More

    ಜನಿಸಿದ ಅವಳಿ ಮಕ್ಕಳಿಗೆ ಕರೊನಾ, ಕೋವಿಡ್​ ಎಂದು ಹೆಸರಿಡಲು ರಾಯ್​ಪುರ್​ ದಂಪತಿ ಕೊಟ್ಟ ಕಾರಣ ಹೀಗಿದೆ…

    ರಾಯ್​ಪುರ್​: ಕರೊನಾ ವೈರಸ್ ಎಂಬ ಸಾಂಕ್ರಮಿಕ ಮಹಾಮಾರಿ ಇಡೀ ಜಗತ್ತನ್ನೇ ಆವರಿಸಿ ಮೃತ್ಯು ಕೇಕೆ ಹಾಕುತ್ತಿದೆ. ಇಂತಹ ಸಂದರ್ಭದಲ್ಲೂ ಧೈರ್ಯಗೆಡದ ಛತ್ತೀಸ್​ಗಢದ ದಂಪತಿ ಜನಿಸಿದ ಅವಳಿ ಮಕ್ಕಳಿಗೆ ‘ಕರೊನಾ’ ಮತ್ತು ‘ಕೋವಿಡ್​’ ಎಂದು ನಾಮಕರಣ ಮಾಡಿ ವಿಭಿನ್ನತೆ ಮೆರೆದಿದ್ದಾರೆ. ​

    ಈ ಎರಡು ಪದ ಇಂದು ಇಡೀ ಜಗತ್ತನೇ ನಡುಗಿಸುತ್ತಿದೆ. ಜನರನ್ನು ಸೋಂಕಿಗೆ ದೂಡುತ್ತಾ ಮೃತ್ಯುಕೂಪಕ್ಕೆ ಸೆಳೆದುಕೊಳ್ಳುತ್ತಿರುವ ಕರೊನಾ ಅಥವಾ ಕೋವಿಡ್​ ಹೆಸರನ್ನು ರಾಯ್​ಪುರ್​ ದಂಪತಿ ವಿಜಯದ ಸಂಕೇತವಾಗಿ ತಮ್ಮ ಮಕ್ಕಳಿಗೆ ಇಟ್ಟಿದ್ದಾರೆ. ಜಗತ್ತು ಆರೋಗ್ಯ ಬಿಕ್ಕಟ್ಟಿನಲ್ಲಿರುವ ಸಂದರ್ಭದಲ್ಲೂ ಅವಳಿ ಮಕ್ಕಳು ಜನಿಸಿರುವುದು ದಂಪತಿಗೆ ವಿಜಯದ ಸಂಕೇತವಾಗಿದೆ. ದಂಪತಿಗೆ ಒಂದು ಗಂಡು(ಕೋವಿಡ್​) ಮತ್ತು ಹೆಣ್ಣು(ಕರೊನಾ) ಮಗು ಜನಿಸಿದೆ.

    ಮಾರ್ಚ್​ 26-27ರ ನಡುರಾತ್ರಿ ರಾಯ್​ಪುರ್​ ಸರ್ಕಾರಿ ಆಸ್ಪತ್ರೆಯಲ್ಲಿ ಅವಳಿ ಮಕ್ಕಳು ಜನಿಸಿದ್ದಾರೆ. ಕರೊನಾದ ಕರಾಳತೆ ಮತ್ತು ಅದನ್ನು ತಡೆಗಟ್ಟಲು ಹೇರಲಾಗಿದ್ದ ಲಾಕ್​ಡೌನ್​ ಅನ್ನು ಜಯಿಸಿ, ಯಶಸ್ವಿಯಾಗಿ ಮಕ್ಕಳಿಗೆ ಜನ್ಮ ನೀಡಿದ ನೆನಪು ಸದಾ ಮನಸ್ಸಿನಲ್ಲಿ ಉಳಿಯಲಿ ಎಂದು ಹೆಸರಿಟ್ಟಿರುವುದಾಗಿ ದಂಪತಿ ತಿಳಿಸಿದ್ದಾರೆ. ಅಲ್ಲದೆ, ಮುಂದಿನ ದಿನಗಳಲ್ಲಿ ತಮ್ಮ ನಿರ್ಧಾರವನ್ನು ಬದಲಿಸಿ, ಮರುನಾಮಕರಣ ಮಾಡುವ ಸಾಧ್ಯತೆಯೂ ಇದೆ ಎಂದಿದ್ದಾರೆ.

    ಕರೊನಾ ವೈರಸ್​ ನಿಜವಾಗಿಯೂ ಅಪಾಯಕಾರಿಯಾಗಿದೆ. ಆದರೆ, ಸಾಕಷ್ಟು ಮಂದಿ ನೈರ್ಮಲ್ಯತೆ, ಆರೋಗ್ಯ ಮತ್ತು ಉತ್ತಮ ಆಹಾರ ಪದ್ಧತಿ ಬಗ್ಗೆ ಚಿಂತಿಸುವಂತೆ ಮಾಡಿದೆ. ಮಕ್ಕಳ ಜನನಕ್ಕೂ ಮುಂದೆ ನನ್ನ ಪತಿ ಸಾಕಷ್ಟು ಕಷ್ಟಗಳನ್ನು ಅನುಭವಿಸಿದರು. ಹೀಗಾಗಿ ಈ ದಿನ ನೆನಪಿನಲ್ಲಿರಲಿ ಎಂಬ ಉದ್ದೇಶದಿಂದ ಹೆಸರನ್ನು ಇಡಲಾಗಿದೆ ಎಂದು ತಿಳಿಸಿದ್ದಾರೆ.

    ಆಸ್ಪತ್ರೆಯ ಸಿಬ್ಬಂದಿ ಕೂಡ ಮಕ್ಕಳನ್ನು ಕೋವಿಡ್​ ಮತ್ತು ಕರೊನಾ ಎಂದು ಕರೆಯಲು ಆರಂಭಿಸಿದರು. ಕೊನೆಯದಾಗಿ ಇದೇ ಹೆಸರನ್ನಿಡಲು ನಿರ್ಧರಿಸಿದೆವು ಎಂದು ದಂಪತಿ ಹೇಳಿದರು. (ಏಜೆನ್ಸೀಸ್​)

    ಚೀನಾ ವಿರುದ್ಧ ಐಸಿಜೆಯಲ್ಲಿ ಪ್ರಶ್ನಿಸಿ, 500 ಬಿಲಿಯನ್​ ಡಾಲರ್​ ಪರಿಹಾರ ಕೇಳಿ: ಪ್ರಧಾನಿಗೆ ಕಾನೂನು ಪರಿಣಿತರಿಂದ ಸಲಹಾ ಪತ್ರ

    ಮತ್ತೆ ತತ್ತರಿಸಿತು ಷೇರುಪೇಟೆ- ಸೆನ್ಸೆಕ್ಸ್ 400 ಅಂಶ ಕುಸಿದರೆ, ನಿಫ್ಟಿ 8,200ರ ಕೆಳಕ್ಕೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts