಟ್ಯಂತರ ರೂ ಲೂಟಿ ಮಾಡಲಾರಂಭಿಸಿದ್ದಾರೆ. ರೈತರು, ಬಡವರು, ಬರಗಾಲ ಕಡೆಗಣಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಡಿ.ಕೆಂಪಣ್ಣ  ಎಟಿಎಂ

    ಮಾಜಿ ಸಿಎಂ ಡಿ.ವಿ.ಸದಾನಂದಗೌಡ ಮಾತನಾಡಿ ಹಿಂದಿನ ಬಿಜೆಪಿ ಸರ್ಕಾರದ ಬಹುದೊಡ್ಡ ಆರೋಪ ಮಾಡಿದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಈಗ ಕಾಂಗ್ರೆಸ್ ಸರ್ಕಾರದ ಎಟಿಎಂ ಆಗಿ ಪರಿವರ್ತನೆಯಾಗಿದ್ದಾರೆ ಎಂದು ಆರೋಪಿಸಿದರು.

    ಗುತ್ತಿಗೆದಾರ ಅಂಬಿಕಾಪತಿ ಮನೆಯಲ್ಲಿ ಐಟಿ ಅಧಿಕಾರಿಗಳ ತಂಡ 42 ಕೋಟಿ ರೂ.ಗಳ ಅಕ್ರಮ ಹಣವನ್ನು ಪತ್ತೆ ಹಚ್ಚಿದ ಮರು ದಿನವೇ ಡಿ.ಕೆಂಪಣ್ಣ ಸಿಎಂ ಬಳಿಗೆ ದೌಡಾಯಿಸಿದರು. ಮರು ದಿನವೇ ಅಂಬಿಕಾಪತಿ ನಿವಾಸಕ್ಕೆ ಭೇಟಿ ನೀಡಿದ್ದು, ಈ ಅಕ್ರಮ ಮುಚ್ಚಿ ಹಾಕುವ ದಾರಿಯನ್ನು ಸರ್ಕಾರಕ್ಕೆ ತೋರಿಸಿಕೊಡಲು ‘ಕಾಂಗ್ರೆಸ್ ಎಟಿಎಂ’ ಕೆಂಪಣ್ಣ ಪ್ರಯತ್ನಿಸುತ್ತಿದ್ದಾರೆ ಎಂದು ಹರಿಹಾಯ್ದರು.

    ರಾಜ್ಯದ ಬಡ ಜನರು, ರೈತರ, ತೆರಿಗೆ ಹಣವನ್ನು ಲೂಟಿ ಮಾಡುತ್ತಿದ್ದು, ಬರಗಾಲ ಹಾಗೂ ಅಭಿವೃದ್ಧಿ ಕಡೆಗಣಿಸಿದೆ. ಸಿಬಿಐ ಸ್ವಯಂಪ್ರೇರಿತ ದಾವೆ ಹೂಡಬೇಕು. ಇಲ್ಲವೇ ಸಿಎಂ ಸಿದ್ದರಾಮಯ್ಯ ಅವರು ಸಿಬಿಐ ತನಿಖೆಗೆ ಒಪ್ಪಿಸಿ ಸಾಚಾತನ ತೋರಿಸಬೇಕು ಎಂದು ಸದಾನಂದಗೌಡ ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts