More

    ಇಮ್ರಾನ್​ ಖಾನ್​​ ಸರ್ಕಾರದ ವಿರುದ್ಧ ಸ್ವದೇಶಿಗರಿಂದಲೇ ಟೀಕಾ ಪ್ರಹಾರ: ಕರೊನಾ ಹೋರಾಟ ಕೈಚೆಲ್ಲಿ ಕುಳಿತ ಪಾಕ್​

    ಇಸ್ಲಮಾಬಾದ್​: ಕರೊನಾ ವೈರಸ್​ ವಿಚಾರದಲ್ಲಿ ವಿಳಂಬ ನೀತಿ ಅನುಸರಿಸಿದ ಇಮ್ರಾನ್​ ಖಾನ್​ ನೇತೃತ್ವದ ಪಾಕ್​ ಸರ್ಕಾರಕ್ಕೆ ಸ್ವದೇಶಿ ಹಾಗೂ ವಿದೇಶಿಗರಿಂದ ಬಹಳ ಟೀಕೆ ವ್ಯಕ್ತವಾಗುತ್ತಿವೆ.

    ಯಾವುದೇ ಸ್ಕ್ರೀನಿಂಗ್​ ಮತ್ತು ಕ್ವಾರಂಟೈನ್​ನಂತಹ ಕ್ರಮಗಳನ್ನು ತೆಗದುಕೊಳ್ಳದ ಕಾರಣ ಪಾಕ್​ನಲ್ಲಿ ಕರೊನಾ ವೇಗವಾಗಿ ಹರಡಿದೆ. ಈವರೆಗೆ 2400 ಮಂದಿಗೆ ಸೋಂಕು ತಗುಲಿದ್ದು, 34 ಮಂದಿ ಸಾವಿಗೀಡಾಗಿದ್ದಾರೆ.

    ಹೆಚ್ಚು ಪ್ರಕರಣಗಳು ಕರೊನಾ ಬಾಧಿತ ಇರಾನ್​ನಿಂದ ಮರಳಿದ ಶಿಯಾ ಯಾತ್ರಿಗಳಲ್ಲಿ ಕಂಡುಬಂದಿದೆ. ಯಾತ್ರಿಗಳನ್ನು ಸ್ಕ್ರೀನಿಂಗ್​ಗೆ ಒಳಪಡಿಸದೇ ಬಲಚೂಸ್ತಾನ್​ ಗಡಿಯಲ್ಲಿನ ಶಿಬಿರಗಳಲ್ಲಿ ಆಶ್ರಯ ನೀಡಿದ್ದರಿಂದ ನೂರಾರು ಮಂದಿಗೆ ಸೋಂಕು ತಕ್ಷಣ ಹರಡಿದೆ. ಅಲ್ಲದೆ, ಶಿಬಿರದಲ್ಲಿ ಯಾವುದೇ ವೈದ್ಯಕೀಯ ಸೌಲಭ್ಯ ಕೂಡ ಇಲ್ಲದಿರುವುದು ಕಂಡುಬಂದಿದೆ.

    ಶುಕ್ರವಾರದ ಪ್ರಾರ್ಥನೆಗಾಗಿ ಮಸೀದಿಗಳ ಬಳಿ ಜನ ಸೇರುತ್ತಾರೆಂಬುದನ್ನು ತಿಳಿದರೂ ಲಾಕ್​ಡೌನ್​ನಂತಹ ಕಠಿಣ ಕ್ರಮಗಳನ್ನು ಪಾಕ್​ ಸರ್ಕಾರ ತೆಗೆದುಕೊಳ್ಳಲಿಲ್ಲ. ಆದರೆ, ಸೌದಿ ಅರೇಬಿಯಾದಂತಹ ರಾಷ್ಟ್ರದಲ್ಲಿ ಬಹುದೊಡ್ಡ ಮಸೀದಿ ಮೆಕ್ಕಾವನ್ನೇ ಲಾಕ್​ಡೌನ್​ ಮಾಡಿ ಉಮ್ರಾ ಯಾತ್ರಿಗಳನ್ನು ತಡೆಯಿಡಿಲಾಯಿತು. ಆದರೆ, ಇಂತಹ ಕಠಿಣ ಕ್ರಮಗಳನ್ನು ಪಾಕ್​ನಲ್ಲಿ ತೆಗೆದುಕೊಳ್ಳಲಿಲ್ಲ ಎಂದು ತಮ್ಮ ಸರ್ಕಾರದ ವಿರುದ್ಧವೇ ಪಾಕ್​ ಜನರು ತಿರುಗಿ ಬಿದ್ದಿದ್ದಾರೆ.

    ಮಾರ್ಚ್​ ತಿಂಗಳ ಆರಂಭದಲ್ಲಿ ದೇಶದಲ್ಲಿ 19 ಕೋವಿಡ್​ ಪ್ರಕರಣಗಳು ವರದಿಯಾಗಿತ್ತು. ಹೀಗಿದ್ದರೂ ವಿದೇಶದಿಂದ ಬಂದವರು ಸೇರಿದಂತೆ ಸುಮಾರು 250,000 ಪುರುಷರು ಲಾಹೋರ್​ ಬಳಿಯ ರೈವಿಂಡ್​ ತಬ್ಲಿಘಿ ಜಮಾತ್​ ಧಾರ್ಮಿಕ ಕಾರ್ಯಕ್ರಮ ನಿಮಿತ್ತ 5 ದಿನಗಳ ಕಾಲ ಒಟ್ಟುಗೂಡಿದ್ದರು. ಆದರೆ, ಇದಕ್ಕೆ ಸಾರ್ವಜನಿಕರ ವ್ಯಾಪಕ ವಿರೋಧವು ಕೂಡ ಕೇಳಿಬಂದಿತ್ತು.

    ಜಮಾತ್​ನಲ್ಲಿ ಪಾಲ್ಗೊಂಡಿದ್ದ ವಿವಿಧ ದೇಶದ 550 ಸದಸ್ಯರನ್ನು ಆಯಾ ದೇಶಗಳಲ್ಲಿ ಕ್ವಾರಂಟೈನ್​ಗೆ ಗುರಿಪಡಿಸಲಾಗಿದೆ. ಚೀನಾದ ನಾಗರಿಕರೊಬ್ಬರಲ್ಲಿ ಪಾಸಿಟಿವ್​ ವರದಿ ಕಂಡುಬಂದಿದ್ದರಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಹೀಗಾಗಿ ವಿದೇಶದಲ್ಲೂ ಪಾಕ್​ ಕ್ರಮದ ಬಗ್ಗೆ ಆಕ್ಷೇಪ ಕೇಳಿಬಂದಿದೆ. ಇಸ್ಲಾಮಿಕ್​ ಸಂಘಟನೆಗಳ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ ಎಂಬ ಭಯದಿಂದ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಪಾಕ್​ ಸರ್ಕಾರ ಹಿಂದೇಟು ಹಾಕಿದೆ. ಹೀಗಾಗಿ ಪಾಕ್​ನಲ್ಲಿ ಸೋಂಕು ಪ್ರಕರಣಗಳು ಏರಿಕೆಯಾಗುತ್ತಿವೆ. (ಏಜೆನ್ಸೀಸ್​)

    ಸೋಂಕು ಹರಡುವಿಕೆಗೆ ಯಾವುದೇ ಸಮುದಾಯವನ್ನು ಗುರಿ ಮಾಡುವುದು ಸರಿಯಲ್ಲ: ಸದ್ಗುರು

    ಜನಿಸಿದ ಅವಳಿ ಮಕ್ಕಳಿಗೆ ಕರೊನಾ, ಕೋವಿಡ್​ ಎಂದು ಹೆಸರಿಡಲು ರಾಯ್​ಪುರ್​ ದಂಪತಿ ಕೊಟ್ಟ ಕಾರಣ ಹೀಗಿದೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts