More

    ಹಬ್ಬಗಳ ಹೆಸರಲ್ಲಿ ಗಲಭೆ ಸೃಷ್ಠಿಸದಿರಿ

    ಗುರುಗುಂಟಾ: ಕಾನೂನು ಸುವ್ಯವಸ್ಥೆ ಕಾಪಾಡಲು ಭಾವೈಕ್ಯತೆಯಿಂದ ಹಬ್ಬಗಳನ್ನು ಆಚರಿಸಿ ಎಂದು ಹಟ್ಟಿಚಿನ್ನದಗಣಿ ಪೊಲೀಸ್ ಠಾಣೆ ಪಿಐ ಹೊಸಕೇರಪ್ಪ ಹೇಳಿದರು.

    ಇದನ್ನೂ ಓದಿ: ಭಾವೈಕ್ಯದಿಂದ ಹಬ್ಬಗಳನ್ನು ಆಚರಿಸಿ

    ಸ್ಥಳೀಯ ಪೊಲೀಸ್ ಉಪಠಾಣೆಯಲ್ಲಿ ಯುಗಾದಿ ಮತ್ತು ರಂಜಾನ್ ಹಬ್ಬಗಳ ಅಂಗವಾಗಿ ಸೋಮವಾರ ಏರ್ಪಡಿಸಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದರು.
    ಹಬ್ಬಗಳ ನೆಪದಲ್ಲಿ ಕೋಮುವಾದ ಸೃಷ್ಠಿಸಿ ಗಲಭೆಗಳಿಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.

    ರಂಜಾನ್ ಹಬ್ಬದ ದಿನದಂದೇ ಯುಗಾದಿ ಹೋಳಿ ಇರುವುದರಿಂದ ಮುಸ್ಲಿಂ ಬಾಂಧವರು ಈದ್ಗ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಮನೆಗೆ ತೆರಳುವವರೆಗೂ ಬಣ್ಣ ಹಾಕುವಂತಿಲ್ಲ ಎಂದು ಎಚ್ಚರಿಸಿದರು.

    ಹಿಂದೂ ಸಮಾಜದ ಪ್ರಮುಖರಾದ ಅಮರೇಶ ನಾಯಕ ರತ್ನಗಿರಿ, ಭೀಮಣ್ಣ ಹುಜರತಿ, ಬಸಣ್ಣ ಭೋವಿ, ಗುರುಬಸವನಾಯಕ, ಹನುಮಂತ ಅಂಬಿಗೇರ, ರಮೇಶ ಕೆಂಪ, ಪೇದೆ ಪ್ರಭುಗೌಡ ಪಾಟೀಲ, ಮುಸ್ಲಿಂ ಪ್ರಮುಖರಾದ ಸೈಯದ್ ಜಾಫರ ಹುಸೇನ ಖಾಜಿ,

    ಸೈಯದ್ ಮೀರ್ ಶಹಾ ಹುಸೇನ್ ಖಾಜಿ, ಜಾಮಿಯಾ ಮಸೀದಿ ಅಧ್ಯಕ್ಷ ಅಬೀದುಲ್ಲಾ ಹವಾಲ್ದಾರ, ಬಾಬು ದಿಡ್ಡಿಮನಿ, ಸೈಯದ ಇಸ್ಮಾಯಿಲ್, ಡಾ.ಚಾಂದಪಾಷಾ, ಬಬಲು, ನಬಿಚೋಪದಾರ, ಕರೀಮಸಾಬ ಜಬಡಿ, ಜಾಕೀರ್, ಲಖನ್ ಬಾಬು, ಮೀರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts