More

    ಸೋಂಕು ಹರಡುವಿಕೆಗೆ ಯಾವುದೇ ಸಮುದಾಯವನ್ನು ಗುರಿ ಮಾಡುವುದು ಸರಿಯಲ್ಲ: ಸದ್ಗುರು

    ನವದೆಹಲಿ: ಕರೊನಾ ವೈರಸ್‌ ತಡೆಗಟ್ಟಲು ಜಾತಿ, ಮತ, ಧರ್ಮ ಎಲ್ಲವನ್ನೂ ಮೀರಿ ಎಲ್ಲರೂ ಶ್ರಮಿಸಬೇಕಾದ ಅಗತ್ಯವಿದೆ. ಈ ಸೋಂಕು ತಗುಲಲು ಯಾವುದೇ ನಿರ್ದಿಷ್ಟ ಸಮದಾಯವನ್ನು ಗುರಿಯಾಗಿಸುವುದು ಯಾವುದೇ ಕಾರಣಕ್ಕೂ ಸರಿಯಲ್ಲ ಎಂದು ಸದ್ಗುರು ಜಗ್ಗಿ ವಾಸುದೇವ ಹೇಳಿದ್ದಾರೆ.

    ತಮ್ಮ ಟ್ವಿಟರ್‌ ಖಾತೆಯಲ್ಲಿ ವೀಡಿಯೋ ಅಪ್‌ಲೋಡ್‌ ಮಾಡುವ ಮೂಲಕ ಅವರು ಈ ಸಂದೇಶ ನೀಡಿದ್ದಾರೆ. ‘ವೈರಸ್‌ಗೆ ಯಾವುದೇ ಜಾತಿ, ಮತ, ಧರ್ಮದ ಅರಿವಿಲ್ಲ. ಸೋಂಕು ಯಾರಿಗೆ ಬೇಕಾದರೂ ತಗುಲಬಹುದು. ಇವುಗಳ ಹೆಸರಿನಲ್ಲಿ ಸಮಾಜದಲ್ಲಿ ಒಡಕು ಮೂಡಿಸುವುದು ಸರಿಯಲ್ಲ. ಅದರ ಬದಲು ಎಲ್ಲರೂ ಒಂದಾಗಿ ಹೋರಾಟ ಮಾಡುವ ಅವಶ್ಯಕತೆ ಇದೆ. ಇದು ತುರ್ತಾಗಿ ಆಗಬೇಕಾಗಿರುವ ಕಾರ್ಯ’ ಎಂದಿದ್ದಾರೆ.

    ’ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ವೈರಸ್‌ ತಡೆಗಟ್ಟಲು ಪ್ರಯತ್ನಿಸಿ. ಯಾವುದೇ ಕಾರಣಕ್ಕೂ ಸುಳ್ಳು ಸುದ್ದಿ ಹರಡಲು ಆಸ್ಪದ ನೀಡಬೇಡಿ. ಎಂದು ಈಗ ನಾವೆಲ್ಲಾ ಬಹಳ ಎಚ್ಚರಿಕೆಯಿಂದ ಇರುವ ಸಮಯ ಬಂದಿದೆ. ಜನರಿಗೆ ಸುಮ್ಮನೆ ಭೀತಿ ಹುಟ್ಟಿಸುವ ಪೋಸ್ಟ್‌ಗಳನ್ನು ಶೇರ್‌ ಮಾಡುವ ಮೂಲಕ ಆತಂಕ ಸೃಷ್ಟಿಸುವ ಸಮಯ ಇದಲ್ಲ. ಈ ವೈರಸ್‌ನ ಗಂಭೀರತೆಯನ್ನು ಅರಿತು ಎಲ್ಲರೂ ಒಗ್ಗಟ್ಟಾಗಿ ಅದನ್ನು ಹೊಡೆದೋಡಿಸೋಣ’ ಎಂದು ಸದ್ಗುರು ಕಿವಿಮಾತು ಹೇಳಿದ್ದಾರೆ.

    ನಿಜಾಮುದ್ದೀನ್ ಮಸೀದಿಯಲ್ಲಿ ನಡೆದ ಸಭೆಯ ಕುರಿತು ಬರುತ್ತಿರುವ ವರದಿಗಳ ಬೆನ್ನಲ್ಲೇ ಸದ್ಗುರು ಈ ಟ್ವೀಟ್‌ ಮಾಡಿದ್ದಾರೆ. (ಏಜೆನ್ಸೀಸ್​)

    ಎಷ್ಟೇ ಬೇಡಿಕೊಂಡರು ಮಗುವಿನ ತಂದೆಗೆ ಅಮಾನವೀಯವಾಗಿ ಥಳಿಸಿದ್ದ ಪೊಲೀಸ್‌ ಅಧಿಕಾರಿ ಅಮಾನತು

    ವ್ಯಾಟ್​ ಹೆಚ್ಚಳದಿಂದ ಇಂಧನ ದರದಲ್ಲಿ ಭಾರಿ ಏರಿಕೆ: ಯಾವ್ಯಾವ ನಗರದಲ್ಲಿ ಪೆಟ್ರೋಲ್​, ಡೀಸೆಲ್​ ಬೆಲೆ ಎಷ್ಟಿದೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts